Advertisement

UI Teaser: ‘ಯುಐʼ ಲೋಕಕ್ಕೆ ಉಪ್ಪಿಯೇ ಅಧಿಪತಿ.. ಸಖತ್‌ ಕುತೂಹಲ ಹುಟ್ಟಿಸಿದ ಟೀಸರ್

11:12 AM Jan 08, 2024 | Team Udayavani |

ಬೆಂಗಳೂರು: ರಿಯಲ್‌ ಸ್ಟಾರ್‌ ಉಪೇಂದ್ರ ಬಹು ಸಮಯದ ಬಳಿಕ ಡೈರೆಕ್ಟರ್‌ ಕ್ಯಾಪ್‌ ತೊಟ್ಟು, ಅಭಿನಯಿಸಿರುವ ಪ್ಯಾನ್‌ ಇಂಡಿಯಾ ʼಯುಐʼ ಸಿನಿಮಾದ ಬಹು ನಿರೀಕ್ಷಿತ ಎರಡನೇ ಟೀಸರ್‌ ಸೋಮವಾರ(ಜ.8 ರಂದು) ರಿಲೀಸ್‌ ಆಗಿದೆ.

Advertisement

ಟೀಸರ್‌ ಸಂಭ್ರಮಕ್ಕೆ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌, ಡಾಲಿ ಧನಂಜಯ ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಜೊತೆಯಾಗಿದ್ದು, ಕಿಚ್ಚ ಸುದೀಪ್‌ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವುದರಿಂದ, ಸೋಶಿಯಲ್‌ ಮೀಡಿಯಾ ಮೂಲಕ ಟೀಸರ್‌ ರಿಲೀಸ್‌ ಮಾಡಿ, ಉಪ್ಪಿ ʼಯುಐʼಗೆ ಸಾಥ್‌ ನೀಡಿದ್ದಾರೆ.

ಉಪೇಂದ್ರ ಅಂದ್ಮೇಲೆ ಅಲ್ಲಿ ತಲೆಗ ಹುಳು ಬಿಡುವ ಅಂಶಗಳಿರುತ್ತವೆ. ಅದರಂತೆ ಟೀಸರ್‌ ಎಂದು ಬರೀ ಕತ್ತಲೆಯಲ್ಲಿ ಸೌಂಡ್‌ ಹಾಕಿ ಇದೇ ಟೀಸರ್‌ ಎಂದು ಪ್ರೇಕ್ಷಕರ ತಲೆ ಓಡುವಂತೆ ಮಾಡಿದ್ದರು. ಇದಾದ ಬಳಿಕ ಕುದುರೆ ಹೆಜ್ಜೆ ತೋರಿಸಿ ಟೀಸರ್‌ ಡೇಟ್‌ ಗೆಸ್‌ ಮಾಡಿ ಎಂದಿದ್ದರು.

ಅಂತೂ ಎಲ್ಲರೂ ಕಾಯುತ್ತಿದ್ದ‌ ʼಯುಐʼ ಟೀಸರ್‌ ರಿಲೀಸ್‌ ಆಗಿದೆ. ಮೊದಲ ದೃಶ್ಯದಲ್ಲಿ ಎರಡು ವಿಭಿನ್ನ ಜೀವಿಗಳು ದೂರದೂರನ್ನು ನೋಡುವ ನೋಟವನ್ನು ತೋರಿಸಲಾಗಿದೆ. ಅವತಾರ್‌ ಸಿನಿಮಾದಲ್ಲಿರುವ ಜೀವಿಗಳ ಹಾಗೆ ತೋರುತ್ತಾರೆ. ಇದು ಎಐ ವರ್ಲ್ಡ್‌ ಅಲ್ಲ ಯುಐ ವರ್ಲ್ಡ್‌ ಎಂದು, ತಮ್ಮದೇ ಆದ ಜಗತ್ತನ್ನು ತೋರಿಸಿದ್ದಾರೆ. ಇಲ್ಲಿ ಒಂದು ಜಗತ್ತಿದೆ. ಆ ಜಗತ್ತಿಗೆ ಒಬ್ಬ ಸೇನಾದಿಪತಿ, ದೇವ, ಸೈನ್ಯವೇ ಇದೆ. ಉಪ್ಪಿ ಕೊಂಬು ಇರುವ ಕುದುರೆ ಏರಿ ಬಂದಿದ್ದಾರೆ. ರವಿ ಶಂಕರ್‌ ಹಾಗೂ ಸಾಧಕೋಕಿಲ ಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಮೇಲ್ನೋಟಕ್ಕೆ ಇದೊಂದು ವಿಭಿನ್ನ ಕಂಟೆಂಟ್‌ ವುಳ್ಳ ಸಿನಿಮಾದಂತೆ ಕಾಣಿಸುತ್ತದೆ. ಕಥೆಯೊಳಗೊಂದು ಕಥೆ ಇದೆ ಎನ್ನುವುದು ಕಾಣುತ್ತದೆ.

Advertisement

ಈ ಸಿನಿಮಾದಲ್ಲಿ ಉಪ್ಪಿಗೆ ರೀಷ್ಮಾ ನಾಣಯ್ಯ ನಾಯಕಿಯಾಗಿದ್ದಾರೆ. ಲಹರಿಯ ಮೋಹನ್‌ ನಾಯ್ಡು – ಕೆ.ಪಿ ಶ್ರೀಕಾಂತ್‌ ಸಿನಿಮಾಕ್ಕೆ ಬಂಡವಾಳ ಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next