Advertisement

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಯಿತು ರಿಯಲ್‌ ಮಿ ಎಕ್ಸ್ 2 ಪ್ರೊ

10:17 AM Nov 21, 2019 | Team Udayavani |

ಹೊಸದಿಲ್ಲಿ: ಚೀನದ ಸ್ಮಾರ್ಟ್‌ ಫೋನ್‌ ತಯಾರಿಕಾ ಕಂಪನಿಯಾದ ರಿಯಲ್‌ ಮಿ ಈಗಾಗಲೇ ದೇಶಿಯ ಮಾರುಕಟ್ಟೆಯಲ್ಲಿ ತನ್ನ ಟ್ರೆಂಡ್‌ ಸೆಟ್‌ ಮಾಡಿದ್ದು, ವಿವಿಧ ಆವೃತ್ತಿಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದೆ. ಇದೀಗ ಈ ಸಾಲಿಗೆ ಬಹುನಿರೀಕ್ಷಿತ ರಿಯಲ್‌ ಮಿ ಎಕ್ಸ್ 2 ಪ್ರೊ ಆವೃತ್ತಿಯ ಮೊಬೈಲ್‌ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದ್ದು, ಫ್ಲ್ಯಾಗ್‌ಶಿಫ್ ಮಾದರಿಯಲ್ಲಿ ಗುರುತಿಸಿಕೊಂಡಿರುವ ಈ ಸ್ಮಾರ್ಟ್‌ ಫೋನ್‌ ಹಿಂಬದಿಯಲ್ಲಿ 64ಎಂಪಿ ಕ್ಯಾಮೆರಾದೊಂದಿಗೆ ಹಲವಾರು ಆಕರ್ಷಕ ಗುಣಲಕ್ಷಣಗಳುವೆ.

Advertisement

ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ
“ರಿಯಲ್‌ ಮಿ ಎಕ್ಸ್‌2 ಪೊ›’ನ ಡಿಸ್‌ಪ್ಲೇ ಡಿಸೈನ್‌ 1080/2400 ಪಿಕ್ಸಲ್‌ ರೆಸಲ್ಯೂಶನ್‌ ಸಾಮರ್ಥ್ಯದೊಂದಿಗೆ 6.5 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ.

855 ಸ್ನ್ಯಾಪ್‌ಡ್ರಾಗನ್‌
ಸ್ನ್ಯಾಪ್‌ಡ್ರಾಗನ್‌ 855 ಪೊ›ಸೆಸರ್‌ ಸಾಮರ್ಥ್ಯವನ್ನು ಹೊಂದಿದ್ದು, ಆಂಡ್ರಾಯ್ಡ್ 9 ಪೈ ಓಎಸ್‌ ಸಪೋರ್ಟ್‌ ನೀಡಲಾಗಿದೆ. ಜತೆಗೆ 8ಜಿಬಿ/ 128ಜಿಬಿ ಮತ್ತು 12ಜಿಬಿ /256ಜಿಬಿ ವೇರಿಯಂಟ್‌ ಸಾಮರ್ಥ್ಯದ ಎರಡು ಆಯ್ಕೆಗಳು ಲಭ್ಯವಿದೆ.

ಫಾಸ್ಟ್‌ ಚಾರ್ಜಿಂಗ್‌ ತಂತ್ರಜ್ಞಾನ
ಈ ಸ್ಮಾರ್ಟ್‌ ಫೋನ್‌ ವಿಒಒಸಿ ಮಾದರಿಯ ಫಾಸ್ಟ್‌ ಚಾರ್ಜಿಂಗ್‌ ತಂತ್ರಜ್ಞಾನವನ್ನು ಒಳಗೊಂಡಿದ್ದು, 4,000ಎಂಎಹೆಚ್‌ ಸಾಮರ್ಥ್ಯದ ಬ್ಯಾಟರಿ ಕೆಪಾಸಿಟಿ ಇದ್ದು, ಇದರೊಂದಿಗೆ 50ಡಬ್ಲೂ ವಿಒಒಸಿ ಫಾಸ್ಟ್‌ ಚಾರ್ಜಿಂಗ್‌ ಸೌಲಭ್ಯವಿದೆ.

ಉತ್ತಮ ಬ್ಯಾಟರಿ ಬ್ಯಾಕ್‌ಅಪ್‌
ಕೇವಲ 35 ನಿಮಿಷದಲ್ಲಿ ಪೂರ್ಣ ಚಾರ್ಜ್‌ ಪಡೆದುಕೊಳ್ಳುವ ಸಾಮರ್ಥ್ಯ ಈ ಸ್ಮಾರ್ಟ್‌ಪೋನ್‌ಗೆ ಇದ್ದು, ಅತ್ಯತ್ತಮ ಬ್ಯಾಟರಿ ಬ್ಯಾಕ್‌ಅಪ್‌ ನೀಡಲಿದೆ. ಹಾಗೆಯೇ ಬ್ಲೂಟೂತ್‌, ವೈಫೈ, ಜಿಎಸ್‌ಪಿ ಸೇರಿದಂತೆ ಅಗತ್ಯ ಫೀಚರ್ಗಳನ್ನು ಒಳಗೊಂಡಿದೆ.

Advertisement

ಬೆಲೆ ಎಷ್ಟು
ರಿಯಲ್‌ ಮಿ ಎಕ್ಸ್‌ 2 ಪೊ› ಸ್ಮಾರ್ಟ್‌ಫೋನ್‌ ಎರಡು ವೇರಿಯಂಟ್‌ಗಳಲ್ಲಿ ಬಿಡುಗಡೆಯಾಗಿದ್ದು, 8ಜಿಬಿ / 128ಜಿಬಿ ಸ್ಟೋರೇಜ್‌ ವೇರಿಯಂಟ್‌ ಬೆಲೆಯು ದೇಶಿಯ ಮಾರುಕಟ್ಟೆಯಲ್ಲಿ ಈ ಆವೃತ್ತಿಯ 29,999 ರೂ.ಗಳಾಗಿದ್ದು, ಹಾಗೂ 12ಜಿಬಿ / 256ಜಿಬಿ ವೇರಿಯಂಟ್‌ 33,999ರೂ.ಗಳ ಪ್ರೈಸ್‌ಟ್ಯಾಗ್‌ ಅನ್ನು ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next