Advertisement

ನಿಜವಾದ ‘ಚಾಯ್ ವಾಲಾ’ ನಮ್ಮೊಂದಿಗಿದ್ದಾರೆ : ಪ್ರಿಯಾಂಕಗೆ ರಾಜನಾಥ್ ಸಿಂಗ್ ಚಾಟಿ ಏಟು

06:45 PM Mar 23, 2021 | Team Udayavani |

ನವ ದೆಹಲಿ : ಯಾರು ಮೋದಿಯವರನ್ನು ಚಾಯ್ ವಾಲ ಎಂದು ಕರೆದಿದ್ದರೋ ಅವರೆ ಇಂದು ಚಹಾದ ಎಲೆಗಳನ್ನು ಕೀಳುತ್ತಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್,  ರಾಷ್ಟ್ರೀಯ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಅವರನ್ನು ಪರೋಕ್ಷವಾಗಿ ಕುಟುಕಿದ್ದಾರೆ.

Advertisement

ಈ ಹಿಂದೆ ನಮ್ಮ ಪ್ರಧಾನಿಯವರನ್ನು ಯಾರು ಚಾಯ್ ವಾಲಾ ಎಂದು ಕರೆದಿದ್ದರೋ ಅವರೇ ಇಂದು ಚಹಾದ ಎಲೆಗಳನ್ನು ಕೀಳುತ್ತಿದ್ದಾರೆ, ಮಾರುತ್ತಿದ್ದಾರೆ. ಚಹಾ ತೋಟಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಾರೆ. ಆದರೇ, ಜಾಗರೂಕತರಾಗಿರಿ, ನಿಜವಾದ ಹಾಗೂ ಪ್ರಾಮಾಣಿಕೃತ ‘ಚಾಯ್ ವಾಲಾ’ ನಮ್ಮೊಂದಿಗಿದ್ದಾರೆ ಎಂದು ಸಿಂಗ್ ಹೇಳಿದ್ದಾರೆ.

ಓದಿ :  ಸಿಡಿ ವಿಚಾರವಾಗಿ ಸದನದ ಚರ್ಚೆಯಲ್ಲಿ ನಾನೂ ಭಾಗಿಯಾಗಬೇಕಿತ್ತು : ಬಾಲಚಂದ್ರ ಜಾರಕಿಹೊಳಿ

ಅಸ್ಸಾಂ ನ ಚುನಾವಾಣಾ ಮತ ಪ್ರಚಾರದ ಸಂದರ್ಭದಲ್ಲಿ ಪ್ರಿಯಾಂಕ ಗಾಂಧಿ ವಾದ್ರಾ ಮಾರ್ಚ್ 2 ರಂದು ಬಿಸ್ವಂತ್ ನಲ್ಲಿ ಚಹಾ ತೋಟದ ಕೆಲಸಗಾರರೊಂದಿಗೆ ತೊಡಗಿಸಿಕೊಂಡಿದ್ದರು. ರಾಷ್ಟ್ರೀಯ ಕಾಂಗ್ರೆಸ್ ನ ಅಧಿಕೃತ ಟ್ವೀಟರ್ ನಲ್ಲಿ ಪ್ರಿಯಾಂಕ ಚಹಾ ತೊಟದಲ್ಲಿ ಕೆಲಸ ಮಾಡುವವರೊಂದಿಗೆ ಸೇರಿಕೊಂಡು ಕೆಲಸ ಮಾಡಿದ ಫೋಟೋಗಳನ್ನು, ವೀಡಿಯೋಗಳನ್ನು ಹಂಚಿಕೊಂಡಿತ್ತು.

ಅಸ್ಸಾಂನ ಲುಮ್ಡಿಂಗ್ ನಲ್ಲಿ ನಡೆದ ಚುನಾವಣಾ ಮತ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಂಗ್, ಅಕ್ರಮ ವಲಸೆಯ ಬಗ್ಗೆ ರಾಜಕೀಯ ಮಾಡುವುದನ್ನು ಮೊದಲು ನಿಲ್ಲಿಸಬೇಕೆಂದು ಎಲ್ಲರೂ ಆಗ್ರಹಿಸಿದರು. ನೆರೆಯ ದೇಶದಿಂದ ಒಳನುಸುಳುವಿಕೆಯನ್ನು ತಡೆಯಲು ಬಿಜೆಪಿ ಅಸ್ಸಾಂನ ಇಂಡೋ-ಬಾಂಗ್ಲಾ ಗಡಿಯುದ್ದಕ್ಕೂ ಎಲೆಕ್ಟ್ರಾನಿಕ್ ಕಣ್ಗಾವಲು ಸ್ಥಾಪಿಸಿದೆ ಎಂದು ಹೇಳಿದ್ದಾರೆ.

Advertisement

ಅಕ್ರಮ ವಲಸೆಯ ಬಗ್ಗೆ ರಾಜಕೀಯ ಮಾಡುವುದಕ್ಕೆ ನಾವು ಅನುಮತಿಸುವುದಿಲ್ಲ. ಅಸ್ಸಾಂ ನ ಸಂಸ್ಕೃತಿಯನ್ನು ನಾವು ಉಳಿಸುತ್ತೇವೆ. ನಮ್ಮಲ್ಲಿ ಯಾವುದಾದರೂ ದುರುದ್ದೇಶ ಇದ್ದಿದ್ದರೆ, ಡಾ. ಭೂಪೆನ್ ಹಜ್ಹರಿಕಾ ಅವರಿಗೆ ನಾವು ಭಾರತವನ್ನು ನೀಡಿ ಗೌರವಿಸುತ್ತಿರಲಿಲ್ಲ ಎಂದು ಸಿಂಗ್ ಹೇಳಿರುವುದನ್ನು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇನ್ನು, ಅಸ್ಸಾಂ ನ್ನು ನಾವು ನೆರೆ ಮುಕ್ತ ರಾಜ್ಯವನ್ನಾಗಿ ಮಾಡಲು ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಸಿಂಗ್ ಹೇಳಿದ್ದಾರೆ.

ಏತನ್ಮಧ್ಯೆ, ಬಿಜೆಪಿ ವಿಧಾನ ಸಭಾ ಚುನಾವಣೆಯ ತನ್ನ ಪ್ರಣಾಳಿಕೆಯನ್ನು ಇಂದು(ಮಂಗಳವಾರ, ಮಾ. 23) ಬಿಡುಗಡೆ ಮಾಡಿದೆ. ‘ಆತ್ಮ ನಿರ್ಭರ್ ಅಸ್ಸಾಂ’ ಗಾಗಿ ಹತ್ತು ಬದ್ಧತೆಗಳನ್ನು ಕೂಡ ಪ್ರಣಾಳಿಕೆಯಲ್ಲಿ ಬಿಜೆಪಿ ಭರವಸೆ ನೀಡಿದೆ.

ಓದಿ : ಉದಯವಾಣಿ ವಿಶೇಷ ಸಂದರ್ಶನದಲ್ಲಿ; ಅಜ್ಜಿಗೆ ಜೋಗುಳ ಹಾಡಿದ ಗಾಯಕ ಪ್ರವೀಣ್ ಆಳ್ವ

Advertisement

Udayavani is now on Telegram. Click here to join our channel and stay updated with the latest news.

Next