Advertisement

ಸರಕಾರ ಅದೇಶ ಕೊಟ್ಟಲ್ಲಿ ಪಿ.ಒ.ಕೆ. ಮೇಲೆ ದಾಳಿಮಾಡಲು ಸೇನೆ ಸನ್ನದ್ಧ: ಸೇನಾ ಮುಖ್ಯಸ್ಥ ನರವಣೆ

09:55 AM Jan 03, 2020 | Hari Prasad |

ನವದೆಹಲಿ: ಪಾಕಿಸ್ಥಾನ ಆಕ್ರಮಿತ ಕಾಶ್ಮೀರ ವಿಚಾರದಲ್ಲಿ ಕಾರ್ಯಾಚರಣೆ ಕೈಗೊಳ್ಳಲು ಭಾರತೀಯ ಸೇನೆ ಹಲವಾರು ‘ಪ್ಲ್ಯಾನ್’ಗಳನ್ನು ಸಿದ್ಧಪಡಿಸಿಟ್ಟುಕೊಂಡಿದೆ ಮತ್ತು ‘ಯಾವುದೇ ರೀತಿಯ ‘ಟಾಸ್ಕ್’ಗೂ ನಾವು ಸಿದ್ಧರಾಗಿದ್ದೇವೆ ಎಂದು ಭಾರತೀಯ ಭೂಸೇನೆಯ ಮುಖ್ಯಸ್ಥರಾಗಿ ಅಧಿಕಾರವಹಿಸಿಕೊಂಡ ಜನರಲ್ ಎಂ.ಎಂ. ನರವಣೆ ಅವರು ಎನ್.ಡಿ.ಟಿ.ವಿ.ಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

Advertisement

ಪಿಒಕೆ ವಿಚಾರದಲ್ಲಿ ನೈಜ ಫಲಿತಾಂಶವನ್ನು ತಂದುಕೊಡಬಲ್ಲ ಯಾವುದಾದರೂ ಯೋಜನೆಯನ್ನು ಕಾರ್ಯಗತಗೊಳಿಸುವ ಇರಾದೆ ಸೇನೆಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸುತ್ತಾ ನರವಣೆ ಅವರು, ‘ ಜಮ್ಮು ಕಾಶ್ಮೀರ ಸೇರಿದಂತೆ ಭಾರತ – ಪಾಕ್ ಗಡಿಯುದ್ದಕ್ಕೂ ನಾವು ಸೇನೆಯನ್ನು ಜಮಾವಣೆ ಮಾಡಿದ್ದೇವೆ ಮತ್ತು ಹಲವಾರು ಯೋಜನೆಗಳನ್ನು ನಾವು ಈಗಾಗಲೇ ಹಾಕಿಕೊಂಡಿದ್ದೇವೆ ಮತ್ತು ಒಂದುವೇಳೆ ಅಗತ್ಯ ಬಿದ್ದಲ್ಲಿ ಈ ಯೋಜನೆಗಳನ್ನು ಕಾರ್ಯಗತಗೊಳಿಸಲಾಗುವುದು ಮತ್ತು ನಾವು ಕೈಗೊಳ್ಳುವ ಕಾರ್ಯದಲ್ಲಿ ನಾವು ನೂರು ಪ್ರತಿಶತ ಯಶಸ್ಸನ್ನು ಸಾಧಿಸುವ ವಿಶ್ವಾಸ ನಮಗಿದೆ’ ಎಂದು ಅವರು ಹೇಳಿದರು.

ಒಂದು ವೇಳೆ ಭಾರತವು ಪಿ.ಒ.ಕೆ. ಮೇಲೆ ದಾಳಿ ಮಾಡಿದ್ದೇ ಆದಲ್ಲಿ ಅದು ದೊಡ್ಡ ಮಟ್ಟದ ದಾಳಿಯೇ ಆಗಿರುತ್ತದೆ ಎಂಬ ಸುಳಿವನ್ನೂ ಸಹ ನೂತನ ಸೇನಾ ಮುಖ್ಯಸ್ಥರು ಇದೇ ಸಂದರ್ಭದಲ್ಲಿ ಹೊರಗೆಡಹಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next