Advertisement

ಪುನೀತ್ “ರಾಜಕುಮಾರ”ನಿಗೆ ಭರ್ಜರಿ ಡಿಮ್ಯಾಂಡ್; ಅಭಿಮಾನಿಗಳಿಗೆ ಕಾತುರ

07:55 PM Mar 23, 2017 | Sharanya Alva |

ಬೆಂಗಳೂರು:ಪುನೀತ್ ರಾಜಕುಮಾರ್ ಅಭಿನಯದ ಬಹುನಿರೀಕ್ಷಿತ ರಾಜಕುಮಾರ ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದ್ದರೆ, ಮತ್ತೊಂದೆಡೆ ಪುನೀತ್ ಅಭಿಮಾನಿಗಳು ಟಿಕೆಟ್ ಗಾಗಿ ಮುಗಿಬಿದ್ದಿದ್ದಾರೆ. ರಾಜಕುಮಾರ ಸಿನಿಮಾ ಶುಕ್ರವಾರ ರಾಜ್ಯಾದ್ಯಂತ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Advertisement

ದಾವಣಗೆರೆ ಸೇರಿದಂತೆ ವಿವಿಧಡೆಯಲ್ಲಿ ರಾತ್ರಿ 12ಗಂಟೆಗೆ ರಾಜಕುಮಾರ ಶೋ  ಆರಂಭವಾಗಲಿದೆ. ಮಲ್ಟಿಫ್ಲೆಕ್ಸ್ ಗಳಲ್ಲಿ ಮುಂಗಡ ಟಿಕೆಟ್ ಬುಕ್ಕಿಂಗ್ ಇದ್ದಿದ್ದರಿಂದ ಟಿಕೆಟ್ ಸೋಲ್ಡ್ ಔಟ್ ಆಗಿರುವುದಾಗಿ ಚಿತ್ರದ ವಿತರಕ ಜಯಣ್ಣ ತಿಳಿಸಿರುವುದಾಗಿ ಮಾಧ್ಯಮಗಳ ವರದಿ ಹೇಳಿದೆ.

ರಾಜಕುಮಾರ ಸಿನಿಮಾವನ್ನು ಸಂತೋಷ್ ಆನಂದರಾಮ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದು, ಪುನೀತ್ ರಾಜಕುಮಾರ್ ಜೊತೆಗೆ ಪ್ರಿಯಾ ಆನಂದ್ ನಾಯಕಿಯಾಗಿ ನಟಿಸಿದ್ದಾರೆ.

ಇನ್ನು ಚಿತ್ರದಲ್ಲಿ ಶರತ್ ಕುಮಾರ್, ಪ್ರಕಾಶ್ ರೈ, ಅನಂತ್ ನಾಗ್, ಅಶೋಕ್, ಭಾರ್ಗವಿ ನಾರಾಯಣ್, ಹೊನ್ನಾವಳ್ಳಿ ಸೇರಿದಂತೆ ಘಟಾನುಘಟಿ ನಟರ ದಂಡೇ ಇದೆ. 

Advertisement

Advertisement

Udayavani is now on Telegram. Click here to join our channel and stay updated with the latest news.

Next