Advertisement

US: ಬೈಡೆನ್‌ ಅಧಿಕಾರಾವಧಿ ಪೂರೈಸದಿದ್ದರೆ ಅಧ್ಯಕ್ಷೆಯಾಗಲು ಸಿದ್ಧ: ಕಮಲಾ ಹ್ಯಾರಿಸ್‌

08:29 PM Sep 07, 2023 | Team Udayavani |

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ತಮ್ಮ ಅಧಿಕಾರಾವಧಿ ಪೂರ್ಣಗೊಳಿಸಲು ಸಾಧ್ಯವಾಗದೇ ಹೋದಲ್ಲಿ, ಅಧ್ಯಕ್ಷ ಸ್ಥಾನ ವಹಿಸಿಕೊಂಡು ಆಡಳಿತ ಮುನ್ನಡೆಸಲು ಸಿದ್ಧರಾಗಿರುವುದಾಗಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ತಿಳಿಸಿದ್ದಾರೆ.ಜಕಾರ್ತದಲ್ಲಿ ನಡೆಯುತ್ತಿರುವ ಆಗ್ನೇಯ ಆಸಿಯಾನ್‌ ರಾಷ್ಟ್ರಗಳ ಶೃಂಗಸಭೆಯಲ್ಲಿ ಕಮಲಾ ಪಾಲ್ಗೊಂಡಿದ್ದರು. ಈ ವೇಳೆ ಪತ್ರಕರ್ತರೊಬ್ಬರು ಅವರನ್ನು ಪ್ರಶ್ನಿಸಿದ್ದು, ಅಧ್ಯಕ್ಷ ಬೈಡೆನ್‌ ಅವರಿಗೆ ಈಗಾಗಲೇ 80 ವರ್ಷ ಪೂರೈಸಿದೆ.

Advertisement

ಈ ನಡುವೆ ಅನಿರೀಕ್ಷಿತವಾಗಿ ಬೈಡೆನ್‌ ತಮ್ಮ ಆಡಳಿತಾವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗದೇ ಹೋದಲ್ಲಿ, ಆಡಳಿತವನ್ನು ಮುಂದೆ ಕೊಂಡೊಯ್ಯಲು ನಿಮ್ಮಿಂದ ಸಾಧ್ಯವಿದೆಯೇ? ನೀವು ಅಂಥ ಪರಿಸ್ಥಿತಿಗಳನ್ನು ಎದುರಿಸಲು ಸಿದ್ಧರಾಗಿದ್ದೀರಾ? ಎಂದು ಕೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಉತ್ತರಿಸಿರುವ ಕಮಲಾ, “ಹೌದು, ಅಗತ್ಯವಿದ್ದಾಗ ಹಾಗೂ ಅಗತ್ಯವಾದರೆ ಅಧ್ಯಕ್ಷರ ಸ್ಥಾನವನ್ನು ವಹಿಸಿಕೊಂಡು ಮುನ್ನಡೆಯಬೇಕಾದದ್ದು ನನ್ನ ಕರ್ತವ್ಯಗಳಲ್ಲೊಂದು. ಅಂಥ ಸಂದರ್ಭಗಳನ್ನು ನಿಭಾಯಿಸಲು ನಾನು ಸಿದ್ಧಳಾಗಿದ್ದೇನೆ ಎಂದಿದ್ದಾರೆ. ಇದೇ ವೇಳೆ, ಬೈಡೆನ್‌ ಅವರು ಆರೋಗ್ಯಪೂರ್ಣರಾಗಿ ಅಧಿಕಾರಾವಧಿ ಪೂರೈಸಲಿದ್ದಾರೆ ಎಂದೂ ಹ್ಯಾರಿಸ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಕಮಲಾ ಅಮೆರಿಕ ಅಧ್ಯಕ್ಷೆಯಾದರೆ, ಅದೊಂದು ಐತಿಹಾಸಿಕ ಸಾಧನೆಯಾಗಲಿದೆ. ಏಷ್ಯಾ ಮೂಲದ ವ್ಯಕ್ತಿಯೊಬ್ಬರು ಅಮೆರಿಕದ ಅಧ್ಯಕ್ಷ ಪಟ್ಟಕ್ಕೇರಿದ ಮೊದಲ ವ್ಯಕ್ತಿ ಎನಿಸಿಕೊಳ್ಳಲಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next