Advertisement
ಬ್ರಿಟನ್ ಮೂಲದ ಕೋಟಿಕುಳ ರೀಚರ್ಡ್ ಬ್ರಾನ್ಸನ್ ಬಾಹ್ಯಾಕಾಶ ಪ್ರವಾಸ ಮುಗಿಸಿ, ವಾಪಸ್ಸು ಬಂದಿದ್ದಾರೆ. ಇವರ ಜೊತೆ ಇಬ್ಬರು ಪೈಲೆಟಗಳು, ಮೂವರು ಆಸ್ಟ್ರೋ ನಾಟ್ ಗಳು ಅಥವಾ ಖಗೋಳ ವಿಜ್ಞಾನಿಗಳು ವರ್ಜಿನ್ ಗ್ಯಾಲಕ್ಟೀಕ್ ಯುನಿಟಿ-22 ಖಾಸಗಿ ಬಾಹ್ಯಾಕಾಶ ಸ್ಥಾಪಿಸಿದ ಸರ್ ರೀಚರ್ಡ್ ಬ್ರಾನ್ಸನ್ ಬಾಹ್ಯಾಕಾಶಕ್ಕೆ ನೆಗೆದಿದ್ದರು. ನ್ಯೂ ಮೆಕ್ಸಿಕೋದಿಂದ ಹೊರಟ ಈ ನೌಕೆ ಒಂದುವರೆ ಗಂಟೆ ಬಾಹ್ಯಾಕಾಶದಲ್ಲಿ ಹಾರಾಟ ನಡೆಸಿತು. ಭೂಮಿಯಿಂದ 88 ಕಿ.ಮೀ. ಸಾಗಿ, ಸಬ್ ಆರ್ಬಿಟಲ್ ಗೆ ಹೋಗಿ ವಾಪಸ್ಸಾಗಿದೆ.
Related Articles
Advertisement
ಹಿಂದೆ ರಷ್ಯಾ ಈ ಪ್ರಯತ್ನ ಮಾಡಿ ಸಫಲವಾಗಿತ್ತು. ಈಗ ಬ್ರಿಟನ್ ಅದನ್ನು ಪೂರ್ಣಗೊಳಿಸಿದೆ. ಇದುವರೆಗೆ ಗಗನಯಾತ್ರಿಗಳು ರಾಕೇಟ್ ನಲ್ಲಿ ಹೋಗಿ ಬಂದಿದ್ದಾರೆ. ಅಂತರಿಕ್ಷದಲ್ಲಿ ನಡೆದಾಡಿ ಹಿಂತಿರುಗಿ ಬಂದಿರುತ್ತಾರೆ. ಪ್ರವಾಸಿಗರಂತೆ ಹೋಗಿ ಆನಂದಿಸಿ ಬರಲು ಸಾಧ್ಯವಿಲ್ಲ. ಅದಕ್ಕಾಗಿ ಅವರು ಪೂರ್ವ ತರಬೇತಿ ಪಡೆಯಬೇಕು. ಭೂಮಿಯ ಮೇಲಿಂದ 80 ಕಿಲೋಮೀಟರ್ ವರೆಗೆ ಪ್ರಯಾಣ ಅಲ್ಲಿಂದ ಇಡೀ ಜಗತ್ತನ್ನು ನೋಡುವುದು ಆಮೇಲೆ ಭೂಮಿಗೆ ಹಿಂತಿರುಗಿ ಬರುವುದು ಇದು ಸಾಮಾನ್ಯ ಪ್ರಜೆಗಳಿಗೆ ಇರುವ ಅವಕಾಶ.
ಈ ರೀತಿ ಹೋಗಿ ಬರಲು 2.50 ಲಕ್ಷ ಡಾಲರ್ ವೆಚ್ಚ ತಗುಲುತ್ತದೆ. ಭಾರತೀಯ ರೂಪಾಯಿಯಲ್ಲಿ ಸುಮಾರು 1.85 ಕೋಟಿ ವೆಚ್ಚ. ಈಗಾಗಲೇ 600 ಜನ ಮುಂಗಡ ಟಿಕೆಟ್ ಬುಕ್ ಮಾಡಿದ್ದಾರೆ. ಇದರಿಂದ ಜನರಿಗೆ ಜಗತ್ತನ್ನು ನೋಡುವ ಸುವರ್ಣಾವಕಾಶ ಲಭಿಸಿದೆ. ಅದರಲ್ಲೂ ನೀಲಿ ಬಣ್ಣದ ಆಕಾಶ ಅತ್ಯಂತ ಆಕರ್ಷಕ. ಮೊದಲಿನಿಂದಲೂ ನಮ್ಮ ಭೂಮಿಯ ಮೇಲೆ ಅತ್ಯಂತ ಸುಂದರ ತಾಣಗಳಿವೆ ಎಂಬ ಕಾಲ್ಪನಿಕ ಚಿತ್ರಣವಿತ್ತು. ಕಣ್ಣಾರೆ ಜಗತ್ತನ್ನು ಹೋರಗಿನಿಂದ ನೋಡುವುದು ಅಪೂರ್ವ ಪ್ರಸಂಗ ಎನ್ನುವುದರಲ್ಲಿ ಸಂದೇಹವಿಲ್ಲ.
ಮನುಷ್ಯ ಮೂಲತಃ ಆಶಾವಾದಿ ಹೊಸ-ಹೊಸ ತಾಣಗಳನ್ನು ಹುಡುಕಿಕೊಂಡು ಹೋಗುವುದು ಸಹಜ ಗುಣ. ಅದರಂತೆ ಅಂತ ರಿಕ್ಷವು ಕೂಡ ಮುಂದಿನ ದಿನಗಳಲ್ಲಿ ನವವಿವಾಹಿತ ಜೋಡಿಗಳಿಗೆ ಮಧುಚಂದ್ರಕ್ಕೆ ಹೋಗಲು ಅಣಿಯಾಗಲು ಕಾಣಬಹುದು. ಬಂಡವಾಳಶಾಹಿಗಳಿಗೆ ತಮ್ಮ ಹಣವನ್ನು ಹೂಡುವುದು ಕಾಣಬಹುದು. ಹೀಗೆ ಅಂತರಿಕ್ಷಕ್ಕೆ ಹೋಗಿ ಬರುವ ಪ್ರವಾಸಿಗರ ಅನುಭವ, ಅಧ್ಯಯನ ನಡೆಸುವ ಇಲಾಖೆಯೇ ಅಧ್ಯಯನ ನಡೆಸುವ ಇಲಾಖೆ ತಲೆ ಎತ್ತಬಹುದು. ಈ ರೀತಿಯ ಅಧ್ಯಯನದ ಮೂಲಕ ಖಗೋಳವಿಜ್ಞಾನದ ಕುತೂಹಲ ಇಮ್ಮಡಿಗೊಳಿಸುತ್ತಾ ಹೋಗುತ್ತದೆ. ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಗಳಿಸುವ ಅನುಭವ ಮುಂದಿನ ದಿನಗಳಲ್ಲಿ ಉಪಯೋಗವಾಗಲಿದೆ. ಪರಿಸರದ ಮೇಲೆ ಹತೋಟಿ ಸಾಧಿಸಲು ಹಲವು ಪ್ರಯತ್ನಗಳು ನಡೆಯಲಿದ್ದು, ಅದಕ್ಕೆ ಈ ಪ್ರಯೋಗ ಉತ್ತಮ ನೆರವು ನೀಡಲಿದೆ. ಮತ್ತೊಂದು ಬ್ಲೂ ಒರಿಜಿನ್ ಖಾಸಗಿ ಬಾಹ್ಯಾಕಾಶ ಸಂಸ್ಥೆಯ ಸ್ಥಾಪಕ ಹಾಗೂ ಅಮೇಜಾನ್ ಸ್ಥಾಪಕ ಜೇಫ್ ಬೇಜೋಸ್ ಕೂಡ ತಮ್ಮ ತಂಡದೊಂದಿಗೆ ಬಾಹ್ಯಾಕಾಶ ಪ್ರವಾಸಕ್ಕೆ ಹೊರಡಲಿದ್ದಾರೆ. ಈ ಪ್ರಯತ್ನ ಮುಂದಿನ ದಿನಗಳಲ್ಲಿ ಅಧಿಕಗೊಳ್ಳಲಿದೆ. ನಮ್ಮವರು ವಿದೇಶಗಳಿಗೆ ಹೋಗಿ ಬರುವಂತೆ ಅಂತರಿಕ್ಷಕ್ಕೆ ಹೋಗಿ ಬರುವ ಕಾಲ ದೂರವಿಲ್ಲ.
– ಸಿದ್ಧಾರ್ಥ. ಎಸ್
ಆಳ್ವಾಸ್ ಕಾಲೇಜ್, ಮೂಡುಬಿದಿರೆ.
ಇದನ್ನೂ ಓದಿ : ಎಸ್ಎಂಎನ್ ಸೌಹಾರ್ದ ಅವ್ಯವಹಾರ: ಸಿಐಡಿ ಬಂಧಿಸಿದ ಐವರು ಆರೋಪಿಗಳಿಗೆ ನ್ಯಾಯಾಂಗ ಬಂಧನ