Advertisement
ಗುರುವಾರ ಸುಪ್ರೀಂ ಕೋರ್ಟ್‌ನಲ್ಲಿ ನಡೆದ ಅನರ್ಹ ಶಾಸಕರ ವಿಚಾರಣೆಯ ವೇಳೆ, ಕರ್ನಾಟಕ ವಿಧಾನಸಭಾ ಸ್ಪೀಕರ್‌ರವರ ಕಚೇರಿಯ ಪರವಾಗಿ ಹಾಜರಾಗಿದ್ದ ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ನ್ಯಾ| ಎನ್.ವಿ. ರಮಣ ನೇತೃತ್ವದ ತ್ರಿಸದಸ್ಯ ಪೀಠಕ್ಕೆ ಈ ವಿಚಾರ ತಿಳಿಸಿದರು.ಮಾಜಿ ಸಿಎಂ ಕುಮಾರಸ್ವಾಮಿ ಪರ ವಕೀಲರಾದ ರಾಜೀವ್ ಧವನ್, ಶಾಸಕರ ಅನರ್ಹತೆಗೆ ಕೋರಿ ಕಾಂಗ್ರೆಸ್, ಜೆಡಿಎಸ್ ಸಲ್ಲಿಸಿದ್ದ ಅರ್ಜಿಗಳಲ್ಲಿ ರಾಜೀನಾಮೆ ನೀಡಿರುವ ಎಲ್ಲ ಶಾಸಕರು ಸರಕಾರ ಉರುಳಿಸುವ ತಂತ್ರಗಾರಿಕೆಗೆ ಸಿಲುಕಿದ್ದಾರೆ ಎಂದು ಆರೋಪಿಸಿದಾಗ ಅದನ್ನು ಸ್ಪೀಕರ್‌ರವರು ಪರಿಗಣಿಸದೇ ಇರಲು ಹೇಗೆ ಸಾಧ್ಯ? ಎಂದು ಕೇಳಿದರು. ಆದರೆ ಇದಕ್ಕೆ ಶಾಸಕರ ಪರವಾದ ವಕೀಲರು, ನಿಯಮಗಳನುಸಾರ, ರಾಜೀನಾಮೆ ಹಿಂದಿನ ಉದ್ದೇಶಗಳನ್ನು ಪ್ರಶ್ನಿಸುವ ಹಾಗಿಲ್ಲ ಎಂದು ವಾದಿಸಿದರು.