Advertisement

ಕಾಶ್ಮೀರ ಸಮಸ್ಯೆ ನಿವಾರಣೆಗಾಗಿ ಮಧ್ಯಸ್ಥಿಕೆ ವಹಿಸಲು ಸಿದ್ಧ: ಟ್ರಂಪ್‌

01:27 AM Jul 23, 2019 | Team Udayavani |

ವಾಷಿಂಗ್ಟನ್‌: ಭಾರತ ಮತ್ತು ಪಾಕಿಸ್ತಾನದ ನಡುವಿನ ದಶಕಗಳಷ್ಟು ಹಳೆಯದಾದ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸುವಲ್ಲಿ, ಎರಡೂ ದೇಶಗಳು ಒಪ್ಪಿದರೆ ತಾವು ಮಧ್ಯಸ್ಥಿಕೆಗೆ ವಹಿಸಲು ಸಿದ್ಧ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರು, ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ಗೆ ತಿಳಿಸಿದ್ದಾರೆ.

Advertisement

ಸದ್ಯಕ್ಕೆ ಅಮೆರಿಕ ಪ್ರವಾಸದಲ್ಲಿರುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಅವರನ್ನು ‘ಶ್ವೇತಭವನ’ದಲ್ಲಿ ಭೇಟಿಯಾದ ವೇಳೆ ಟ್ರಂಪ್‌, ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಈ ಹಿಂದೆ ತಮ್ಮನ್ನು ಭೇಟಿ ಮಾಡಿದ್ದಾಗ ಕಾಶ್ಮೀರ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಬೇಕೆಂದು ಕೋರಿದ್ದಾಗಿ ಟ್ರಂಪ್‌, ಖಾನ್‌ ಅವರಿಗೆ ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಖಾನ್‌, ನೀವು ಮಧ್ಯಸ್ಥಿಕೆ ವಹಿಸಿದಲ್ಲಿ ಕಣಿವೆ ರಾಜ್ಯದ ಲಕ್ಷಾಂತರ ಮಂದಿಯ ಹಾರೈಕೆ ನಿಮ್ಮ ಬೆನ್ನಿಗಿರಲಿದೆ ಎಂದು ಹೇಳಿದ್ದಾರೆ.

ವಿವಾದಕ್ಕೀಡಾದ ಹೇಳಿಕೆ: ಮೋದಿಯವರ ಬಗ್ಗೆ ಟ್ರಂಪ್‌ ನೀಡಿರುವ ಹೇಳಿಕೆ ಭಾರತದಲ್ಲಿ ವಿವಾದಕ್ಕೀಡಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೇವಾಲ, ಮೋದಿಯವರು ನಿಜಕ್ಕೂ ಹೀಗೊಂದು ಆಮಂತ್ರಣ ನೀಡಿದ್ದರೆ, ಅದು ಭಾರತದ ಹಿತಾಸಕ್ತಿಗೆ ಮಾರಕವಾಗಲಿದೆ. ಈ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ನ್ಯಾಷನಲ್ ಕಾನ್ಫರೆನ್ಸ್‌ ನಾಯಕ ಒಮರ್‌ ಅಬ್ದುಲ್ಲಾ, ಸಿಪಿಎಂ ನಾಯಕ ಸೀತಾರಾಂ ಯೆಚೂರಿ ಈ ಕುರಿತಂತೆ ಸರ್ಕಾರದ ಸ್ಪಷ್ಟನೆ ಕೋರಿದ್ದಾರೆ.

Advertisement

ಸ್ಪಷ್ಟನೆ ನೀಡಿದ ರವೀಶ್‌: ಟ್ರಂಪ್‌ ಹೇಳಿಕೆ ವಿವಾದವಾಗಿ ಮಾರ್ಪಡುತ್ತಲೇ ಟ್ವಿಟರ್‌ನಲ್ಲಿ ಸ್ಪಷ್ಟನೆ ನೀಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್‌ ಕುಮಾರ್‌, ‘ಕಾಶ್ಮೀರ ಸಮಸ್ಯೆಯನ್ನು ಭಾರತವು ದ್ವಿಪಕ್ಷೀಯ ನೆಲೆಯಲ್ಲೇ ಬಗೆಹರಿಸಲು ಇಚ್ಛಿಸುತ್ತದೆ. ತನ್ನ ನಿಲುವಿಗೆ ಭಾರತ ಎಂದಿಗೂ ಬದ್ಧವಾಗಿರಲಿದೆ. ಪ್ರಧಾನಿ ಮೋದಿಯವರು ಈ ಹಿಂದೆ ಎಲ್ಲೂ ಟ್ರಂಪ್‌ ಅವರ ಮಧ್ಯಸ್ಥಿಕೆಗಾಗಿ ಕೋರಿಲ್ಲ. ಭಯೋತ್ಪಾದನೆ ನಿಲ್ಲಿಸಿದರಷ್ಟೇ ಪಾಕಿಸ್ತಾನದ ಜತೆಗೆ ಭಾರತ ಮಾತುಕತೆಗೆ ಸಿದ್ಧ’ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next