Advertisement

ಯುವಕರ ಆಶೋತ್ತರ ಈಡೇರಿಸಲು ಸಿದ್ಧ

02:46 PM Apr 30, 2022 | Team Udayavani |

ಸೈದಾಪುರ: ಮತಕ್ಷೇತ್ರದ ಯುವಕರ ಆಶೋತ್ತರಗಳನ್ನು ಈಡೇರಿಸಲು ಸದಾ ಸಿದ್ಧ ಎಂದು ಜೆಡಿಎಸ್‌ ರಾಜ್ಯ ಯುವ ಮುಖಂಡ ಶರಣಗೌಡ ಕಂದಕೂರ ಅಭಯ ನೀಡಿದರು. ಪಟ್ಟಣದಲ್ಲಿ ಹಮ್ಮಿಕೊಂಡಿದ್ದ 3ನೇ ಆವೃತ್ತಿಯ ಎಸ್‌ಪಿಎಲ್‌ ಕ್ರಿಕೆಟ್‌ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

Advertisement

ಗ್ರಾಮೀಣ ಭಾಗದಲ್ಲಿ ಯುವಕರ ನೇತೃತ್ವದಲ್ಲಿ ಹಮ್ಮಿಕೊಳ್ಳುವ ಸಮಾಜಮುಖೀ ಕಾರ್ಯಕ್ರಮಗಳು ಆದಿಯಾಗಿ ಗ್ರಾಮೀಣ ಕ್ರೀಡಾ ಚಟುವಟಿಕೆಗಳಿಗೆ ತಮ್ಮ ಸಹಾಯ, ಸಹಕಾರ ನಿರಂತರವಾಗಿ ಇರುತ್ತದೆ ಎಂದು ಭರವಸೆ ನೀಡಿದರು.

ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸುವ ಮೂಲಕ ಕ್ರೀಡಾ ನಿಯಮಗಳಿಗೆ ಬದ್ಧರಾಗಿರಬೇಕು. ಕ್ರೀಡೆಯಿಂದ ದೈಹಿಕ ಸದೃಢತೆಯ ಜತೆಗೆ ಮಾನಸಿಕ ಸಾಮಾರ್ಥ್ಯವೂ ಹೆಚ್ಚಳವಾಗಲಿದೆ ಉತ್ತಮ ಆರೋಗ್ಯಕ್ಕಾಗಿ ಕ್ರೀಡೆಯಲ್ಲಿ ಭಾಗವಹಿಸುವಂತೆ ಸಲಹೆ ನೀಡಿದರು.

ಇದಕ್ಕೂ ಮುನ್ನ ಟೀಮ್‌ ಎಸ್‌ಎನ್‌ಕೆ ವತಿಯಿಂದ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್‌ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕ್ರೀಡೆ ಮಾನವನ ಅವಿಭಾಜ್ಯ ಅಂಗವಾಗಿದೆ. ಆದ್ದರಿಂದ ಕ್ರಿಕೆಟ್‌ ಜೊತೆಗೆ ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ವಿದ್ಯಾ ವರ್ಧಕ ಸಂಘದ ಕೋಶಾಧ್ಯಕ್ಷ ಮುಖಂದಕುಮಾರ ಅಲಿಝಾರ್‌, ಚಂದ್ರುಗೌಡ ಸೈದಾಪುರ, ರಾಜೇಶ ಶೆಟ್ಟಿ, ಚನ್ನಪ್ಪಗೌಡ ಹುಣಸೆಮರ, ಸಂಗರೆಡ್ಡಿಗೌಡ, ಗ್ರಾಪಂ ಅಧ್ಯಕ್ಷ ಮಾಳಪ್ಪ ಅರಿಕೇರಿ, ನರಸಪ್ಪ ಕವಡೆ, ಡಿ. ತಾಯಪ್ಪ, ವೆಂಕೋಬಾ ತುರಕಾನದೊಡ್ಡಿ, ಶಂಕರಲಿಂಗ ಕಡೇಚೂರು, ಗ್ರಾಪಂ ಸದಸ್ಯ ಪರ್ವತರೆಡ್ಡಿಗೌಡ, ಶಾಂತಪ್ಪ ರಾಂಪುರ, ಆನಂದ ಮಿರಿಯಾಲ್‌, ವೆಂಕಟೇಶ ಗಡದ್‌, ನರಸಪ್ಪ ಕವಡೆ, ಅಂಜನೇಯ ಮಲ್ಹಾರ್‌, ದೇವು ಘಂಟಿ, ಶಿವು ಸಾವೂರು, ಮಹೇಶ ವಡವಟ್‌, ಭೀಮಣ್ಣ ವಡವಟ್‌, ಯಲ್ಲಪ್ಪ ನಾಯಕ್‌, ಅವಿನಾಶ ಮನ್ನೆ, ವಿನೋದ ಐರೆಡ್ಡಿ, ದೀಪಕ್‌ ದೇವ್‌, ಅಂಜನೇಯ ಕಲಾಲ್‌, ಸೋಮು ಸ್ವಾಮಿ ಸೇರಿದಂತೆ ಮುಂತಾದವರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next