Advertisement

ಸಮುದ್ರಗಾಮಿಯಾಗಲು ತಯಾರಾಗಿ ಮರೈನ್‌ ಎಂಜಿನಿಯರ್‌ ಆಗಿ..

03:54 PM Mar 06, 2018 | Team Udayavani |

ಜಗತ್ತಿನ ಒಟ್ಟು ವಿಸ್ತೀರ್ಣದಲ್ಲಿ ಮುಕ್ಕಾಲು ಭಾಗವನ್ನು ಸಮುದ್ರವೇ ಆವರಿಸಿಕೊಂಡಿದೆ. ಸಮುದ್ರದ ಆಳದಲ್ಲಿ ಬೆಲೆಬಾಳುವ ನಿಕ್ಷೇಪಗಳಿವೆ. ಸಮುದ್ರ, ವ್ಯಾಪಾರ ವಹಿವಾಟಿನ ಅತಿಮುಖ್ಯ ಸಂಪರ್ಕ ಸೇತುವೆಯೂ ಆಗಿದೆ. ಇಂಥ ಸಮುದ್ರದ ಮೇಲೆ ಹಕ್ಕು ಸಾಧಿಸಲು ನೂರಾರು ವರ್ಷಗಳಿಂದಲೂ ಹಲವು ಬಗೆಯಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಸಮುದ್ರದಲ್ಲಿ ಯಾನ, ಯುದ್ಧ, ವ್ಯಾಪಾರ ಹೀಗೆ ಏನೇ ನಡೆದರೂ ಅದಕ್ಕೆ ಹಡಗು, ಜಲಾಂತರ್ಗಾಮಿ ನೌಕೆಗಳು ಬಳಕೆಯಾಗುತ್ತವೆ. ಇಂಥ ನೌಕೆಗಳ ವಿನ್ಯಾಸ, ರೂಪುರೇಶೆಯನ್ನು ಸಿದ್ಧಪಡಿಸುವವರು ಮರೈನ್‌ ಎಂಜಿನಿಯರ್‌ಗಳು ಇವರು ನೌಕಾಪಡೆಯಲ್ಲಿ ಸೇವೆ ಸಲ್ಲಿಸುತ್ತಾರೆ.

Advertisement

ಸಾಗರದ ಅಂತರಾಳದಲ್ಲಿ ದೊರೆಯುವ ಖನಿಜ ನಿಕ್ಷೇಪ ಮತ್ತು ಪೆಟ್ರೋಲಿಯಂ ನಿಕ್ಷೇಪಗಳ ಹಕ್ಕು ಸ್ವಾಮ್ಯಕ್ಕಾಗಿ ಅಮೆರಿಕ, ಇಂಗ್ಲೆಂಡ್‌, ರಷ್ಯಾದಂಥ ದೇಶಗಳು ಹಲವು ಬಗೆಯ ಲಾಬಿ ನಡೆಸುತ್ತಿವೆ. ತಮ್ಮ ಕೆಲಸ ಸಾಧಿಸಿಕೊಳ್ಳಲು ಅನೇಕ ಬಹುರಾಷ್ಟೀಯ ಕಂಪನಿಗಳ ಜೊತೆಗೂ ಒಳ ಒಪ್ಪಂದ ಮಾಡಿಕೊಂಡಿವೆ. ಮತ್ತೂಂದೆಡೆ ಸಮುದ್ರದ ಗಡಿರೇಖೆ ಸಮಸ್ಯೆಗಳು, ನೌಕಾಪಡೆ ಸುರಕ್ಷೆಯ ಪ್ರಶ್ನೆಗಳೂ ಕಾಡುತ್ತಿವೆ.

ಜಲಮಾರ್ಗದ ಮೂಲಕ ನಡೆಸುವ ದಾಳಿಯನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ತಡೆಯಲು ನೌಕಾಪಡೆ ನಿರಂತರವಾಗಿ ಜಾಗೃತವಾಗಿದೆ. ದೇಶ ರಕ್ಷಣೆಯ ಕಾರಣಕ್ಕಾಗಿ ಭಾರತವೂ ಸೇರಿದಂತೆ ಎಲ್ಲ ರಾಷ್ಟ್ರಗಳು ವಿವಿಧ ಮಾದರಿಯ ನೌಕೆಗಳು, ಹಡಗುಗಳು ಅನಿವಾರ್ಯವೂ ಹೌದು. ಅಂಥ ನೌಕೆಗಳನ್ನು ವೈವಿಧ್ಯಮಯವಾಗಿ ವಿನ್ಯಾಸಗೊಳಿಸಿ, ಅವಶ್ಯಕತೆಗೆ ಅನುಗುಣವಾಗಿ ಬಳಸುವ ತಂತ್ರಗಾರಿಕೆ ಹೊಂದಿರುವವರೇ ಮರೈನ್‌ ಎಂಜಿನಿಯರ್‌ಗಳು. ಇವರು ದೇಶದ ನೌಕಾಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಮರೈನ್‌ ಎಂಜಿನಿಯರ್‌ ಆಗಬೇಕೆಂಬ ಹಿರಿಯಾಸೆ ನಿಮಗೂ ಇದ್ದರೆ ಹೀಗೆ ಮಾಡಿ..

ವಿದ್ಯಾಭ್ಯಾಸ ಹೀಗಿರಲಿ: ಪಿಯುಸಿಯಲ್ಲಿ ವಿಜಾnನ ಸಂಬಂಧಿತ ಕೋರ್ಸ್‌ ಮುಗಿಸಿದ ಬಳಿಕ, ಜೆಇಇ ಮರೈನ್‌ ಎಂಟ್ರೆನ್ಸ್‌ ಎಕ್ಸಾಮ್‌ನಲ್ಲಿ ಯಶಸ್ಸು ಪಡೆಯಬೇಕು. ಬಳಿಕ ನೇವಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಮರೈನ್‌ ಎಂಜಿನಿಯರ್‌ ಆಗಬಹುದು. ಅಲ್ಲದೆ ಜೆಇಇ ಬಳಿಕ ಬಿ.ಟೆಕ್‌/ ಬಿಇ ಪೂರೈಸಿಯೂ ಮರೈನ್‌ ಎಂಜಿನಿಯರ್‌ ಆಗಬಹುದು.

ಮತ್ತೂಂದು ಮಾರ್ಗದಲ್ಲಿ, ಪಿಯು ಸೈನ್ಸ್‌ ಮುಗಿಸಿದ ಮೇಲೆ ಬಿಎಸ್ಸಿ ಅಭ್ಯಾಸ ಮಾಡಿಯೂ ನಂತರ ಆಲ್ಟರ್‌ನೆಟ್‌ ಟ್ರೆ„ನಿಂಗ್‌ ಸ್ಕೀಮ್‌(ಎಟಿಎಸ್‌) ಮೂಲಕ ವ್ಯಾಸಂಗ ಮಾಡಿ ಜೂನಿಯರ್‌ ಮರೈನ್‌ ಎಂಜಿನಿಯರ್‌ ಆಗಬಹುದು. ಇವೆರಡೂ ಅಲ್ಲದೆ ಮತ್ತೂಂದು ಮಾರ್ಗ ಎಂದರೆ ಪಿಯು ಬಳಿಕ ಡಿಪ್ಲೊ ಮಾ ಮುಗಿಸಿ, ವರ್ಕ್‌ಶಾಪ್‌ ಟ್ರೆ„ನಿಂಗ್‌ ಮಾಡಿ ಜೂನಿಯರ್‌ ಮರೈನ್‌ ಎಂಜಿನಿಯರ್‌ ಆಗಬಹುದು.  

Advertisement

ಕೌಶಲ್ಯಗಳೂ ಇರಲಿ
-ಸಮುದ್ರಗಳ  ಹವಾಗುಣ, ಸಮುದ್ರಮಟ್ಟ, ಸಾಗರದ ಅಂತರಾಳ, ನೀರಿನ ಸಾಂದ್ರತೆ ಬಗ್ಗೆ ವಿಶೇಷ ಜಾnನ.
-ಸಮುದ್ರ ನೌಕೆಗಳ ಬಗ್ಗೆ ತಿಳಿವಳಿಕೆ
-ಅನಿಲ ಟ್ಯಾಂಕರ್‌ಗಳು ಮತ್ತು ಸುರಕ್ಷತೆ, ವಿನ್ಯಾಸದ ಬಗ್ಗೆ ಅರಿವು
-ವಿನ್ಯಾಸಕ್ಕೆ ಸಂಬಂಧಿಸಿದ ಸಾಫ್ಟ್ವೇರ್‌ (ತಂತ್ರಜಾnನ), ತಾಂತ್ರಿಕ ಸಲಕರಣೆಗಳ ಬಳಕೆ ಬಗ್ಗೆ ತಿಳಿವಳಿಕೆ.
-ಎಲೆಕ್ಟ್ರಿಕ್‌ ಮತ್ತು ಎಲೆಕ್ಟ್ರಾನಿಕ್‌ ಉಪಕರಣ ಬಳಕೆ, ವೈಜಾnನಿಕ ವಿಚಾರಗಳ ಬಗೆಗೆ ಅಸಕ್ತಿ
-ಉತ್ತಮ ಸಂವಹನಶೀಲತೆ, ಸವಾಲನ್ನು ಸ್ವೀಕರಿಸುವ ಗುಣ
-ಗಣಿತ ಮತ್ತು ಭೌತಶಾಸ್ತ್ರದ ಬಗ್ಗೆ ಪ್ರಾವೀಣ್ಯತೆ ಸಾಧಿಸುವುದು.
-ಹೊಸ ತಂತ್ರಜಾnನ, ಆಲೋಚನೆ, ವಿಷಯಗಳಿಗೆ ತೆರೆದುಕೊಳ್ಳುವ ಗುಣ.

ಸಂಬಳ: ದೇಶದ ಭದ್ರತೆ ದೃಷ್ಟಿಯಿಂದ ಮರೈನ ಎಂಜಿನಿಯರ್‌ಗಳ ಅವಶ್ಯಕತೆ ಹೆಚ್ಚಿದೆ. ಭಾರತೀಯ ನೌಕಾಪಡೆಯಲ್ಲಿ ಅವರಿಗೆ ವಿಶೇಷ ಮಾನ್ಯತೆ ಇದೆ. ಅವರು ವರ್ಷಕ್ಕೆ 4 ಲಕ್ಷದಿಂದ 15 ಲಕ್ಷ ರೂ.ವರೆಗೂ ವೇತನ ಪಡೆಯುವುದುಂಟು. ಬಹುರಾಷ್ಟ್ರೀಯ ಕಂಪನಿಗಳಲ್ಲಂತೂ ಅನುಭವೀ ಮರೈನ್‌ ಎಂಜಿನಿಯರ್‌ಗಳಿಗೆ ಕೆಂಪುಹಾಸಿಗೆ ಸ್ವಾಗತವುಂಟು ಅಲ್ಲಿ ಈ ಎಂಜಿನಿಯರ್‌ಗಳಿಗೆ ವಾರ್ಷಿಕವಾಗಿ 37 ಲಕ್ಷ ರೂ.ವರೆಗೂ ವೇತನ ನೀಡುತ್ತಾರೆ.

ಅವಕಾಶಗಳು
-ನೌಕಾವಲಯ
-ಭಾರತೀಯ ನೇವಿ
-ಹಡಗು ನಿರ್ಮಾಣ ಕೇಂದ್ರ
-ಎಂಜಿನ್‌ ನಿರ್ಮಾಣ ಕಂಪನಿಗಳು
-ಹಡಗು ವಿನ್ಯಾಸವಲಯ
-ನೌಕಾ ಸಂಶೋಧನಾ ಕೇಂದ್ರ
-ಸಂಶೋಧನಾ ವಿದ್ಯಾಲಯಗಳು
-ಮರೈನ್‌ ಎಲೆಕ್ಟ್ರಿಕಲ್ಸ್‌
-ನೇವಿಕಾಮ್‌ ಟೆಕ್ನಾಲಜಿ ಇಂಟರ್‌ ನ್ಯಾಷನಲ್‌ ಪ್ರ„.ಲಿ.
-ಟಾರ್ಗೆಟ್‌ ಶಿಪ್‌ ಮ್ಯಾನೇಜ್‌ಮೆಂಟ್‌ ಪ್ರ„.ಲಿ.

ಕಾಲೇಜುಗಳು 
-ಇನ್ಸ್‌ಟಿಟ್ಯೂಟ್‌ ಆಫ್ ಏರೋನಾಟಿಕ್‌ ಅಂಡ್‌ ಮರೈನ್‌ ಎಂಜಿನಿಯರಿಂಗ್‌, ಬೆಂಗಳೂರು
-ಮಂಗಳೂರು ಮರೈನ್‌ ಕಾಲೇಜ್‌ ಆಫ್ ಟೆಕ್ನಾಲಜಿ, ಮಂಗಳೂರು
-ಇಂಡಿಯನ್‌ ಮರೈನ್‌ ಯೂನಿವರ್ಸಿಟಿ ,ಚೆನ್ನೈ, ತಮಿಳುನಾಡು
-ಕೊಯಮತ್ತೂರು ಮರೈನ್‌ ಕಾಲೇಜ್‌. ತಮಿಳುನಾಡು
-ತೋಳನಿ ಮರೈನ್‌ ಇನ್ಸ್‌ಟಿಟ್ಯೂಟ್‌. ಪುಣೆ, ಮಹಾರಾಷ್ಟ್ರ
-ಇನ್ಸ್‌ಟಿಟ್ಯೂಟ್‌ ಆಫ್ ಮರೈನ್‌ ಸ್ಟಡೀಸ್‌, ವಾಸ್ಕೋ-ಡ-ಗಾಮ, ಗೋವಾ

* ಎನ್‌. ಅನಂತನಾಗ್‌

Advertisement

Udayavani is now on Telegram. Click here to join our channel and stay updated with the latest news.

Next