ನವದೆಹಲಿ: ಭ್ರಷ್ಟಾಚಾರ ಆರೋಪ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಮುಂದಿನ 48ಗಂಟೆಗಳೊಳಗೆ ಸಿಬಿಐ ಮುಂದೆ ಹಾಜರಾಗಲು ಸಿದ್ಧ ಎಂದು ಮುಂಬಯಿ ಮಾಜಿ ಪೊಲೀಸ್ ಕಮಿಷನರ್ ಪರಂ ಬೀರ್ ಸಿಂಗ್ ಸೋಮವಾರ (ನವೆಂಬರ್ 22) ಸುಪ್ರೀಂಕೋರ್ಟ್ ಗೆ ತಿಳಿಸಿದ್ದಾರೆ.
ಇದನ್ನೂ ಓದಿ:ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 1,000ಕ್ಕೂ ಅಧಿಕ ಅಂಕ ಕುಸಿತ; ಹೂಡಿಕೆದಾರರಿಗೆ ನಷ್ಟ
ಮುಂಬಯಿ ಪೊಲೀಸ್ ಕಮಿಷನರ್ ಆಗಿದ್ದ ಸಂದರ್ಭದಲ್ಲಿ ಪರಂಬೀರ್ ಸಿಂಗ್ ಕೋಟ್ಯಂತರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿರುವುದಾಗಿ ಮಹಾರಾಷ್ಟ್ರದ ಮಾಜಿ ಗೃಹ ಮಂತ್ರಿ ಅನಿಲ್ ದೇಶ್ ಮುಖ್ ಆರೋಪಿಸಿದ್ದರು.
ವಿಚಾರಣೆ ವೇಳೆ ಪರಂಬೀರ್ ಸಿಂಗ್ ಹೇಳಿಕೆಯನ್ನು ಪರಿಶೀಲಿಸಿದ ಬಳಿಕ ಸುಪ್ರೀಂಕೋರ್ಟ್ ತಕ್ಷಣವೇ ಬಂಧಿಸದಂತೆ ಮಧ್ಯಂತರ ರಕ್ಷಣೆಯನ್ನು ನೀಡಿದೆ. ಅಲ್ಲದೇ ಸಿಬಿಐ ತನಿಖೆಗೆ ಶೀಘ್ರವೇ ಹಾಜರಾಗಿ ಸಹಕಾರ ನೀಡುವಂತೆ ಸಿಂಗ್ ಗೆ ನಿರ್ದೇಶನ ನೀಡಿದೆ.
ಮುಂಬಯಿ ಪೊಲೀಸರಿಂದ ತನ್ನ ಕಕ್ಷಿದಾರನ ಜೀವಕ್ಕೆ ಗಂಭೀರವಾದ ಬೆದರಿಕೆ ಇದೆ ಎಂದು ಸಿಂಗ್ ಪರ ವಕೀಲರು ಸುಪ್ರೀಂಕೋರ್ಟ್ ಗೆ ತಿಳಿಸಿದ್ದರು. ಪರಂಬೀರ್ ಸಿಂಗ್ ಭಾರತದಲ್ಲಿಯೇ ಇದ್ದು, ಅವರು ನಾಪತ್ತೆಯಾಗಿಲ್ಲ ಎಂದು ಮಾಹಿತಿ ನೀಡಿದ್ದರು.
ಪರಂಬೀರ್ ಸಿಂಗ್ ಅರ್ಜಿಯ ಕುರಿತು ಪ್ರತಿಕ್ರಿಯೆ ನೀಡುವಂತೆ ಮಹಾರಾಷ್ಟ್ರ ಸರಕಾರ. ಡಿಜಿಪಿ ಹಾಗೂ ಸಿಬಿಐಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.