Advertisement
ನಗರದಲ್ಲಿ ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ಏರ್ಪಡಿಸಿದ್ದ ವರುಣಾ ವಿಧಾನಸಭಾ ಕ್ಷೇತ್ರದ ಮತದಾರರಿಗೆ ಕೃತಜ್ಞತಾ ಸಮಾರಂಭದಲ್ಲಿ ಮಾತನಾಡಿದ ಅವರು, ಸ್ವಾತಂತ್ರಾ ನಂತರ ಉಪ್ಪಾರ ಸಮುದಾಯವನ್ನು ಮೊದಲ ಬಾರಿಗೆ ಮಂತ್ರಿ ಮಾಡಿದ್ದೇವೆ. ಬಿಜೆಪಿಯವರ ಅಪಪ್ರಚಾರ ಹೆಚ್ಚು ದಿನ ನಡೆಯುವುದಿಲ್ಲ. ದೇಶದಲ್ಲಿ ಮೋದಿ ಅಲೆ ಮಾಯವಾಗಿದೆ.
Related Articles
Advertisement
ಅಪಪ್ರಚಾರ: ಮೋದಿ, ಶಾ ಎಷ್ಟೇ ಸುಳ್ಳು ಹೇಳಬಹುದು, ಅಪಪ್ರಚಾರ ಮಾಡಬಹುದು. ಉಚಿತ ಅಕ್ಕಿ ಕೇಂದ್ರ ಸರ್ಕಾರ ಕೊಡುವುದು ಎನ್ನುತ್ತಾರೆ. ಹಾಗಿದ್ದರೆ, ಬಿಜೆಪಿ ಸರ್ಕಾರಗಳಿರುವ ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ, ಹರ್ಯಾಣ, ಗೋವಾ, ಛತ್ತೀಸ್‌ಗಡ, ಉತ್ತರ ಪ್ರದೇಶ, ಮಹಾರಾಷ್ಟ್ರ ರಾಜ್ಯಗಳಲ್ಲಿ ಏಕೆ ಉಚಿತ ಅಕ್ಕಿ ಕೊಡುತ್ತಿಲ್ಲ ಎಂದು ಪ್ರಶ್ನಿಸಿದರೆ ಅವರ ಬಳಿ ಉತ್ತರವಿಲ್ಲ ಎಂದು ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ, ಇಡೀ ದೇಶದಲ್ಲಿ ಕರ್ನಾಟಕ ಮಾತ್ರ ಉಚಿತ ಅಕ್ಕಿ ಕೊಡುತ್ತಿದೆ. ಹಸಿವು ಮುಕ್ತ ರಾಜ್ಯಕ್ಕಾಗಿ ಈ ಕಾರ್ಯಕ್ರಮ ರೂಪಿಸಿದ್ದೇವೆ. ಇದರಿಂದ ಜನ ಗುಳೇ ಹೋಗುವುದು, ಭಿಕ್ಷೆ ಬೇಡುವುದು ತಪ್ಪಿದೆ ಎಂದರು.
ಎಸ್‌ಇಪಿ, ಟಿಎಸ್‌ಪಿ ಹಣವನ್ನು ಜನಸಂಖ್ಯೆಗೆ ಅನುಗುಣವಾಗಿ ಖರ್ಚು ಮಾಡಲು ಕ್ರಾಂತಿಕಾರಿ ಕಾನೂನು ತಂದು ಐದು ವರ್ಷದಲ್ಲಿ ಈ ವರ್ಗದ ಜನರ ಕಲ್ಯಾಣ ಕಾರ್ಯಕ್ರಮಗಳಿಗೆ 88 ಸಾವಿರ ಕೋಟಿ ಖರ್ಚು ಮಾಡಿದ್ದೇವೆ. ಹಿಂದಿನ ಬಿಜೆಪಿ ಸರ್ಕಾರ ಐದು ವರ್ಷದಲ್ಲಿ ಖರ್ಚು ಮಾಡಿದ್ದು 21 ಸಾವಿರ ಕೋಟಿ ಮಾತ್ರ.
ಕೇಂದ್ರದ ಬಜೆಟ್ ಗಾತ್ರ 24 ಲಕ್ಷ ಕೋಟಿ, ಆದರೆ, ಎಸ್‌ಸಿ-ಎಸ್‌ಟಿ ವರ್ಗದವರ ಕಲ್ಯಾಣ ಕಾರ್ಯಕ್ರಮಗಳಿಗೆ ಎಲ್ಲಾ ರಾಜ್ಯಗಳಿಗೆ ಕೊಡುವುದು 53 ಸಾವಿರ ಕೋಟಿ ಮಾತ್ರ, ಕೇಂದ್ರ ಸರ್ಕಾರ ಕನಿಷ್ಠ 2 ಲಕ್ಷ ಕೋಟಿ ಖರ್ಚು ಮಾಡಬೇಕು. ಎಸ್‌ಸಿ-ಎಸ್‌ಟಿ ವರ್ಗದವರ ನಿಜವಾದ ಕಳಕಳಿ ಅವರಿಗೆ ಇದ್ದರೆ ನಮ್ಮಂತೆ ಕಾನೂನು ಮಾಡಲಿ ಎಂದು ಆಗ್ರಹಿಸಿದರು.
ಚುನಾವಣೆ ಸಮಯದಲ್ಲಿ ಬಿಜೆಪಿ ನಡಿಗೆ-ದಲಿತರ ಮನೆ ಕಡೆಗೆ ಎಂದು ಡೋಂಗಿತನ ತೋರಿ ದಲಿತರ ಮನೆಗೆ ಹೋಟೆಲ್‌ನಿಂದ ದೋಸೆ ತರಿಸಿಕೊಂಡು ತಿಂದು ಬರುತ್ತಾರೆ. ಇದನ್ನೆಲ್ಲಾ ನಮ್ಮ ಕಾರ್ಯಕರ್ತರು ಮನೆ ಮನೆಗೆ ತಿಳಿಸಬೇಕು ಎಂದು ಹೇಳಿದರು.