Advertisement

ಜಿ20 ಸಭೆಗೆ ಸಿದ್ಧ: ಬೆಂಗಳೂರಿನಲ್ಲಿ ನಾಳೆಯಿಂದ ಮೂರು ದಿನ ಸಭೆ

01:22 AM Dec 12, 2022 | Team Udayavani |

ಬೆಂಗಳೂರು: ರಾಜಸ್ಥಾನದ ಉದಯಪುರದಲ್ಲಿ ಜಿ20 ದೇಶಗಳ ಮೊದಲ ಹಂತದ ಶೆರ್ಪಾಗಳ ಸಭೆಯನ್ನು ಮುಗಿಸಿರುವ ಭಾರತ, ಈಗ 2ನೇ ಹಂತದಲ್ಲಿ ಬೆಂಗಳೂರಿನಲ್ಲಿ ಜಿ20 ದೇಶಗಳ ಹಣಕಾಸು ಮತ್ತು ಕೇಂದ್ರ ಬ್ಯಾಂಕ್‌ಗಳ ಪ್ರತಿನಿಧಿಗಳ (ಎನ್‌ಸಿಬಿಡಿ) ಸಭೆ ನಡೆಸಲು ಸಿದ್ಧವಾಗಿದೆ. ಮಂಗಳವಾರದಿಂದ ಮೂರು ದಿನಗಳ ಕಾಲ ಇದು ನಡೆಯಲಿದೆ.

Advertisement

ಭಾರತದ ಅಧ್ಯಕ್ಷತೆಯಲ್ಲಿ ಜಿ-20 ಫೈನಾನ್ಸ್ ಟ್ರ್ಯಾಕ್ ನ ಕಾರ್ಯಸೂಚಿಯ ಮೇಲಿನ ಚರ್ಚೆಗಳ ಆರಂಭವನ್ನು ಸೂಚಿಸುವ ಈ ಸಭೆಯನ್ನು ಹಣಕಾಸು ಸಚಿವಾಲಯ ಮತ್ತು ಭಾರತೀಯ ರಿಸರ್ವ್‌ ಬ್ಯಾಂಕ್‌ ಜಂಟಿಯಾಗಿ ಆಯೋಜಿಸಿವೆ. ಭಾರತವು ಈ ಶೃಂಗಸಭೆಯ ಗುಂಪಿನ ಅಧ್ಯಕ್ಷತೆ ವಹಿಸಿಕೊಂಡ ಅನಂತರ ನಡೆಯಲಿರುವ ಸಭೆಗಳ ಪೈಕಿ ಎರಡು ಸಭೆಗಳು ಉದ್ಯಾನ ನಗರಿಯಲ್ಲಿ ನಿಗದಿಯಾಗಿವೆ. ಇದರಲ್ಲಿ ಎಫ್ಸಿಬಿಡಿ ಸಭೆ ಡಿ. 13ರಿಂದ 15ರ ವರೆಗೆ ನಡೆಯಲಿದೆ.

ಜಿ-20 ರಾಷ್ಟ್ರಗಳ ಹಣಕಾಸು ಸಚಿವರು ಮತ್ತು ಸೆಂಟ್ರಲ್‌ ಬ್ಯಾಂಕ್‌ ಗವರ್ನರ್‌ಗಳ ನೇತೃತ್ವದ ಜಿ-20 ಫೈನಾನ್ಸ್ ಟ್ರ್ಯಾಕ್ ಬಂಡವಾಳ ಮತ್ತು ಆರ್ಥಿಕ ವಿಷಯಗಳ ಮೇಲೆ ಕೇಂದ್ರೀಕೃತವಾಗಿದೆ. ಇದು ಜಾಗತಿಕ ಆರ್ಥಿಕ ಚರ್ಚೆ ಮತ್ತು ನೀತಿ ಸಮನ್ವಯಕ್ಕೆ ಪರಿಣಾಮ ಕಾರಿ ವೇದಿಕೆ ಒದಗಿಸಲಿದೆ. 2023ರ ಫೆ. 23ರಿಂದ 25ರ ವರೆಗೆ ಬೆಂಗಳೂರಿನಲ್ಲಿ ಹಣ ಕಾಸು ಸಚಿವರು ಮತ್ತು ಸೆಂಟ್ರಲ್‌ ಬ್ಯಾಂಕ್‌ ಗವರ್ನರ್‌ಗಳ ಸಭೆ ನಡೆಯಲಿದೆ.

ಫೈನಾನ್ಸ್‌ ಟ್ರ್ಯಾಕ್‌ ಕಾರ್ಯಸೂಚಿ ನಿಗದಿ
ಜಾಗತಿಕ ಆರ್ಥಿಕತೆ, ಆರ್ಥಿಕ ದೃಷ್ಟಿಕೋನ, ಅಂತಾರಾಷ್ಟ್ರೀಯ ಹಣಕಾಸು ರಚನೆ, ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು, ಸುಸ್ಥಿರ ಹಣಕಾಸು, ಜಾಗತಿಕ ಆರೋಗ್ಯ, ಅಂತಾರಾಷ್ಟ್ರೀಯ ತೆರಿಗೆ ಮತ್ತು ಹಣಕಾಸು ವಲಯದ ಸಮಸ್ಯೆಗಳನ್ನು ಒಳಗೊಂಡ ಜಾಗತಿಕ ಆರ್ಥಿಕತೆಯ ಪ್ರಸ್ತುತ ಪ್ರಮುಖ ವಿಷಯಗಳನ್ನು ಜಿ-20 ಫೈನಾನ್ಸ್ ಟ್ರ್ಯಾಕ್ ಚರ್ಚಿಸಲಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next