Advertisement
ಕಳೆದ 5 ತಿಂಗಳಿಂದ ಚೀನ -ಭಾರತ ಬಿಕ್ಕಟ್ಟು ಸೃಷ್ಟಿಯಾಗಿದ್ದು, ರಕ್ಷಣಾ ಇಲಾಖೆಯು ಸಾಗರೋಪಾದಿಯಲ್ಲಿ ವಾಸ್ತವಿಕ ಗಡಿನಿಯಂತ್ರಣ ರೇಖೆಯುದ್ದಕ್ಕೂ ಯುದ್ಧವಿಮಾನಗಳು, ಶಸ್ತ್ರಾಸ್ತಗಳು, ಸಹಸ್ರಾರು ಸಂಖ್ಯೆಯಲ್ಲಿ ಸೈನಿಕರನ್ನು ನಿಯೋಜಿಸಿದೆ. ವಾಯುಪಡೆ ದಿನದ ನಿಮಿತ್ತ ಪತ್ರಿಕಾಗೋಷ್ಠಿಯಲ್ಲಿ ಭದೌರಿಯಾ ಮಾತನಾಡಿದರು. ಚೀನ ದ ಪಡೆಗಳ ಸಾಮರ್ಥ್ಯದ ಬಗ್ಗೆ ಪ್ರಶ್ನೆ ಎದುರಾದಾಗ, “”ನಮ್ಮ ಎದುರಾಳಿಗಳನ್ನು ಕಡಿಮೆ ಅಂದಾಜು ಮಾಡುವ ಪ್ರಶ್ನೆಯೇ ಇಲ್ಲ. ನಿಸ್ಸಂಶಯವಾಗಿಯೂ ಅವರಿಗೆ ಅವರದ್ದೇ ಆದ ಶಕ್ತಿಯಿದೆ. ತಂತ್ರಜ್ಞಾನ, ಸಿಸ್ಟಮ್‌ಗಳಲ್ಲಿ ಚೀನ ದ ಹೂಡಿಕೆ ಅಗಾಧವಾಗಿದೆ” ಎಂದರು. ಭಾರತವು ಚೀನ ದ ದುರಾಕ್ರಮಣಕ್ಕೆ ತಡವಾಗಿ ಪ್ರತಿಕ್ರಿಯಿಸಿತು ಎನ್ನುವ ಆರೋಪ ಅಲ್ಲಗಳೆದ ಅವರು, “”ಮೇನಲ್ಲಿ ಚೀನ ಏನು ಮಾಡುತ್ತಿದೆ ಎನ್ನುವುದನ್ನು ಅರಿತ ನಾವು, ತ್ವರಿತ ಕ್ರಮ ಕೈಗೊಂಡಿದ್ದೇವೆ” ಎಂದು ಉತ್ತರಿಸಿದರು.
ಭಾರತ-ಚೀನ ಗಡಿ ಬಿಕ್ಕಟ್ಟು ಮುಂದು ವರಿದಿರುವಂತೆಯೇ, ನ.17ರಂದು ಪ್ರಧಾನಿ ಮೋದಿ, ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಪರಸ್ಪರ ಮುಖಾಮುಖೀಯಾಗಲಿದ್ದಾರೆ. ನ.17ರಂದು ರಷ್ಯಾ ಆಯೋಜಿಸಿರುವ ವರ್ಚುವಲ್ ಬ್ರಿಕ್ಸ್ ಶೃಂಗದಲ್ಲಿ ಉಭಯ ನಾಯಕರೂ ಪಾಲ್ಗೊಳ್ಳಲಿದ್ದಾರೆ. ಬ್ರೆಜಿಲ್, ರಷ್ಯಾ, ಭಾರತ, ಚೀನ ಮತ್ತು ದ. ಆಫ್ರಿಕಾದ ನಾಯಕರು ಭಾಗಿಯಾಗಲಿದ್ದು, ಶಾಂತಿ, ಭದ್ರತೆ, ಆರ್ಥಿಕತೆ ಸೇರಿದಂತೆ ವ್ಯೂಹಾತ್ಮಕ ಪಾಲುದಾರಿಕೆ ಕುರಿತು ಮಾತುಕತೆ ನಡೆಯಲಿದೆ.