ಹೈದರಾಬಾದ್: “ಅಗತ್ಯ ಎದುರಾದರೆ ಪೂರ್ವ ಲಡಾಖ್‌ನಲ್ಲಿ ಸೇನಾ ಸಿಬಂದಿಯ ನಿಯೋಜನೆಯನ್ನು ಇನ್ನಷ್ಟು ಹೆಚ್ಚಿಸಲು ನಾವು ಸಿದ್ಧ’ – ಹೀಗೆಂದು ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿವೇಕ್ ರಾಮ್ ಚೌಧರಿ ಹೇಳಿದ್ದಾರೆ.
ಹೈದರಾಬಾದ್‌ನ ದಿಂಡಿಗಲ್‌ನ ಕಾರ್ಯಕ್ರಮವೊಂದರಲ್ಲಿ ಶನಿವಾರ ಮಾತನಾಡಿರುವ ಅವರು, “ಪೂರ್ವ ಲಡಾಖ್‌ನಲ್ಲಿ ಬಿಕ್ಕಟ್ಟಿನ ಸ್ಥಿತಿ ಮುಂದುವರಿದಿದೆ. ಉಭಯ ಸೇನೆಗಳು ವಾಪಸ್ ಹೋಗಿಲ್ಲ. ಯಾವುದೇ ಸವಾಲು ಎದುರಿಸಲೂ ನಾವು ಸನ್ನದ್ಧರಾಗಿದ್ದೇವೆ’ ಎಂದಿದ್ದಾರೆ.
ಹಾಗೆಯೇ ತಮಿಳುನಾಡಿನ ವೆಲ್ಲಿಂಗ್ಟನ್‌ನಲ್ಲಿ ನಡೆದ ಸೇನಾ ಹೆಲಿಕಾಪ್ಟರ್ ದುರಂತದ ಬಗ್ಗೆಯೂ ಮಾತನಾಡಿದ ಅವರು, “ಮೂರೂ ಸೇನೆಗಳ ಸಮಿತಿಯಿಂದ ನ್ಯಾಯಯುತವಾಗಿ ತನಿಖೆ ನಡೆಸಲಾಗುತ್ತಿದೆ. ತನಿಖೆ ಪೂರ್ಣ ಗೊಳ್ಳಲು ಕೆಲವು ವಾರಗಳ ಸಮಯ ಬೇಕಾಗಲಿದೆ’ ಎಂದಿದ್ದಾರೆ.
ಇದನ್ನೂ ಓದಿ:ಸುಖೇಶ್ ಚಂದ್ರಶೇಖರ್ ಪತ್ನಿಯೇ ಮಾಸ್ಟರ್ ಮೈಂಡ್!
ಫೆಬ್ರವರಿಯಲ್ಲಿ ರಫೇಲ್: ಫ್ರಾನ್ಸ್‌ನಿಂದ ಖರೀದಿಸಲಾಗಿರುವ 36 ರಫೇಲ್ ಯುದ್ಧ ವಿಮಾನಗಳಲ್ಲಿ ಈಗಾಗಲೇ 32 ವಿಮಾನಗಳು ಭಾರತಕ್ಕೆ ಬಂದಿವೆ. ಉಳಿದ ನಾಲ್ಕರಲ್ಲಿ ಮೂರನ್ನು 2022ರ ಫೆಬ್ರವರಿಯಲ್ಲಿ ತರಲಾಗುವುದು ಎಂದು ಅವರು ತಿಳಿಸಿದ್ದಾರೆ.