Advertisement

ಕಣ್ಣೆದುರೇ ಬಿಸಿ ಬಿಸಿ ತಿನಿಸು ರೆಡಿ

12:07 AM Dec 15, 2019 | Lakshmi GovindaRaj |

ಬೆಂಗಳೂರು: ಬಾಯಲ್ಲಿ ನೀರೂರಿಸುವ ಧಾರವಾಡ ಪೇಡ, ಗೋಕಾಕದ ಕರದಂಟು, ಬೆಳಗಾವಿಯ ಕುಂದಾ, ಲಾಲ್‌ ಪೇಡಾ, ಜಿಲೇಬಿ… ಹೀಗೆ ಗ್ರಾಹಕರ ಕಣ್ಣೆದುರೇ ಬಿಸಿಬಿಸಿ ಸಿಹಿ ತಿನಿಸುಗಳು ತಯಾರಾಗುತ್ತವೆ.

Advertisement

ಧಾರವಾಡ ಪೇಡ ಸಿದ್ದಪಡಿಸಿಕೊಡುವ ಬಿಗ್‌ ಮಿಶ್ರಾ ಲೈವ್‌ ಮಳಿಗೆ ನಗರದಲ್ಲಿ ಆರಂಭವಗಿದೆ. ಗ್ರಾಹಕರಿಗೆ ತಾಜಾ ಸಿಹಿ ತಿನಿಸುಗಳನ್ನು ಒದಗಿಸುವ ಉದ್ದೇಶದಿಂದ ಗ್ರಾಂಡ್‌ ಮೆಜೆಸ್ಟಿಕ್‌ ಕಾಂಪ್ಲೆಕ್ಸ್‌ನಲ್ಲಿರುವ ನೂತನ ಮಳಿಗೆಯನ್ನು ಮಿಸೆಸ್‌ ಗ್ಲೋಬಲ್‌ ಯುನೈಟೆಡ್‌ ಪ್ರಶಸ್ತಿ ವಿಜೇತೆ ಡಾ. ನಮಿತಾ ಕೊಹೋಕ್‌ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸಂಜಯ್‌ ಗಣೇಶ್‌ ಮಿಶ್ರಾ, ಐದು ವರ್ಷಗಳ ಕನಸು ನನಸಾದಂತಾಗಿದೆ. ನೂತನ ಮಳಿಗೆಯಲ್ಲಿ ಗ್ರಾಹಕರು ಯಾವುದೇ ಸಮಯದಲ್ಲಿ ಬಂದು ಪೇಡಾದ ಗುಣಮಟ್ಟ ಹಾಗೂ ಸ್ವತ್ಛತೆಯ ಬಗ್ಗೆ ಪರಿಶೀಲನೆ ನಡೆಸಬಹುದು.

ಇಲ್ಲಿ ಪ್ರತಿ ಒಂದು ಗಂಟೆಗೆ 40 ಕೆ.ಜಿ. ಧಾರವಾಡ ಪೇಡ ತಯಾರಾಗುತ್ತದೆ. ಇಲ್ಲಿ ಲಭ್ಯವಿರುವ ಸುಮಾರು 14 ಬಗೆಯ ತಿನಿಸುಗಳೂ ಗ್ರಾಹಕರ ಸಮ್ಮುಖದಲ್ಲೇ ತಯಾರಾಗುತ್ತವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next