ಉಡುಪಿ: ವಿದ್ಯಾರ್ಥಿಗಳು ತಮ್ಮ ಓದಿನ ಜತೆಗೆ ಜಗತ್ತಿನ ಆಗು ಹೋಗುಗಳನ್ನು ಅವಲೋಕಿಸುತ್ತಿದ್ದು ಆವಶ್ಯ ಕೌಶಲ ಅಳವಡಿಸಿಕೊಳ್ಳುವುದರ ಮೂಲಕ ಈ ಕಾಲಘಟ್ಟದಲ್ಲಿ ಪ್ರಚಲಿತವಿರುವ ಕೃತಕ ಬುದ್ಧಿಮತ್ತೆ ಆಧಾರಿತ ಸವಾಲುಗಳನ್ನು ಎದುರಿಸಲು ಸನ್ನದ್ಧರಾಗಬೇಕೆಂದು ಕೋಡ್ ಲೋಗ್ಸ್ ಟೆಕ್ನಾಲಜಿಸ್‌ನ ಸುದರ್ಶನ್ ಮಲ್ಯ ತಿಳಿಸಿದರು.
ಎಂಜಿಎಂ ಕಾಲೇಜಿನ ಎಂಎಸ್ಸಿ ಕಂಪ್ಯೂಟರ್ ವಿಜ್ಞಾನ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ “ಟೆಕ್ನೋ ಕಲ್ಚರಲ್ ಉತ್ಸವ’ ಪ್ರದೀಪ್ತದ ಸಮಾರೋಪದಲ್ಲಿ ಅವರು ಮಾತನಾಡಿದರು.
ಅಕಾಡೆಮಿ ಆಫ್ ಜನರಲ್ ಎಜುಕೇಶನ್‌ನ ಕಾರ್ಯದರ್ಶಿ ವರದರಾಯ ಪೈ ಉದ್ಘಾಟಿಸಿದರು. ಪ್ರಾಶುಂಪಾಲ ಪ್ರೊ| ಲಕ್ಷ್ಮೀನಾರಾಯಣ ಕಾರಂತ, ಪಿಯು ಕಾಲೇಜಿನ ಪ್ರಾಶುಂಪಾಲೆ ಮಾಲತಿದೇವಿ, ಸಂಧ್ಯಾ ಕಾಲೇಜಿನ ಪ್ರಾಶುಂಪಾಲ ಡಾ| ದೇವಿದಾಸ್ ನಾಯ್ಕ, ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಪ್ರೊ| ರಮೇಶ ಕಾರ್ಲ, ಐಕ್ಯೂಎಸಿ ಸಮನ್ವಯಕಾರರಾದ ಪ್ರೊ| ಶೈಲಜಾ ಉಪಸ್ಥಿತರಿದ್ದರು.
ಕಂಪ್ಯೂಟರ್ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ| ಎಂ. ವಿಶ್ವನಾಥ ಪೈ ಪ್ರಸ್ತಾವನೆಗೈದರು. ಉಪನ್ಯಾಸಕರಾದ ಮಿಥುನ್, ಪಲ್ಲವಿ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಪ್ರೊ| ಪ್ರವೀಣಾ ಕುಮಾರಿ ಎಂ.ಕೆ., ಪ್ರೊ| ಪೂರ್ಣಿಮಾ ಶೆಟ್ಟಿ ಸಹಕರಿಸಿದ್ದರು.
ವಿದ್ಯಾರ್ಥಿಗಳಾದ ವರ್ಷಿಣಿ, ಪ್ರಸಾದ್, ಸುದರ್ಶನ್, ಶ್ರೀಹರಿ, ಹೃತಿಕ್‌ರಾಜ್, ಅಂಬಿಕಾ, ನಮೃತಾ, ಐಶ್ವರ್ಯಾ, ಸುಲಕ್ಷ್ಮೀ, ಸೌಜನ್ಯಾ, ದೀಕ್ಷಾ, ರಕ್ಷಿತಾ ನಿರೂಪಿಸಿದರು. ಪ್ರದೀಪ್ತದ ಸಂಯೋಜಕಿ ಪ್ರೊ| ಪವಿತ್ರಾ ಕೆ. ವಿವಿಧ ಸ್ಪರ್ಧೆಗಳ ವರದಿ ವಾಚಿಸಿದರು. ಪ್ರದೀಪ್ತದ 13 ಸ್ಪರ್ಧೆಗಳಲ್ಲಿ 345 ವಿದ್ಯಾರ್ಥಿಗಳು ಪ್ರತಿಭೆ ಪ್ರದರ್ಶಿಸಿದರು.