Advertisement

370 ಮತ್ತು 35ಎ ರದ್ದು : ಇಲ್ಲಿದೆ ಉದಯವಾಣಿ ಓದುಗರ ಅಭಿಪ್ರಾಯ

03:40 PM Aug 29, 2019 | keerthan |

ಮಣಿಪಾಲ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಅಧಿಕಾರವನ್ನು ರದ್ದುಗೊಳಿಸಿ ಕೇಂದ್ರ ಸರಕಾರ ಸೋಮವಾರ ಐತಿಹಾಸಿಕ ನಿರ್ಣಯ ಕೈಗೊಂಡಿತ್ತು. ಈ ಬೆಳವಣಿಗೆಯ ಬಗ್ಗೆ ʼಉದಯವಾಣಿʼ ತನ್ನ ಓದುಗರಿಂದ ಪ್ರತಿಕ್ರಿಯೆ ಸಂಗ್ರಹಿಸಿದ್ದು, ಆಯ್ದ ಪ್ರತಿಕ್ರಿಯೆಗಳು ಇಲ್ಲಿವೆ.

Advertisement

ಕಾಶ್ಮೀರ ನಮ್ಮದು ಅದಕ್ಕಾಗಿ ಇಂತಹ ಕಠಿನ ನಿರ್ಧಾರವನ್ನು ಕೈಗೊಂಡ ಕೇಂದ್ರ ಸರಕಾರಕ್ಕೆ ಹೃದಯ ಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇನೆ.
ಶಶಿ ಗೌಡ್ರು, ಬೆಂಗಳೂರು
*
ಇವತ್ತು ಭಾರತೀಯರಿಗೆ ತುಂಬಾ ಸಂತೋಷದ ದಿನ ಅಂತ ಹೇಳಲು ಇಷ್ಟಪಡುತ್ತೆನೆ . ಇದುವರೆಗಿನ ಯಾವುದೇ ಕೇಂದ್ರ ಸರಕಾರಗಳು ನಮ್ಮ ದೇಶದ ಭದ್ರತೆಯ ಕಾಪಾಡುವಲ್ಲಿ ವಿಫಲವಾಗದ್ದವು. ಈಗ ನಮ್ಮ ದೇಶವನ್ನು ಕಾಪಾಡುವಲ್ಲಿ ಮೋದಿಯವರು ಯಶಸ್ವೀಯಾಗಿದ್ದಾರೆ.
ನಾಗರಾಜ್, ಗೌರಿಬಿದನೂರು
*
ನಮ್ಮವರೆ ಕೆಲವರು ಈ ವಿಧಿಗೆ ಪರವಾಗಿದ್ದರು. ಇನ್ನೂ ಕೆಲವರು ಅದಕ್ಕೆ ವಿರುದ್ಧವಾಗಿದ್ದರು. ದೇಶದ ಹಿತದೃಷ್ಟಿಯಿಂದ ಮತ್ತು ಸೈನಿಕರ ನೆಮ್ಮದಿಯ ಉಸಿರಾಟಕ್ಕಾಗಿ ಈ ಒಂದು ರದ್ದತಿ ಒಂದು ಸ್ವಾಗತಾರ್ಹವಾದುದು.
ಕೆಎಸ್ಪಿ ಪ್ರವೀಣ್ ಬಣ್ಣೆಸೂರು, ಗುಲ್ಬರ್ಗ
*
ಕಣಿವೆ ರಾಜ್ಯದ ನಾಗರಿಕರನ್ನು ಸಂಪೂರ್ಣ ಭಾರತೀಯರನ್ನಾಗಿಸಿದ ಈ ಕಾರ್ಯ ಅತ್ಯುತ್ತಮ ಆಡಳಿತಾತ್ಮಕ ನಡೆಯಾಗಿದೆ. ಇದಕ್ಕೆ ಪರ್ಯಾಯವಾಗಿ ಅವರಿಗೆ ಹೇರಳ ಉದ್ಯೋಗಾವಕಾಶ, ವಿಪುಲ ನಾಗರಿಕ ರಕ್ಷಣಾ ಸೌಲಭ್ಯ, ಕೈಗಾರಿಕಾ ಕ್ರಾಂತಿ ಇನ್ನಿತರ ಮೂಲ ಸೌಕರ್ಯಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಿದಾಗ ಮಾತ್ರ ಅಲ್ಲಿ ಶಾಂತಿ ನೆಲೆಸುವುದು. ಮತ್ತೊಂದೆಡೆ ಈ ಮಸೂದೆ ಪ್ರತ್ಯೇಕವಾದಿಗಳಿಗೆ ಹಿನ್ನಡೆಯಾಗಿದೆ.
ಮೆಹಬೂಬ್, ಹುನಗುಂದ
*
370 ಮತ್ತು 35ಎ ಕಲಂ ರದ್ದು ಮಾಡುವ ಮೂಲಕ, ಪ್ರತ್ಯೇಕತಾವಾದಿ ಮತ್ತು ಅಲ್ಲಿನ ರಾಜಕೀಯ ಪಕ್ಷಗಳಿಗೆ ಕೇಂದ್ರ ಸರಕಾರ ಮೂಗುದಾರ ಹಾಕಿದೆ. ಭಯೋತ್ಪಾದಕರೆಲ್ಲ ಇನ್ನು ಹಲ್ಲು ಇಲ್ಲದ ಹಾವಿನಂತಾಗಿದ್ದಾರೆ.
ಅರುಣ್ ಹೊಸ್ಮಠ
*
ಕಾಶ್ಮೀರದ ಕೆಲವೇ ಕೆಲವು ಗಲ್ಲಿಗಳ ಜನರ ಆಶೋತ್ತರಗಳಿಗಾಗಿ  ಭಾರತದ ಪರವಿದ್ದ, ಇಂದಿಗೂ ಕೂಡ ಭಾರತದ ಜತೆ ಅವಿನಾಭಾವ ಸಂಬಂಧದಿಂದ ಬದುಕುತ್ತಿರುವ ಬಹುಸಂಖ್ಯಾತ ಭಾರತ ಪ್ರೇಮಿ ಕಾಶ್ಮೀರಿಗಳ ದಶಕಗಳ ಹೋರಾಟಕ್ಕೆ ಇಂದು ಜಯ ಸಿಕ್ಕಿದೆ. ತಮ್ಮ ಮೂಲ ನೆಲ ಬಿಟ್ಟು ನಮ್ಮ ದೇಶದಲ್ಲೇ ನಿರಾಶ್ರಿತರಂತೆ ಬದುಕುತ್ತಿರುವ ಪಂಡಿತರಿಗೆ ತಮ್ಮ ಬದುಕು ಕಟ್ಟಿಕೊಳ್ಳಲು ಅನುವು ಮಾಡಿಕೊಟ್ಟಲ್ಲಿ, ಈಗ ತಂದಿರುವ ಆದೇಶಕ್ಕೆ ಒಂದು ಕಳೆ ಬರುತ್ತದೆ.
ಸಿದ್ದು ತಿಪಟೂರು
*
ನನಗೆ ಕೆಲವು ವರ್ಷಗಳ ಹಿಂದೆ ಕೆಲವು ಕಾಶ್ಮೀರದ ಯುವಕರೊಂದಿಗೆ ಮಾತಾಡುವ ಅವಕಾಶ ಸಿಕ್ಕಿತ್ತು. ಅವರಿಗೆ ಪಾಕಿಸ್ತಾನ ಜತೆಗೆ ಹೋಗುವ ಕಿಂಚಿತ್ತು ಮನಸಿಲ್ಲ, ಅವರಿಗೆ ಭಾರತವೇ ಇಷ್ಟ. ಆದರೆ ಅವರಿಗೆ ಯಾವುದೇ ರಾಜಕೀಯ ಪಕ್ಷಗಳ ಮೇಲೆ ನಂಬಿಕೆ ಇಲ್ಲ. ಕಾಶ್ಮೀರ ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯ. ಹಾಗಾಗಿ ಕಾಶ್ಮೀರ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಆಗಬೇಕು ಅಂದರೆ ಒಂದು ದೇಶ ಒಂದೇ ಕಾನೂನು ಜಾರಿಯಾಗಬೇಕಿದೆ.
ಸರ್ಫುದ್ದೀನ್ ಸಯ್ಯದ್,
*
ಕೇಂದ್ರ ಸರಕಾರ ಕಾಶ್ಮೀರದ ವಿಚಾರದಲ್ಲಿ ತೆಗೆದುಕೊಂಡ ನಿರ್ಧಾರ ತಂಬಾ ಮಹತ್ವ ಮತ್ತು ಐತಿಹಾಸಿಕ. ವಿಧಿ 370 ಮತ್ತು 35ಅ ನ ಮುಖಾಂತರ ಜಮ್ಮು ಕಾಶ್ಮೀರ ಭಾರತ ದೇಶದ ಅಂಗವಾಗಿದ್ದರೂ, ಪ್ರತ್ಯೇಕ ದೇಶ ಎಂಬ ಭಾವನೆ ಅಲ್ಲಿತ್ತು. ಇದರ ನಿರ್ಮೂಲನೆಯಲ್ಲಿ ಬಹು ದೊಡ್ಡ ಹೆಜ್ಜೆ ಎಂದು ಹೇಳಬಹುದು. ಹಾಗೆ ಈ ಕಾನೂನು ಜಾರಿಗೆ ತರುವಾಗ  ಡಾ. ಬಿ.ಆರ್. ಅಂಬೇಡ್ಕರ್ ರವರು ಮತ್ತು ಶಾಮ್ ಪ್ರಸಾದ್ ಮುಖರ್ಜಿ ರವರು ಖಂಡ ತುಂಡವಾಗಿ ವಿರೋಧ ಮಾಡಿದ್ದರು.
ಸಂಗನ್ಗೌಡ್ ಬಾಲಕೋಟ್
*
ನಿಜಕ್ಕೂ ಇದು ಅತ್ಯಂತ ಮಹತ್ವದ ಹೆಜ್ಜೆ. ಭಾರತಕ್ಕೆ ಈಗ ಹೊರಗಿನ ಯಾವುದೇ ಶತ್ರುಗಳ ಭಯವಿಲ್ಲ. ಅದು ಇಂದಿಗೆ ಅರ್ಧದಷ್ಟು ಕಡಿಮೆಯಾಗಿದೆ. ಈಗ ಕೇಂದ್ರ ತೆಗೆದುಕೊಂಡ ನಿರ್ಧಾರವನ್ನುವಿರೋಧಿಸುವ, ದೇಶಕ್ಕೆ ಮಾರಕವಾಗುವಂತ ಚಟುವಟಿಕೆ ನೆಡೆಸುತ್ತಿರುವವರನ್ನು ನಿಯಂತ್ರಿಸಿದರೆ ಶಾಂತಿ ಸಾಧ್ಯ.
ಶಂಕರ್ ಜಿ. ಭದ್ರಾವತಿ
*
ಇದೊಂದು ಐತಿಹಾಸಿಕ ನಿರ್ಧಾರ. ಇದಕ್ಕೆ ನಾಯಕತ್ವ ಅಂತ ಹೇಳೋದು ನಾನು ಕೂಡ ಅಲ್ಲಿಗೆ ಹೋಗಿದ್ದೆ. ಅಲ್ಲಿ ನೋಡಿದಾಗ ಇದು ನಮ್ಮ ದೇಶದದಲ್ಲಿ ಇದೆಯೇ ಅಥವಾ ಬೇರೆ ಎಲ್ಲಿದೆ ಅಂತ ನನಗೆ ಗೊಂದಲ ಆಯಿತು. ಆದರೆ ಇದು ಒಂದು ದಿಟ್ಟ ನಿರ್ಧಾರ ಕೆಲವು ಸಲ ಬೇಕಾಗುತ್ತದೆ.
ಕೋಟೇಶ್ವರಪ್ಪ, ರಾಯಚೂರು
*
ಡಾ. ಬಿ.ಆರ್. ಅಂಬೇಡ್ಕರ್ ಅವರು ವಿರೋಧಿಸಿದ ಆರ್ಟಿಕಲ್ 370 ಮತ್ತು 35ಎ ಅನ್ನು ಇಂದು ರದ್ದು ಮಾಡಲಾಗಿದೆ. ನಾವು ಬಿಜೆಪಿ ಸಿದ್ದಾಂತಗಳನ್ನುವಿರೋಧ ಮಾಡ್ತಿವಿ .ಆದ್ರೆ ಅಖಂಡ ಭಾರತದಲ್ಲಿ ಭಯೋತ್ಪಾದನೆ ನಿರ್ಮೂಲನೆಗೆ ನಾವು ಬೆಂಬಲ ಕೋಡುತ್ತೇವೆ. ಪ್ರಧಾನ ಮಂತ್ರಿಯವರಿಗೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ವತಿಯಿಂದ ಅಭಿನಂದನೆ.
ಚಂದ್ರಶೇಖರ, ಬಿಜಾಪುರ
*
ಖಂಡಿತಾ ಇದೊಂದು ಅವಿಸ್ಮರಣೀಯ ನಿರ್ಧಾರ. ಅಖಂಡ ಭಾರತ ನಿರ್ಮಾಣ ಸಂಕಲ್ಪವನ್ನು ಅಂದಿನ ವಲ್ಲಭ ಭಾಯಿ ಪಟೇಲ್ ರವರು ಮಾಡಿದ್ದರು. ಭಾರತದಲ್ಲಿ ಭಯೋತ್ಪಾದನೆ ಕರಿ ನೆರಳು ಇಲ್ಲದಂತೆ ಮಾಡುವ ಒ೦ದು ದೃಢ ನಿರ್ಧಾರಕ್ಕೆ, ಒಂದು ದೊಡ್ಡ ಹೆಜ್ಜೆ ಇಂಥ ಸಂದರ್ಭದಲ್ಲಿ ಪ್ರತಿಯೊಬ್ಬ ಭಾರತೀಯನು ಕೂಡ ಸಂಭ್ರಮಿಸುವಂತೆ ಮಾಡಿದ ಕೇಂದ್ರ ಸರಕಾರಕ್ಕೆ ಧನ್ಯವಾದಗಳು.
ಶಿವಾನಂದ್ ಹಿರೇಮಠ, ಬೆಂಗಳೂರು
*
ದೇಶದ ಅಂದಿನ ಸಂದರ್ಭದಲ್ಲಿ 370/ 35ಎ ಅವಶ್ಯವಿದ್ದಿರಬಹುದು. ಇಂದು ಬದಲಾದ ದೇಶದ ಸ್ಥಿತಿಗತಿ ಅನುಗುಣವಾಗಿ 370/35ಎ ರದ್ದು ಆಗಿರಬಹುದು. ಇದೇ ಕಾಶ್ಮೀರ ಸಮಸ್ಯೆಗೆ ಶಾಶ್ವತ ಪರಿಹಾರ ಅಲ್ಲ. ಏನೇ ಆಗಲಿ ದೇಶಕ್ಕೆ ಒಳ್ಳೇಯದಾಗಲಿ. ದೇಶದ ಜನರನ್ನು ʼಭಾವನಾತ್ಮಕʼ ಬಂಧನದಿಂದ ಬಹಳ ದಿನ ಬಂಧಿಸಲಾಗದು.
ಮಹೇಶ ಜಿ. ಪಟ್ಟಣಶೆಟ್ಟಿ, ಗದಗ
*
ಭಾರತದ ಇತಿಹಾಸದಲ್ಲಿ ಈ ದಿನವನ್ನು ಸುವರ್ಣ ಅಕ್ಷರಗಳಲ್ಲಿ ಬರೆದಿಡುವ ದಿನವಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿದ್ದ ಹಿಂಸಾತ್ಮಕ ಚಟುವಟಿಕೆಗಳ ಮೇಲೆ ಕಡಿವಾಣ ಹಾಕಿ ಉಗ್ರವಾದವನ್ನು ಸಂಪೂರ್ಣವಾಗಿ ಕಿತ್ತೊಗೆಯಲು ಕೇಂದ್ರ ಸರ್ಕಾರ ಇಟ್ಟ ಮೊದಲ ಹೆಜ್ಜೆಯಾಗಿದೆ.
ಭರತ್ ಪಡುವಾಲ್, ಬಾಗಲಕೋಟೆ
*
ಜಮ್ಮು ಕಾಶ್ಮೀರದಲ್ಲಿನ ಅರ್ಟಿಕಲ್ 370ನೇ, 35ಎ ರದ್ದುಪಡಿಸಿರುವುದು ಸಮಾನತೆಯನ್ನು ತಂದು ನಾವೆಲ್ಲ ಭಾರತೀಯರು ಎಂಬ ಭಾವನೆ ಹುಟ್ಟಲು ಸಹಾಯವಾಗುತ್ತದೆ. ಇನ್ನು ಈ ಸಮಸ್ಯೆ ಹೀಗೆ ಮುಂದುವರಿದಿದ್ದರೆ ಪ್ರತ್ಯೇಕ ಸೌಲಭ್ಯಗಳ ನೆರವಿನಿಂದ ಕಾನೂನು, ನೀತಿ ನಿಯಮಗಳಿಂದ ಅಲ್ಲಿನ ಅಧಿಕಾರಸ್ಥರು ಜನರನ್ನು ತಪ್ಪು ದಾರಿಗೆ ತಂದು ಭಯೋತ್ಪಾದಕ ಚಟುವಟಿಕೆಗಳಿಗೆ ಇಳಿಯುತ್ತಿದ್ದರು.
ಸಣ್ಣಮಾರಪ್ಪ. ಚಂಗಾವರ
*
ಜಮ್ಮು ಮತ್ತು ಕಾಶ್ಮೀರದಲ್ಲಿ ಅವರದ್ದೇ ಆದ ಕಾನೂನು ಇರುವುದರಿಂದ ಭಯೋತ್ಪಾದನೆಗೆ ಅಲ್ಲಿಯ ಅಮಾಯಕ ಯುವಕರನ್ನು ಅಲ್ಲಿಯ ಪ್ರತ್ಯೆಕ ವಾದಿಗಳು ಕೆಲ ರಾಜಕೀಯ ನಾಯಕರು ಇದನ್ನ ತಮ್ಮ ಬೇಳೆ ಬೆಯಿಸಿಕೊಳ್ಳಲು ಬಳಸುತ್ತಿದ್ದರು. ಈಗ ವಿಶೇಷ ಸ್ಥಾನಮಾನ ತೆರವು ಗೊಳಿಸಿದರೆ ಕೇಂದ್ರ ಸರಕಾರ ಇದಕ್ಕೆಲ್ಲ ಪರಿಹಾರ ಹುಡಿಕಿಕೊಳ್ಳಲಿದೆ.
ವೆಂಕಟಗಿರಿ, ಸಾಗರ
*
ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದ್ದರೂ 370/35ಎ ಅನ್ನೋ ವಿಶೇಷ ಸ್ಥಾನಮಾನದ ದುರುಪಯೋಗ ಮಾಡಿಕೊಂಡು ಪ್ರತ್ಯೇಕ ವಾದಿಗಳು ಭಯೋತ್ಪಾದನೆ ಮತ್ತು ಪಾಕಿಸ್ತಾನದ ಪರ ಇವರ ಮುಖ್ಯ ಉದ್ದೇಶವಾಗಿತ್ತು.
ನವೀನ್ ನಾಯ್ದು, ಭದ್ರಾವತಿ
*
ಬಹುಶಃ ಇನ್ನಾದರೂ ಭಾರತದ ಶಿರದಂತಿರುವ ಕಾಶ್ಮೀರದ ಶಿಖರದಲ್ಲಿ ಶಾಂತಿ ನೆಲೆಸಲಿ. ಈವರೆಗೆ ಆ ಕಾಶ್ಮೀರದಲ್ಲಿ ಜೀವತ್ಯಾಗ ಮಾಡಿದ ಅದೆಷ್ಟೋ ವೀರ ಯೋಧರಿಗೆ ಈ ದಿನ ಆತ್ಮಶಾಂತಿ ದೊರೆತ ದಿನ ಎಂದರೆ ತಪ್ಪಾಗಲಾರದು. ಭವಿಷ್ಯದ ಭಾರತ, ನೆಮ್ಮದಿಯ ಭಾರತ.
ಮನುಗೌಡ, ನಾಗಮಂಗಲ
*
ಭಾರತ ಸರ್ಕಾರ ತೆಗೆದುಕೊಂಡ ನಿರ್ಣಯದಿಂದ ನಾವೆಲ್ಲ ಭಾರತೀಯರು ಹೆಮ್ಮೆ ಪಡುವಂತದ್ದು. ಇವು ಭಾರತದ ಸಾರ್ವಭೌಮತ್ವವನ್ನು ಅಲುಗಾಡಿಸುತ್ತಿರುವ ಕಲ೦ಗಳಿವು. ರದ್ದುಪಡಿಸಿಲು ಶಿಫಾರಸು ಮಾಡುವ ಐತಿಹಾಸಿಕ ನಿರ್ಣಯ ತೆಗೆದುಕೊಂಡಿದ್ದಕ್ಕೆ ಕೇಂದ್ರ ಸರಕಾರಕ್ಕೆ ಅಭಿನಂದನೆಗಳು.
ಮಂಜು ಹೆಗಡೆ, ದಾವಣಗೆರೆ

Advertisement

Udayavani is now on Telegram. Click here to join our channel and stay updated with the latest news.

Next