Advertisement

ರೀಡರ್‌ ಡೈಜೆಸ್ಟ್‌; ನೀವು “ಪ್ರಷರ್‌’ಕುಕ್ಕರ್‌ ಆಗಬೇಡಿ!

09:56 AM Jan 08, 2020 | Sriram |

ಪರೀಕ್ಷೆ ಕಾಲದಲ್ಲಿ ಹೇಗೆ ಓದಬೇಕು ಅನ್ನೋದೇ ತಲೆನೋವು. ಇದರಿಂದ ಉಂಟಾಗುವ ಒತ್ತಡವನ್ನು ನಿಭಾಯಿಸುವುದು ಇನ್ನೊಂಥರ ಬೇನೆ. ಎಷ್ಟೋ ವಿದ್ಯಾರ್ಥಿಗಳಿಗೆ ಬೆಳಗ್ಗೆ ಓದಬೇಕೋ, ರಾತ್ರಿ ಓದಬೇಕೋ, ಓದಿ ಓದಿ ಬೇಜಾರು ಆದಾಗ ಏನು ಮಾಡಬೇಕು ಅನ್ನೋದೇ ತಿಳಿದಿರಲ್ಲ. ಈ ಎಲ್ಲವನ್ನು ತೀರ್ಮಾನ ಮಾಡಬೇಕಾದದ್ದು ವಿದ್ಯಾರ್ಥಿಗಳೇ ಹೊರತು, ಹೆತ್ತವರಾಗಲೀ, ಗೆಳೆಯರಾಗಲಿ ಅಲ್ಲ.ಒತ್ತಡ ನಿಭಾಯಿಸುವುದು ಹೇಗೆ? ಇಲ್ಲಿದೆ ಮಾಹಿತಿ.

Advertisement

ಕಣ್ಣ ಮುಂದೆ ಪರೀಕ್ಷೆಯ ಕ್ಯಾಲೆಂಡರ್‌ ನೇತಾಡುತ್ತಿದೆ. ತಿಂಗಳಾಯಿತು, ಈಗ ದಿನಗಣನೆ ಶುರು. ಎಷ್ಟೋ ವಿದ್ಯಾರ್ಥಿಗಳಿಗೆ, ಪರೀಕ್ಷೆ ಅನ್ನೋ ಹೆಸರಿಂದಲೇ ಒತ್ತಡ ಶುರುವಾಗಿ, ಓದಿದ್ದು ಕಲಸುಮೇಲೋಗರವಾಗಿ, ಗೊತ್ತಿರುವುದೆಲ್ಲಾ, ಗೊತ್ತಿಲ್ಲದಂತೆ ಆಗಿಬಿಡುವ ಸಾಧ್ಯತೆ ಉಂಟು. ಹೀಗಾದಾಗ, ಸಹಜವಾಗಿ ಆತ್ಮವಿಶ್ವಾಸ ಕುಸಿಯುತ್ತದೆ; ಮಕ್ಕಳು ಪೆಚ್ಚಾಗುತ್ತಾರೆ; ಸರಿಯಾಗಿ ಊಟ ಮಾಡೋಲ್ಲ, ದಿನವಹಿ ಓದುವುದೇ ಉದ್ಯೋಗ. ಈ ರೀತಿ ಅನ್‌ಪ್ಲಾನ್‌x ಆಗಿ ಓದಿದರೆ ತಲೆಗೆ ಹೇಗೆ ತಾನೇ ವಿಷಯ ಮುಟ್ಟುತ್ತದೆ? ಓದನ್ನು ಕ್ರಮವಾಗಿ ಮಾಡಿದ್ದರೆ ಹೀಗೆ ಆಗೋದಿಲ್ಲ.

ಕ್ರಮ ಅಂದರೆ ಏನು, ಇದಕ್ಕೂ ಮೊದಲು ತಿಳಿಯ ಬೇಕಾದ ಇನ್ನೊಂದು ವಿಚಾರವಿದೆ. ನಮ್ಮ ಬ್ರೈನ್‌ನಲ್ಲಿ ಶಾರ್ಟ್‌ಟೈಂ ಮತ್ತು ಲಾಂಗ್‌ ಟೈಂ ಮೆಮೊರಿ ಅಂತ ಇದೆ. ಶಾಲೆಯ ಪಾಠವನ್ನು ಗ್ರಹಿಸಿ, ಮನೆಗೆ ಬಂದು ಓದಿದಾಗ ಶಾರ್ಟ್‌ ಟೈಂ ಮೆಮೊರಿಯಲ್ಲಿರುತ್ತದೆ. ಪದೇ ಪದೇ ಇದನ್ನು ರಿವೈಸ್‌ ಮಾಡುವುದರಿಂದ ಲಾಂಗ್‌ಟರ್ಮ್ ಮೆಮೊರಿಗೆ ಹೋಗುತ್ತದೆ. ಇಂಥ ವಿದ್ಯಾರ್ಥಿಗಳು ಪರೀಕ್ಷೆ ಸಮಯದಲ್ಲಿ ರಿವಿಷನ್‌ ಮಾಡಿಕೊಂಡರೆ ಸಾಕು, ಲಾಂಗ್‌ಟರ್ಮ್ ಮೆಮೊರಿಯಿಂದ ನೇರ ಪತ್ರಿಕೆಗೆ ಉತ್ತರ ಬಂದುಬಿಡುತ್ತದೆ.

ತಂತ್ರ ಇಲ್ಲಿದೆ
ಓದುವುದಕ್ಕೂ ತಂತ್ರವಿದೆ. ಅದರ ಹೆಸರುsq3r. ಅಂದರೆ,Survey, question, read, recite, and review. ಇದಕ್ಕೆ ಉದಾಹರಣೆ ಕೊಡ್ತೀನಿ. ನೀವು ಒಂದು ಕಾರ್‌ ಕೊಂಡುಕೊಳ್ಳಬೇಕು ಅಂದರೆ ಏನು ಮಾಡ್ತೀರಿ? ನಿಮ್ಮ ಬಜೆಟ್‌ ನೋಡ್ತೀರಿ, ಫೀಚರ್ಸ್‌ ಏನೇನಿದೆ ಗಮನಿಸ್ತೀರಿ, ಮೈಲೇಜ್‌ ಲೆಕ್ಕಾ ಹಾಕ್ತೀರಿ, ಲಾಂಗ್‌ ಡ್ರೈವ್‌ ಕೂಡ ಹೋಗಬಹುದಾ ಅಂತ ನೋಡ್ತೀರಿ ಅಲ್ವೇ? ಒಟ್ಟಾರೆ, ಮಾರ್ಕೆಟ್‌ ಸರ್ವೆ ಮಾಡ್ತೀರಿ. ನೀವು ಓದುವ ವಿಷಯದ ಬಗ್ಗೆಯೂ ಹೀಗೆ ಮಾಡಬೇಕು. ಆಮೇಲೆ ಎಂದೆಲ್ಲಾ ಈ ಪಾಠ ಓದಿದರೆ ನನಗೇನು ಸಿಗುತ್ತದೆ, ನಿಜ ಬದುಕಿಗೆ ರಿಲೇಟಾಗಿರುತ್ತದೆಯೇ ಎಂದೆಲ್ಲಾ ಪ್ರಶ್ನೆಗಳನ್ನು ಕೇಳಿಕೊಂಡು ಓದಲು ಶುರುಮಾಡಬೇಕು. ತಿಳಿದದ್ದನ್ನು ಮತ್ತೆ ಮತ್ತೆ ಪಠಿಸಬೇಕು. ಎಲ್ಲ ಆದ ಮೇಲೆ ಪುಸ್ತಕ ಮುಚ್ಚಿಟ್ಟು, ಈಗ ನನಗೆಷ್ಟು ನೆನಪಿದೆ, ಎಷ್ಟು ಪ್ರಶ್ನೆಗೆ ಸ್ವತಂತ್ರವಾಗಿ ಉತ್ತರಿಸಬಹುದು ಅಂತ ತಿಳಿದುಕೊಳ್ಳಬೇಕು. ಇದನ್ನು ರಿವ್ಯೂ ಅಂತಾರೆ. ಸುಮ್ಮನೆ ಓದಿಕೊಂಡರೆ, ಆಸಕ್ತಿದಾಯಕ ವಿಷಯಗಳು ಮಾತ್ರ ನಮ್ಮ ಗಮನ ಸೆಳೆಯುತ್ತೆ. ಎಲ್ಲವನ್ನೂ ಓದಿದ್ದೀವಿ ಅನ್ನೋ ಖುಷಿ ಮಾತ್ರ ಜೊತೆಗಿರುತ್ತದೆ. ಆಮೇಲೆ ಮರೆತು ಹೋಗಿರುತ್ತದೆ. ಅಂದರೆ, ಒಂದೊಂದು ಶಬ್ದವನ್ನೂ ಅರ್ಥ ಮಾಡಿಕೊಂಡು ಓದೊRàಬೇಕು. ಬರಬರ ಅಂತ ಅಲ್ಲ. ಇದನ್ನು ಇಷ್ಟನ್ನು ಮಾಡಿಕೊಂಡರೆ ರೀಡಿಂಗ್‌ ಪಕ್ಕಾ. ಮೊದಲ ಸಲ ಓದೋಕೆ ಒಂದು ಗಂಟೆ ಸಮಯ ಹಿಡಿದರೆ, ಎರಡನೆ ಸಲಕ್ಕೆ ಮೊದಲದರಲ್ಲಿ 10-15 ನಿಮಿಷ ಕಡಿಮೆ ಆಗುತ್ತೆ. ಮೂರು ನಾಲ್ಕನೇ ಸಾರಿ ರಿವೈಸ್‌ ಮಾಡೋ ಹೊತ್ತಿಗೆ ದೊಡ್ಡ ಪಾಠವನ್ನು ಹದಿನೈದೇ ನಿಮಿಷದಲ್ಲಿ ಮುಗಿಸಬಹುದು.

ಮೆದುಳಲ್ಲಿ ವಿಷ್ಯುಯಲ್‌ ಇಂಪ್ರಿಂಟ್‌ ಅಂತಿರುತ್ತದೆ. ನೀವು ಏನು ನೋಡುತ್ತೀರೋ, ಹೇಗೆ ಓದಿರುತ್ತೀರೋ ಹಾಗಾಗೇ ನೆನಪಿರುತ್ತದೆ. ಸೆಲ್ಸ್‌ ಆಗ್ಯಾìನ್‌ ಹೆಚ್ಚೆಚ್ಚು ಕೆಲಸ ಮಾಡಿದಂತೆ, ವಿಷ್ಯುಯಲ್‌ ಪ್ರಿಂಟ್‌ ಮೆಮೊರಿ ಕ್ರಿಯಾಶೀಲವಾಗುತ್ತದೆ. ಉದಾಹರಣೆಗೆ- ನಾವು ಸಿನಿಮಾ ನೋಡ್ತೀವಿ ಅಂತಿಟ್ಟುಕೊಳ್ಳಿ. ಚಿತ್ರವನ್ನು ನೋಡ್ತೀವಿ, ಡೈಲಾಗ್ಸ್‌ ಕೇಳ್ತೀವಿ, ಅನುಭವಿಸುತ್ತೀವಿ. ಹೀಗಾಗಿ ನೆನಪು ಜಾಸ್ತಿ. ಸಿನಿಮಾದ ಒಂದು ಲೈನ್‌ ಸ್ಟೋರಿ ಹೇಳಿದರೆ ನಿಮಗೆ ಇಡೀ ಸಿನಿಮಾ ನೆನಪಾಗುತ್ತದೆ. ಅದೇ ರೀತಿ, ಓದಲ್ಲೂ ಹೀಗೆ, ರಿವೈಸ್‌ ಮಾಡಿದ್ದನ್ನು ಪದೇ ಪದೆ ನೆಪಿಟ್ಟುಕೊಳ್ಳೋಕೆ ಪಠ್ಯ ಪುಸ್ತಕದಲ್ಲಿ ಗುರುತು ಮಾಡಿಟ್ಟುಕೊಂಡಿರಿ. ಅದು ವಿಷ್ಯುಯಲ್‌ ಇಂಪ್ರಿಟ್‌ನಲ್ಲಿ ಉಳಿದಿರುತ್ತದೆ.

Advertisement

ಜೋರಾಗಿ ಓದಬೇಕ?
ಜೋರಾಗಿ ಓದಿಕೊಳ್ಳೋದು, ಗ್ರೂಪ್‌ ಡಿಸ್ಕರ್ಷನ್‌, ಓದಿದ್ದನ್ನು ಪದೇ ಬರೆಯುವುದು, ತಾವು ಗ್ರಹಿಸಿದ್ದನ್ನು ಬೇರೆಯವರಿಗೆ ಪಾಠ ಮಾಡೋದು-ಇವೆಲ್ಲ ನೆನಪುಗಳನ್ನು ಗಟ್ಟಿ ಮಾಡುತ್ತವೆ. ಬೇರೆಯವರಿಗೆ ಪಾಠ ಮಾಡುವ ಕ್ರಮ ಬಹಳ ಪರಿಣಾಮಕಾರಿ. ಏಕೆಂದರೆ, ಬೇರೆಯವರಿಗೆ ಪಾಠ ಮಾಡಬೇಕಾದರೆ, ನಮಗೆ ಮೊದಲು ವಿಷಯ ಅರಗಿರಬೇಕು. ಆದರೆ, ಓದಿನ ಈ ಎಲ್ಲ ಕ್ರಮವನ್ನೂ ಒಟ್ಟೊಟ್ಟಿಗೇ ಅಥವಾ ಒಬ್ಬರೇ ಮಾಡೋಕೆ ಆಗೋಲ್ಲ. ಇದರಲ್ಲಿ ಯಾವ ಕ್ರಮ ನಮಗೆ ಹೊಂದುತ್ತದೆ ಅಂತ ಪರೀಕ್ಷೆಯ 6 ತಿಂಗಳ ಮೊದಲೇ ವಿದ್ಯಾರ್ಥಿಗಳು ಕಂಡುಕೊಳ್ಳಬೇಕು. ಪರೀಕ್ಷೆ ಸಮಯದಲ್ಲಿ, ಅವನು ಜೋರಾಗಿ ಓದುತ್ತಾನೆ ಅಂತ, ನಾವು ಅದೇ ರೀತಿ ಮಾಡಲು ಆಗದು. ಇರಲಿ ನೋಡೋಣ ಅಂತ ಓದುವ ಕ್ರಮದಲ್ಲಿ ಹೊಸ ಪ್ರಯೋಗ ಮಾಡಲು ಇದು ಒಳ್ಳೆಯ ಸಮಯವಲ್ಲ.

ಸ್ಮಾರ್ಟ್‌ ಸ್ಟಡಿ
ಸ್ಮಾರ್ಟ್‌ ಸ್ಟಡಿ ಇಂದು ಬಹಳ ಮುಖ್ಯ. ಅಂದರೆ, ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಗುಡ್ಡೆ ಹಾಕಿಕೊಂಡು, ಯಾವುದಕ್ಕೆ ಹೆಚ್ಚು ಒತ್ತು ಕೊಟ್ಟಿದ್ದಾರೆ, ಯಾವ ಚಾಪ್ಟರ್‌ನಲ್ಲಿ ಪ್ರಶ್ನೆಗಳು ಹೆಚ್ಚು ಬರುತ್ತವೆ, ಇದರಲ್ಲಿ ನನಗೆ ಸುಲಭವಾಗಿ ಅರ್ಥವಾಗುವ ಚಾಪ್ಟರ್‌ ಯಾವುದು? ಕಷ್ಟವಾಗಿದ್ದರೆ, ಶಿಕ್ಷಕರ ನೆರವು ಪಡೆಯುವುದು, ಪ್ರಶ್ನೆ ಪತ್ರಿಕೆಗಳ ಪ್ಯಾಟ್ರನ್‌ ನೋಡಿಕೊಂಡು ಓದಿಕೊಳ್ಳುವುದೆಲ್ಲಾ ಸ್ಮಾರ್ಟ್‌ ಸ್ಟಡಿ. ಇದರಂತೆ, ಗೊತ್ತಿರುವ ಎಲ್ಲ ಉತ್ತರಗಳನ್ನು ನಿಗದಿತ ಸಮಯದಲ್ಲಿ ಬರೆಯುವುದು ಸ್ಮಾರ್ಟ್‌ ಟೈಮಿಂಗ್‌. ಶಾಲೆ ಇದ್ದಾಗ ಓದಿನ ಅವಧಿ ಕಡಿಮೆ ಇರುತ್ತದೆ. ಪರೀಕ್ಷೆ ಸಮಯದಲ್ಲಿ ಇದನ್ನು ಹೆಚ್ಚಿಸಿಕೊಳ್ಳುತ್ತಾ ಹೋಗುವುದು ಸ್ಮಾರ್ಟ್‌ಟೈಮಿಂಗ್‌ನ ಒಂದು ಭಾಗ.

ಮಧ್ಯ ರಾತ್ರಿ ಓದಬೇಕ?
ಪರೀಕ್ಷೆ ಸಮಯದಲ್ಲಿ ಊಟ, ನಿದ್ದೆ ಬಹಳ ಮುಖ್ಯ. ಯಾವ ರೀತಿ ನಿದ್ದೆ ಮಾಡಬೇಕು ಅನ್ನೋದನ್ನು ವಿದ್ಯಾರ್ಥಿಗಳೇ ಡಿಸೈಡ್‌ ಮಾಡಬೇಕು. ಇದು ಬಹಳ ಸುಲಭ. ನಿದ್ದೆ ಮಾಡುವವರಲ್ಲಿ ಎರಡು ವರ್ಗ. ಅಲ್ಪಕಾಲಿನ, ದೀರ್ಘ‌ ಕಾಲೀನ. ಅಲ್ಪಕಾಲೀನ ನಿದ್ದೆಯವರಿಗೆ ನಾಲ್ಕೆçದು ಗಂಟೆ ನಿದ್ದೆ ಆದರೆ ಸಾಕು. ದೀರ್ಘ‌ ಕಾಲೀನದವರಿಗೆ 7-8 ಗಂಟೆ ನಿದ್ದೆ ಬೇಕು. ನೀವು ಅಲ್ಪಕಾಲೀನ ನಿದ್ದೆಗಾರರೋ, ದೀರ್ಘ‌ ಕಾಲೀನ ನಿದ್ದೆಗಾರರೋ ಅಂತ ಅಲಾರಾಂ ಇಟ್ಟುಕೊಳ್ಳೋದೆ ಎಷ್ಟು ಹೊತ್ತಿಗೆ ಏಳ್ತೀರಿ ಅಂತ ನೋಡಿಕೊಂಡೆ ಚೆಕ್‌ ಮಾಡಿಕೊಳ್ಳಬೇಕು.

ಇದಾದ ಮೇಲೆ, ನೀವು ಬೆಳಗ್ಗೆ ಬೇಗ (ಮಾರ್ನಿಂಗ್‌ ಲಾರ್ಕ್‌) ಎದ್ದು ಓದಬೇಕಾ, ರಾತ್ರಿ ಹೊತ್ತು (ನೌಟ್‌ ಹೌಲ್‌) ಜಾಸ್ತಿ ಓದ ಬೇಕಾ ಅಂತ ತೀರ್ಮಾನ‌ ಮಾಡಬಹುದು. ಅದು ಬಿಟ್ಟು, ದೀರ್ಘ‌ಕಾಲ ನಿದ್ದೆ ಮಾಡುವ ವಿದ್ಯಾರ್ಥಿ, ಗೆಳೆಯರೆಲ್ಲ ಬೆಳಗ್ಗೆ ಬೇಗ ಎದ್ದು ಓದುತ್ತಿದ್ದಾರೆ ಅಂತ ತಾನೂ ನಾಲ್ಕು ಗಂಟೆಗೆ ಎದ್ದು ಪುಸ್ತಕ ಹಿಡಿದರೆ, ತೂಕಡಿಕೆಬರುತ್ತದೆ. ಓದಿದ್ದು ತಲೆಗೆ ಹೋಗೋಲ್ಲ.

ಆಗ ಮೆದುಳಿನ ಮೇಲೆ ಒತ್ತಡ ಜಾಸ್ತಿಯಾಗುತ್ತದೆ. “ಅಯ್ಯೋ ನಾನು ಬೆಳಗ್ಗೆ ಕಷ್ಟ ಪಟ್ಟು ಓದಿದ್ದೇ’ ಅನ್ನೋ ಆಕ್ಷೇಪಗಳು ಶುರುವಾಗುವುದು ನಮ್ಮನ್ನು ನಾವು ನೋಡಿಕೊಂಡಿರದೇ ಇದ್ದಾಗ.

ಮನರಂಜನೆ ಅಂದರೆ…
ಗ್ಯಾಪ್‌ ಇಲ್ಲದೆ ಓದುವುದರಿಂದ ಮೆದುಳಿನ ಮೇಲೆ ಒತ್ತಡವಾಗುತ್ತದೆ. ಹೀಗಾಗಿ, ಎರಡು ಗಂಟೆ ಓದಿದರೆ 15 ನಿಮಿಷ ವಿರಾಮ ಕೊಡಿ. ಆ ಸಮಯದಲ್ಲಿ ಏನು ಮಾಡಬೇಕು ಅನ್ನೋದೇ ಬಹುತೇಕರ ಪ್ರಶ್ನೆ. ಮೊಬೈಲ್‌ ಮುಟ್ಟಬೇಡಿ. ಧಾರಾವಾಹಿ ನೋಡಿದರೆ ಪಾತ್ರಗಳ ಜೊತೆ ಇದ್ದುಬಿಡುತ್ತೀರಿ. ಮೆದುಳಿಗೆ ಯಾವುದೇ ವಿಶ್ರಾಂತಿ ಸಿಗೋಲ್ಲ. ಬದಲಿಗೆ ಸಂಗೀತ ಕೇಳಿ, ವಾಕ್‌ ಮಾಡಿ, ಹೆತ್ತವರ ಹತ್ತಿರ ಹರಟೆ ಹೊಡೀರಿ. ಮುಖ್ಯವಾಗಿ, ನಿಗಧಿ ಮಾಡಿಕೊಂಡ ವಿರಾಮದ ಸಮಯವನ್ನು ಯಾವ ಕಾರಣಕ್ಕೂ ವಿಸ್ತರಿಸಬೇಡಿ.

– ಡಾ.ಪ್ರೀತಿ ಪೈ
-ನಿರೂಪಣೆ-ಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next