Advertisement
ಕಳೆದ ಜೂನ್ 28ರಂದು ಇಲ್ಲಿ ಜಯಲಕ್ಷ್ಮೀ ಕಾರಂತ ಹಾಗೂ ದಿವ್ಯಾ ಕಾರಂತ ಅತ್ತೆ – ಸೊಸೆಯಂದಿರ ವಾಚನ ಪ್ರವಚನದ ಅಮೋಘ ಕಾರ್ಯಕ್ರಮ ಏರ್ಪಟ್ಟಿತ್ತು. ಈ ವರ್ಷದ ನಾಲ್ಕನೇ ಕಾರ್ಯಕ್ರಮವಾಗಿದ್ದ ಇದರಲ್ಲಿ ಡಾ| ವೀರಪ್ಪ ಮೊಲಿಯವರ ದ್ರೌಪದಿಯ ಸುತ್ತ ಹೆಣೆದಿರುವ ಕೃತಿ “ಸಿರಿಮುಡಿ ಪರಿಕ್ರಮಣ’ ಕಥಾವಸ್ತು ವಾಚಿಸಲ್ಪಟ್ಟಿತ್ತು. ದಿವ್ಯಾ ಕಾರಂತರ ಕಂಚಿನ ಕಂಠದ ವಾಚನ, ಪರಿಪಕ್ವ ಸಾಹಿತಿ, ಯಕ್ಷಕೂಟದಲ್ಲಿ ದ್ರೌಪದಿಯ ಪಾತ್ರವನ್ನು ಲೀಲಾಜಾಲವಾಗಿ ನಿರ್ವಹಿಸುವ ಜಯಲಕ್ಷ್ಮಿಯವರ ಪ್ರವಚನ – ಪಾತ್ರ ವ್ಯಾಖ್ಯಾನ ಅತ್ಯದ್ಭುತವಾಗಿತ್ತು; ಪಾತ್ರಕ್ಕೆ ಮೆರುಗು ನೀಡಿತ್ತು. ದ್ರೌಪದಿಯ ಅಸಹಾಯಕತೆಯ ಮಧ್ಯೆ ಅವಳು ತೋರಿದ ಕೆಚ್ಚು , ದುಶಾÏಸನನ ವಿಡಂಬನೆ ಮತ್ತು ಕ್ರೌರ್ಯ, ದುರ್ಯೋಧನನ ಅಪಹಾಸ್ಯ, ಮೂಲ ಕೃತಿಯಲ್ಲಿ ಕಾಣದ, ಕೆಲವೊಂದು ಕವಿ ಕಲ್ಪನೆಗಳನ್ನು ಜಯಲಕ್ಷ್ಮಿಯವರು ಮನಮುಟ್ಟುವಂತೆ ಪ್ರೇಕ್ಷಕರ ಮುಂದಿಟ್ಟರು. ಸಮಗ್ರ ರಾಮಾಯಣದ ತರುವಾಯ ಡಾ| ಮೊಲಿಯವರು ಬರೆದ ಈ ಕೃತಿಯು ಮಹಿಳೆಯರ ಕೆಚ್ಚು ಮತ್ತು ಅಸಹಾಯಕತೆಯನ್ನು ವಿವರಿಸುತ್ತಾ ಭವಿಷ್ಯದ ಪರಿಣಾಮಗಳು ಆಧುನಿಕ ಸಮಾಜದಲ್ಲಿ ಹೇಗೆ ಗಟ್ಟಿಗೊಳ್ಳುತ್ತವೆ ಎಂಬುದನ್ನು ಸೂಚಿಸುವ ಪರಿ ಪ್ರೇಕ್ಷಕರ ಮೇಲೆ ಪ್ರಭಾವ ಬೀರುತ್ತದೆ. ಸಾಹಿತ್ಯ ವಾಚಿಸಿದ ದಿವ್ಯಾ ಕಾರಂತರ ಸ್ವರದ ಏರಿಳಿತಗಳು, ಸ್ವರಭಾರ ಪ್ರೇಕ್ಷಕರಿಗೆ ಖುಷಿ ನೀಡಿತ್ತು. ಪ್ರಯಾಣದ ತುರ್ತಿನಲ್ಲಿದ್ದ ಡಾ| ಮೊಲಿಯವರು ಕೆಲಕಾಲ ಸಭೆಯಲ್ಲಿ ಕುಳಿತು ಆಲಿಸಿದರು. ಬಹುಭಾಷಾ ಕವಿಗಳ ಪುಟ್ಟ ಕವಿತೆಗಳೊಂದಿಗೆ ಮೊದಲ್ಗೊಂಡ ಈ ಕಾರ್ಯಕ್ರಮ ಅಂತ್ಯಕ್ಕೆ ಮೆರುಗು ನೀಡಿದ ವಾಚನ – ಪ್ರವಚನ ಪ್ರೇಕ್ಷಕರ ಮೆಚ್ಚುಗೆ ಪಡೆಯಿತು.
Advertisement
ಗಿಳಿವಿಂಡಿನಲ್ಲಿ ವಾಚನ –ಪ್ರವಚನ
09:31 AM Jul 14, 2017 | |
Advertisement
Udayavani is now on Telegram. Click here to join our channel and stay updated with the latest news.