Advertisement

ತಿಂಗಳ ಮೊದಲ ದಿನವೇ ಶಿಕ್ಷಕ ವೇತನ ಬ್ಯಾಂಕ್ ಗೆ ಜಮಾ

02:41 PM Jan 02, 2022 | Team Udayavani |

ಅರಸೀಕೆರೆ: ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರಿಗೆ 2022ನೇ ಸಾಲಿನಿಂದ ಪ್ರತಿ ತಿಂಗಳ 1ನೇ ತಾರೀಖಿನಂದು ವೇತನವನ್ನು ಬ್ಯಾಂಕ್‌ ಖಾತೆಗೆ ಜಮಾ ಮಾಡುವ ವ್ಯವಸ್ಥೆ ಮಾಡಲಾಗಿದೆ ಎಂದು ಅರಸೀಕೆರೆ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಾವಗಲ್‌ ಹೋಬಳಿ ನಿರ್ದೇಶಕ ಹಾಗೂ ಸಂಪನ್ಮೂಲ ವ್ಯಕ್ತಿ ಅಶೋಕ್‌ ಹೇಳಿದರು.

Advertisement

ಜಾವಗಲ್‌ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣಇಲಾಖೆ ಬೆಂಗಳೂರು, ಡಿಎಸ್‌ಇಆರ್‌ಟಿ , ಪ್ರಥಮ್‌ ಎನ್‌ಜಿಒ ಹಾಗೂ ಜಾವಗಲ್‌ ಕ್ಲಸ್ಟರ್‌ ಸಹಯೋಗದೊಂದಿಗೆ ಹೋಬಳಿಯ 4, 5ನೇ ತರಗತಿಯ ಬೋಧನಾ ಶಿಕ್ಷಕರಿಗೆ ಏರ್ಪಡಿಸಿದ ಓದು ಕರ್ನಾಟಕ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಮಕ್ಕಳಲ್ಲಿ ಬುನಾದಿ ಸಾಮರ್ಥ್ಯ ಅಭಿವೃದ್ಧಿ ಪಡಿಸಲು ಈ ತರಬೇತಿ ಕಾರ್ಯ ಕ್ರಮವನ್ನು ಆಯೋಜಿಸಲಾಗಿದೆ ಎಂದರು. ಶಿಕ್ಷಕರು ಬದಲಾವಣೆಗೆ ಹೊಂದಿಕೊಂಡು ಇಷ್ಟಪಟ್ಟು ಗುಣಮಟ್ಟ ಶಿಕ್ಷಣ ನೀಡಬಹುದು. ಓದು ಕರ್ನಾಟಕ ಕನ್ನಡ – ಗಣಿತ ವಿಷಯಗಳಿಗೆ ಸಂಬಂಧಿಸಿದ ಕಿಟ್‌ಗಳನ್ನು ಬಳಸಿ ಶಾಲಾ ಕೊಠಡಿಗಳಲ್ಲಿ ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಶಿಕ್ಷಕರು ಹೆಚ್ಚಿನ ಆದ್ಯತೆ ನೀಡುವಂತೆ ಸಲಹೆ ನೀಡಿದರು.

ಬಿಆರ್‌ಪಿ ಹಾಗೂ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಚೇತನ್‌ ಮಾತನಾಡಿ, ಶಿಕ್ಷಣವೆಂದರೆ ಪರಿವರ್ತನೆ, ಅಪೇಕ್ಷಿತ ಬದಲಾವಣೆ, ಹೊಸತನವಾಗಿದೆ. 4, 5ನೇ ತರಗತಿ ವಿದ್ಯಾರ್ಥಿಗಳಿಗೆ ಸರಳ ಕನ್ನಡ ಹಾಗೂ ಸರಳ ಗಣಿತ ವಿಷಯಗಳ ಬಗ್ಗೆ ಕೊಠಡಿಗಳಲ್ಲಿ ಪರಿಣಾಮಕಾರಿಯಾಗಿ ಬೋಧನೆ ಮಾಡಲು ಈ ತರಬೇತಿ ನೀಡಲಾಗುತ್ತಿದೆ ಎಂದರು.

ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳು ಹಾಗೂ ಮುಂದುವರಿದ ವಿದ್ಯಾರ್ಥಿಗಳಿದ್ದು ,ಆರಂಭಿಕ ಹಂತ -1, ಮುಂದುವರಿದ ಹಂತ -2 ಎಂಬ ವಿಭಿನ್ನ ಚಟುವಟಿಕೆಗಳಿರುತ್ತವೆ ಎಂದರುಪ್ರತಿ ಮಗುವಿಗೆ ಮೂಲ ಓದುವಿಕೆ , ಸರಳ ಪಠ್ಯಓದುವಿಕೆ ಅರ್ಥ ಗ್ರಹಿಕೆ ಸಾಧ್ಯತೆ , ಮಗುವು ಲಿಖೀತಮತ್ತು ಮೌಖೀಕ ರೂಪದಲ್ಲಿ ಸ್ವಂತ ಭಾವನೆಯನ್ನು ವ್ಯಕ್ತಪಡಿಸುವಂತೆ ಮಾಡುವುದು ಕಾರ್ಯಕ್ರಮದ ಮೂಲುದ್ದೇಶವಾಗಿದೆ ಎಂದು ತಿಳಿಸಿದರು.

Advertisement

ಮಗುವಿನ ಕಲಿಕ ಮಟ್ಟ ಗುರುತಿಸುವಿಕೆ, ಆ ಮಟ್ಟಕ್ಕೆ ತಕ್ಕ ಚಟುವಟಿಕೆ ಆಟಗಳ ವ್ಯವಸ್ಥೆ ಮಾಡುವುದು 60 ದಿನಗಳ ಬೋಧನಾ ಕಾರ್ಯಕ್ರಮ ತರಬೇತಿಯ ಮುಖ್ಯಾಂಶವಾಗಿದೆ ಎಂದರು.

ಜೆಎಸ್‌ ರವಿಶಂಕರ್‌, ಪೋಷಕ ವಾಸು ಮಾತನಾಡಿ, ತರಬೇತಿಯಲ್ಲಿ ಶಿಕ್ಷಕರುಕಡ್ಡಾಯವಾಗಿ ಭಾಗವಹಿಸಿ ತರಬೇತಿಯಲ್ಲಿ ಪಡೆದ ಜ್ಞಾನವನ್ನು ಶಾಲಾ ಕೊಠಡಿಗಳಲ್ಲಿಪರಿಣಾಮಕಾರಿಯಾಗಿ ಕಲಿಸಿದಾಗ ತರಬೇತಿಯು ಸಾರ್ಥಕತೆ ಪಡೆದುಕೊಳ್ಳತ್ತದೆ ಎಂದು ತಿಳಿಸಿದರು.

ಸರ್ಕಾರಿ ಶಾಲೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಹಾಗೂ ಸಂಸ್ಕಾರಯುತ ಶಿಕ್ಷಣ ನೀಡಲಾಗುತ್ತಿದೆ ಎಂದರು.

ಜಾವಗಲ್‌ ಹೋಬಳಿಯ ಸಿಆರ್‌ಪಿಗಳಾದ ಮಾರುತಿ, ಜಗದೀಶ್‌, ಶಿವಕುಮಾರ್‌, ಗಂಗಾಧರ್‌, ಮಂಜುನಾಥ್‌ ಹಾಗೂ 50ಕ್ಕೂ ಹೆಚ್ಚು ಶಾಲೆಗಳ ಶಿಕ್ಷಕರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next