Advertisement

ದಿನ ಪತ್ರಿಕೆ ಓದಿ ಜ್ಞಾನ ವೃದ್ಧಿಸಿ: ಡಾ|ರೊನಾಲ್ಡ್‌

09:21 PM Apr 08, 2019 | Team Udayavani |

ಪೆರ್ಮನ್ನೂರು: ವಿದ್ಯಾರ್ಥಿಗಳು ಪಠ್ಯ ಪುಸ್ತಕಗಳಲ್ಲಿನ ಕಲಿಕೆಯ ಜತೆಗೆ ದಿನಪತ್ರಿಕೆಗಳನ್ನು ಓದಿ, ದೃಶ್ಯ ಮಾಧ್ಯಮಗಳನ್ನು ವೀಕ್ಷಿಸಿ ಜ್ಞಾನವನ್ನು ವೃದ್ಧಿಸಿಕೊಳ್ಳ ಬೇಕು ಎಂದು ಕರ್ನಾಟಕ ಲೋಕ ಸೇವಾ ಆಯೋಗದ ಸದಸ್ಯ ಡಾ| ಅನಿಲ್‌ ರೊನಾಲ್ಡ್‌ ಫೆರ್ನಾಂಡಿಸ್‌ ಹೇಳಿದರು.


Advertisement

ಫೋಕಸ್‌ ಸಂಸ್ಥೆ ಮಂಗಳೂರು ಮತ್ತು ಪೆರ್ಮನ್ನೂರು ವಲಯ ಚರ್ಚ್‌ಗಳ ಪರಿಷತ್‌ನ ಸಹಕಾರದಲ್ಲಿ ಎ. 7ರಂದು ಪೆರ್ಮನ್ನೂರು (ತೊಕ್ಕೊಟು) ಸೈಂಟ್‌ ಸೆಬಾಸ್ಟಿಯನ್‌ ಚರ್ಚ್‌ ಸಭಾಂಗಣದಲ್ಲಿ ಎಸೆಸೆಲ್ಸಿ , ಪಿಯುಸಿ ವಿದ್ಯಾರ್ಥಿಗಳಿಗಾಗಿ ನಡೆದ ವೃತ್ತಿ ಮಾರ್ಗದರ್ಶನ ಶಿಬಿರದಲ್ಲಿ ಅವರು ಮುಖ್ಯ ಅತಿಥಿಯಾಗಿದ್ದರು.

ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ಮೂಲಕ ತಮ್ಮ ಜೀವನದ ಸದೃಢ ಭವಿಷ್ಯವನ್ನು ರೂಪಿಸಬಹುದು ಎಂದು ಅವರು ಸಲಹೆ ಮಾಡಿದರು.

ವಿದ್ಯಾರ್ಥಿಗಳು ತಮ್ಮ ಮುಂದಿನ ಶಿಕ್ಷಣವನ್ನು ಅಯ್ಕೆ ಮಾಡುವಾಗ ಹೆತ್ತವರ, ಪೋಷಕರ ಅಭಿಪ್ರಾಯದಂತೆ ಆಯ್ಕೆ ಮಾಡುವುದು ಸರಿಯಲ್ಲ, ತಮ್ಮ ಆಸಕ್ತಿಯ ವಿಷಯವನ್ನು ತಾವೇ ಆಯ್ಕೆ ಮಾಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಪೆರ್ಮನ್ನೂರು ಚರ್ಚಿನ ಪ್ರಧಾನ ಗುರು ವಂ| ಜೆ.ಬಿ. ಸಲ್ಡಾನ್ಹಾ ಮಾತನಾಡಿ, ವಿದ್ಯಾರ್ಥಿಗಳು ಸುಶಿಕ್ಷತರಾಗಿ ನಮ್ಮ ದೇಶದಲ್ಲಿ ಸೇವೆ ಮಾಡುವ ನಿರ್ಧಾರ ತೆಗೆದು ಕೊಳ್ಳಬೇಕು. ಈ ದೇಶದ ಉತ್ತಮ ಪ್ರಜೆ, ಉತ್ತಮ ನಾಯಕರಾಗಿ ಒಳ್ಳೆಯ ಸಮಾಜ ನಿರ್ಮಾಣ ಮಾಡುವ ಜವಾಬ್ದಾರಿ ಯುವಕರ ಮೇಲಿದೆ ಎಂದು ಹೇಳಿದರು. ಪ್ರೊ| ನಾರ್ಬರ್ಟ್‌ ಲೋಬೋ, ಪ್ರೊ| ಸ್ಟೀವನ್‌ ಕ್ವಾಡ್ರಸ್‌ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.

Advertisement

ಫೋಕಸ್‌ ಸಂಸ್ಥೆಯ ಸಂಚಾಲಕ ಸುಶೀಲ್‌ ನೊರೋನ್ಹಾ, ಪೆರ್ಮನ್ನೂರು ಚರ್ಚ್‌ನ ಉಪಾಧ್ಯಕ್ಷ ಮೆಲ್ವಿನ್‌ ಡಿ’ಸೋಜಾ, ಕಾರ್ಯದರ್ಶಿ ರೊನಾಲ್ಡ್‌ ಫೆರ್ನಾಂಡಿಸ್‌ ವೇದಿಕೆಯಲ್ಲಿದ್ದರು.

ಸಂಸ್ಥೆಯ ಅಧ್ಯಕ್ಷ ಪಿಯುಸ್‌ ಡಿ’ಸೋಜಾ ಸ್ವಾಗತಿಸಿ, ಕಾರ್ಯದರ್ಶಿ ಡೆನಿಟಾ ಡಿ’ಸೋಜಾ ವಂದಿಸಿದರು. ಜಾನ್‌ ಡಿ’ಸೋಜಾ ನಿರ್ವಹಿಸಿದರು. ಸಂಸ್ಥೆಯ ನಿಕಟ ಪೂರ್ವ ಅಧ್ಯಕ್ಷ ಪ್ರದೀಪ್‌ ಡಿ’ಸೋಜಾ, ಮಾಜಿ ಅಧ್ಯಕ್ಷ ಮೌರಿಸ್‌ ಡಿ’ಸೋಜಾ, ಪ್ರಮುಖರಾದ ಫ್ರಾÂಕಿ ಕುಟಿನ್ಹೊ, ಸಿರಿಲ್‌ ಡಿ’ಸೋಜಾ, ಬಾಸಿಲ್‌ ರೊಡ್ರಿಗಸ್‌, ಸಂತೋಷ್‌ ಡಿ’ಸೋಜಾ, ರೋಶನ್‌ ಫೆರಾವೊ, ಮೆಲ್ವಿನ್‌ ಡಿ’ಸೋಜಾ, ಮೇರಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next