Advertisement

“ಹರಾಜುಕಟ್ಟೆಗಳಿಂದ ರೈತರ ಉತ್ಪನ್ನ ಗ್ರಾಹಕರಿಗೆ ತಲುಪಲಿ’

10:48 PM Sep 18, 2019 | Team Udayavani |

ವಿಟ್ಲ: ಮಾಣಿಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಬಂಟ್ವಾಳ ವತಿಯಿಂದ 49.19 ಲಕ್ಷ ರೂ. ವೆಚ್ಚದಲ್ಲಿ ಹಾಗೂ ಮಣಿನಾಲ್ಕೂರಿನಲ್ಲಿ 17.22 ಲಕ್ಷ ರೂ¬ ವೆಚ್ಚದಲ್ಲಿ ನಿರ್ಮಿಸಲಾದ ಮುಚ್ಚು ಹರಾಜುಕಟ್ಟೆ ಕಟ್ಟಡಗಳ ಉದ್ಘಾಟನೆ,ಗ್ರಾ.ಪಂ.ಗಳಿಗೆ ಹಸ್ತಾಂತರ ಕಾರ್ಯಕ್ರಮ ಬುಧವಾರ ಮಾಣಿ ಸಂತೆಕಟ್ಟೆಯಲ್ಲಿ ನಡೆಯಿತು.

Advertisement

ಬಂಟ್ವಾಳ ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಅವರು ಮಣಿನಾಲ್ಕೂರಿನ ಕಟ್ಟಡ ಮತ್ತು ಮಾಣಿಯ ಹರಾಜುಕಟ್ಟೆ ಕಟ್ಟಡವನ್ನು ಹಾಗೂ ಸಮಾರಂಭವನ್ನು ಉದ್ಘಾಟಿಸಿ, ಹರಾಜುಕಟ್ಟೆಗಳಿಂದ ರೈತರ ಉತ್ಪನ್ನಗಳು ಗ್ರಾಹಕರಿಗೆ ಸುಲಭವಾಗಿ ತಲುಪುವಂತಾಗಲಿ. ಕೇಂದ್ರ ಸ್ಥಾನದಲ್ಲಿರುವ ಕಟ್ಟಡ ಸುಸಜ್ಜಿತವಾಗಿ ಜನರಿಗೆ ಅನುಕೂಲ ವಾಗುವಂತೆ ಕಾರ್ಯ ನಿರ್ವಹಿಸುವಂತಾಗಲಿ ಎಂದರು.

ಜಿ.ಪಂ. ಸದಸ್ಯೆ ಮಂಜುಳಾ ಮಾಧವ ಮಾವೆ ಮಾತ ನಾಡಿ, ಎಪಿಎಂಸಿ ಹರಾಜುಕಟ್ಟೆ ಕಟ್ಟಡಗಳಲ್ಲದೆ, ಮಾಣಿಗೆ ಆರೋಗ್ಯ ಕೇಂದ್ರವೂ ಶೀಘ್ರ ಒದಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ ಅವರು, ಎಪಿಎಂಸಿ ಕೈಗೊಂಡ ಯೋಜನೆಗಳು, ಭವಿಷ್ಯದಲ್ಲಿ ಮೆಲ್ಕಾರ್‌ನಲ್ಲಿ ಯಾರ್ಡ್‌ ನಿರ್ಮಿಸುವ ವಿಚಾರವನ್ನು ಪ್ರಸ್ತಾಪಿಸಿದರು.

ತಾ.ಪಂ. ಉಪಾಧ್ಯಕ್ಷ ಬಿ.ಎಂ. ಅಬ್ಟಾಸ್‌ ಆಲಿ, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಸದಸ್ಯರಾದ ಪದ್ಮಶೇಖರ ಜೈನ್‌, ರವೀಂದ್ರ ಕಂಬಳಿ, ಎಪಿಎಂಸಿ ಉಪಾಧ್ಯಕ್ಷ ಚಂದ್ರ ಶೇಖರ ಪೂಜಾರಿ, ತಾ.ಪಂ. ಸದಸ್ಯೆ ಮಂಜುಳಾ ಕುಶಲ ಪೆರಾಜೆ, ಮಾಣಿ ಗ್ರಾ.ಪಂ. ಅಧ್ಯಕ್ಷೆ ಮಮತಾ ಎಸ್‌. ಶೆಟ್ಟಿ,

Advertisement

ಮಣಿನಾಲ್ಕೂರು ಗ್ರಾ.ಪಂ. ಅಧ್ಯಕ್ಷೆ ಗೀತಾ ಶ್ರೀಧರ ಪೂಜಾರಿ, ಎಪಿಎಂಸಿ ಸದಸ್ಯ ನೇಮಿರಾಜ ರೈ, ಪದ್ಮರಾಜ ಬಲ್ಲಾಳ್‌, ಭಾರತಿ ಎಸ್‌. ರೈ, ದಿವಾಕರ ಪಂಬದಬೆಟ್ಟು, ಹರಿಶ್ಚಂದ್ರ ಪೂಜಾರಿ, ಬಿ. ಚಂದ್ರಶೇಖರ ರೈ, ಗೀತಾಲತಾ ಟಿ. ಶೆಟ್ಟಿ, ಜಗದೀಶ ಡಿ., ನೇಮಿರಾಜ ರೈ, ವಿಟuಲ ಸಾಲ್ಯಾನ್‌, ಬಾಲಕೃಷ್ಣ ಆಳ್ವ, ಬೆಳ್ತಂಗಡಿ ಎಪಿಎಂಸಿ ಅಧ್ಯಕ್ಷ ಕೇಶವ ಗೌಡ, ಮಾಣಿ ಗ್ರಾ.ಪಂ. ಪಿಡಿಒ ನಾರಾಯಣ ಉಪಸ್ಥಿತರಿದ್ದರು.
ಇದೇ ಸಂದರ್ಭ ಗ್ರಾ.ಪಂ.ಗಳಿಗೆ ಕಟ್ಟಡ ಹಸ್ತಾಂತರ ಕಾರ್ಯಕ್ರಮ ನೆರವೇರಿತು. ಗುತ್ತಿಗೆದಾರ ಸಿದ್ಧಾರ್ಥ್ ಅವರನ್ನು ಸಮ್ಮಾನಿಸಲಾಯಿತು. ಎಪಿಎಂಸಿ ಕಾರ್ಯದರ್ಶಿ ಭಾರತಿ ಪಿ.ಎಸ್‌. ಸ್ವಾಗತಿಸಿ, ಎಪಿಎಂಸಿ ಸದಸ್ಯ ಬಾಲಕೃಷ್ಣ ಆಳ್ವ ಕೊಡಾಜೆ ನಿರೂಪಿಸಿ, ವಂದಿಸಿದರು.

ಮಾಣಿ ಅಭಿವೃದ್ಧಿಯ ಪ್ರದೇಶ
ಮುಖ್ಯ ಅತಿಥಿಯಾಗಿದ್ದ ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ತನ್ನ ಅವಧಿಯಲ್ಲಿ ಎಪಿಎಂಸಿಗೆ ನೀಡಲಾದ ಅನುದಾನದಿಂದ ಮುಚ್ಚು ಹರಾಜುಕಟ್ಟೆಗಳ ನಿರ್ಮಾಣಕ್ಕೆ ಸಹಕಾರಿಯಾಗಿದೆ. ಮಾಣಿ ಅಭಿವೃದ್ಧಿಯ ಪ್ರದೇಶವಾಗಿದ್ದು, ಇಲ್ಲಿ ಎಸ್ಪಿ ಕಚೇರಿ, ಸಮುದಾಯ ಆಸ್ಪತ್ರೆ ನಿರ್ಮಿಸುವುದು ಸೂಕ್ತ. ಮಾಣಿಗೆ ತನ್ನ ಅವಧಿಯಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆ ಅನುಷ್ಠಾನಗೊಂಡಿದೆ. ಎಪಿಎಂಸಿ ಪ್ರಾಂಗಣಕ್ಕೆ ರೈತರು ಬರುವಂತಾಗಬೇಕು. ಅಲ್ಲೇ ಅವರ ಕೃಷಿ ಉತ್ಪನ್ನಗಳು ಮಾರಾಟವಾಗಬೇಕು. ಈ ನಿಟ್ಟಿನಲ್ಲಿ ಈಗಿನ ಅಧ್ಯಕ್ಷ ಪದ್ಮನಾಭ ರೈ ಅವರು ಮೆಲ್ಕಾರ್‌ನಲ್ಲಿ ನಿವೇಶನ ಪಡೆದುಕೊಂಡಿದ್ದು, ಅಲ್ಲಿ ಸೂಕ್ತ ಪ್ರಾಂಗಣ ನಿರ್ಮಾಣವಾಗಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next