Advertisement
ಕೋವಿಡ್ ವೈರಸ್ ಬಂದ ಬಳಿಕ ಪ್ಲಾಸ್ಟಿಕ್ ಉತ್ಪನ್ನಗಳ ತಯಾರಿ ಹೆಚ್ಚಾಗಿದೆ. ಶಸ್ತ್ರಚಿಕಿತ್ಸೆಯ ಮಾಸ್ಕ್ಗಳು, ಕೈಗವಸುಗಳು, ರಕ್ಷಣಾತ್ಮಕ ಉಪಕರಣಗಳು, ಬ್ಯಾಗ್‌ಗಳು ಪ್ಲಾಸ್ಟಿಕ್ ಉತ್ಪನ್ನಗಳ ಹೆಚ್ಚಳಕ್ಕೆ ನಾಂದಿ ಹಾಡಿದೆ. ಹಲವು ದೇಶಗಳು ಇಂಥವುಗಳನ್ನು ಹೆಚ್ಚು ಉತ್ಪಾದಿಸಿ ಭವಿಷ್ಯದ ಸುರಕ್ಷೆಯ ಕಾರಣಕ್ಕೆ ದಾಸ್ತಾನು ಇರಿಸಿಕೊಂಡಿವೆೆ. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆಗೊಳಿಸಲು ಇಡೀ ವಿಶ್ವವೇ ಪರ್ಯಾಯ ಕ್ರಮದ ಮೊರೆ ಹೋಗಿದ್ದರೆ ಅತ್ತ ಕೋವಿಡ್ ವೈರಸ್ ಜಗತ್ತಿನ ಈ ಕ್ರಮವನ್ನು ಬುಡಮೇಲಾಗಿಸಿದೆ. ಪ್ಲಾಸ್ಟಿಕ್ ಮಾಲಿನ್ಯವನ್ನು ಕಡಿಮೆ ಮಾಡುವ ಪ್ರಯತ್ನಗಳಿಗೆ ಈ ಸಾಂಕ್ರಾಮಿಕ ಹಲವು ಗಂಭೀರ ಸವಾಲುಗಳನ್ನು ಉಂಟುಮಾಡುತ್ತಿದೆ.
ಕೆಲವು ಐರೋಪ್ಯ ರಾಷ್ಟ್ರಗಳಲ್ಲಿ 2 ದಿನಗಳಿಂದ ಮಳೆಯಾಗುತ್ತಿದ್ದು, ಅಲ್ಲಲ್ಲಿ ಬಿಸಾಡಿದ ಈ ತ್ಯಾಜ್ಯಗಳು ಒಳಚರಂಡಿ ಸೇರುತ್ತಿವೆ ಎಂದು ಕೆಲವು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಇವು ಅಲ್ಲಿಂದ ಬಳಿಕ ಸಮುದ್ರಕ್ಕೆ ಸೇರಲಿದ್ದು, ಜಾಗತಿಕ ಸಮಸ್ಯೆಯಾಗಿ ಬದಲಾಗಲಿದೆ. ನಾಲ್ಕು ದಶಕಗಳಲ್ಲಿ ಜಾಗತಿಕ ಪ್ಲಾಸ್ಟಿಕ್ ಉತ್ಪಾದನೆಯು ನಾಲ್ಕು ಪಟ್ಟು ಹೆಚ್ಚಾಗಿದೆ.
2019ರ ಅಧ್ಯಯನವೊಂದರ ಪ್ರಕಾರ ಇದೇ ಪ್ರವೃತ್ತಿ ಮುಂದುವರಿದರೆ ಪ್ಲಾಸ್ಟಿಕ್‌ಗಳ ತಯಾರಿಕೆಯು 2050ರ ವೇಳೆಗೆ ಶೇ. 15ರಷ್ಟು ಗ್ರೀನ್‌ಹೌಸ್ ಗ್ಯಾಸ್ ಎಮಿಷನ್‌ಗೆ ಕಾರಣವಾಗಬಹುದು ಎಂದಿದೆ. ಈಗ ಸಾರಿಗೆ ಮೂಲಕ ಉಂಟಾಗುವ ಮಾಲಿನ್ಯದ ಪ್ರಮಾಣವೂ ಅಷ್ಟೇ ಇದೆ. ವಾರ್ಷಿಕವಾಗಿ ಸುಮಾರು 8 ಮಿಲಿಯನ್ (80 ಲಕ್ಷ)ಟನ್ ಪ್ಲಾಸ್ಟಿಕ್ ಪ್ರತಿವರ್ಷ ಸಾಗರ ಸೇರುತ್ತಿವೆ.
Related Articles
ಇದೀಗ ಅವುಗಳ ಸಾಲಿಗೆ ಪಿಪಿಇ ಸೇರಿದ್ದು, ಇದು ಬೇರೆಯದೇ ಆದ ಸಮಸ್ಯೆಗೆ ಕಾರಣವಾಗುವ ಆತಂಕ ಸೃಷ್ಟಿಸಿದೆ. ಪಿಪಿಇಯನ್ನು ತಯಾರಿಸಲು ಬಳಸಲಾದ ವಿಧಾನ ಮತ್ತು ರಚನೆಯು ಸಮುದ್ರದಲ್ಲಿನ ಜೀವಸಂಕುಲಗಳಿಗೆ ಅಪಾಯಕಾರಿಯಾಗಿದೆ. ಪ್ಲಾಸ್ಟಿಕ್ ಚೀಲಗಳಂತೆ ಕೈಗವಸುಗಳು ಸಮುದ್ರ ಆಮೆಗಳಿಗೆ ಜೆಲ್ಲಿ ಮೀನು ಅಥವಾ ಇತರ ಆಹಾರಗಳಾಗಿ ಕಾಣಿಸಬಹುದು. ಮಾಸ್ಕ್ಗಳಲ್ಲಿನ ಪಟ್ಟಿಗಳು ಅವುಗಳಿಗೆ ಕಂಟಕವಾಗುವ ಸಾಧ್ಯತೆ ಇದೆ.
Advertisement
ರಾಸಾಯನಿಕಯುಕ್ತ ಪ್ಲಾಸ್ಟಿಕ್ವಿಪರ್ಯಾಸವೆಂದರೆ, ಒಂದು ಸಾರ್ವಜನಿಕ ಆರೋಗ್ಯ ಬಿಕ್ಕಟ್ಟಿನ ವಿರುದ್ಧ ಹೋರಾಡಲು ನಾವು ಬಳಸುವ ಪ್ಲಾಸ್ಟಿಕ್ ದೀರ್ಘಾವಧಿಯ ಮತ್ತೂಂದು ಸಮಸ್ಯೆಗೆ ಕಾರಣವಾಗುತ್ತಿದೆ. ಇಂತಹ ಪ್ಲಾಸ್ಟಿಕ್‌ಗಳು ಮೈಕ್ರೋಪ್ಲಾಸ್ಟಿಕ್‌ನಂತಾಗಿ ನಮ್ಮ ಆಹಾರದ ಜತೆ ಸೇರಿಕೊಳ್ಳುವ ಸಾಧ್ಯತೆ ಇದೆ ಎನ್ನುತ್ತದೆ ಪರಿಣಿತರು. ಈ ಪಿಪಿಇ ಅಥವಾ ಗ್ಲೌಸ್‌ಗಳನ್ನು ತಯಾರಿಸುವ ಹಂತದಲ್ಲಿ ಹಲವು ರಾಸಾಯನಿಕಗಳನ್ನು ಬಳಸಲಾಗುತ್ತದೆ. ಪಿಪಿಇಗಳನ್ನು ಬಳಸಿ ಬಿಸಾಡುವ ಬದಲು ಅವುಗಳಿಗೆ ಸೋಂಕು ನಿವಾರಕಗಳನ್ನು ಸಿಂಪಡಿಸಿ ಕೆಲವು ದೇಶಗಳಲ್ಲಿ ಬಳಸಲಾಗುತ್ತಿದೆ. ಆದರೆ ಅಪಾಯದ ಸಂಗತಿ ಎಂದರೆ ಕೋವಿಡ್ -19 ಇತರ ಮೇಲ್ಮೆ„ಗಳಿಗಿಂತ ಪ್ಲಾಸ್ಟಿಕ್‌ನಲ್ಲಿ ಹೆಚ್ಚು ಕಾಲ ಬದುಕುತ್ತದೆ. ಏಕ-ಬಳಕೆಯ ಪ್ಲಾಸ್ಟಿಕ್‌ಗಳನ್ನು ಕೆಲವು ದೇಶಗಳಲ್ಲಿ ನಿಷೇಧಿಸಲಾಗಿದೆ. ಆದರೆ ಆ ರಾಷ್ಟ್ರಗಳಿಗೆ ಈಗ ಕೊರೊನಾ ವಿರುದ್ಧ ಬಳಸಲಾದ ತ್ಯಾಜ್ಯಗಳು ಹೆಚ್ಚಾಗಿವೆ.