ಶಿರಸಿ: ಲಾಕ್‌ಡೌನ್‌ನಿಂದ ಆಹಾರ ಸಾಮಗ್ರಿಗಳಿಲ್ಲದೆ ಪರದಾಡುತ್ತಿರುವ ಫಲಾನುಭವಿಗಳಿಗೆ ಕೆಎಂಎಫ್‌ನಿಂದ ಉಚಿತವಾಗಿ ಹಾಲು ವಿತರಿಸುವ ಕಾರ್ಯಕ್ಕೆ ಜಿಲ್ಲಾಧಿಕಾರಿ ಡಾ| ಹರೀಶಕುಮಾರ ಗೊಸಾವಿಗಲ್ಲಿಯಲ್ಲಿ ಹಾಲು ವಿತರಿಸಿ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಬಡವರಿಗೆ ನೆರವಾಗಲು ಪೌಷ್ಟಿಕ ಆಹಾರವಾಗಿ ಹಾಲು ಕೊಡಲಾಗುತ್ತಿದೆ. ಆರೋಗ್ಯ ಕಾಪಾಡಿಕೊಂಡರೆ ಎಲ್ಲದೂ. ಕೋವಿಡ್ 19 ನಿರ್ಬಂಧಕ್ಕೆ ಸಹಕಾರ ನೀಡಬೇಕು. ನಮ್ಮ ಬಳಿ ಸೆನಿಟೈಸರ್, ಮಾಸ್ಕ್ ಎಲ್ಲವೂ ಇದೆ. ಜಿಲ್ಲೆಯಲ್ಲಿ ಏ. 10ರಿಂದ ಪುನಃ ಆಶಾ ಕಾರ್ಯಕರ್ತರು ಜೊತೆ ಸರ್ವೇ ಮಾಡುತ್ತಿದ್ದಾರೆ. ದೆಹಲಿಯಿಂದ ಬಂದವರು ಜಿಲ್ಲೆಯಲ್ಲಿ ಇದ್ದಾರೆ. ಅವರೆಲ್ಲರ ಗಂಟಲು ದ್ರವ ಪರೀಕ್ಷಿಸಲಾಗಿದೆ. ನೆಗೆಟಿವ್ ಬಂದಿದೆ. ಭಟ್ಕಳ ಸೇರಿದಂತೆ ಇನ್ನಾರಲ್ಲೂ ಇಂಥ ರೋಗ ಲಕ್ಷಣ ಕಂಡಿಲ್ಲ ಎಂದರು.
ಎಸ್ಪಿ ಅವರು ವಿಶೇಷ ತನಿಖಾ ದಳದಿಂದಲೂ ದೆಹಲಿಗೆ ಇನ್ನಾದರೂ ಹೋಗಿದ್ದರಾ ಎಂಬ ತನಿಖೆ ಕೂಡ ಮಾಡಿದ್ದಾರೆ. ಕಾರ್ಮಿಕ ಇಲಾಖೆಯಿಂದ ಕಾರ್ಮಿಕರ ಖಾತೆಗೆ ಹಾಕುತ್ತಿರುವ 1000 ರೂ. ಧನ ಸಹಾಯವನ್ನು ಯಾವುದೇ ಕಾರಣಕ್ಕೂ ಬ್ಯಾಂಕಿನವರು ಸಾಲದ ರೂಪದಲ್ಲಿ ಮುರಿದುಕೊಳ್ಳಬಾರದು. ಲಾಕ್ ಡೌನ್ ಹಿನ್ನೆಲೆಯಲ್ಲಿ ಕೆಲಸ ಕಳೆದುಕೊಂಡಿರುವ ಕಾರ್ಮಿಕರ ಖಾತೆಗೆ ಸರಕಾರದವರೇ ಹಣ ನೀಡುತ್ತಿರುವುದರಿಂದ ಅದನ್ನು ಯಾವ ಕಾರಣಕ್ಕೂ ಸಾಲಕ್ಕೆ ಬರಣಮಾಡಿಕೊಳ್ಳಬಾರದು ಎಂದರು.
ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೇಶಿನ್ಮನೆ, ಕೆಎಂಎಫ್.ಕೋವಿಡ್ 19 ದಿಂದಾಗಿ ಕೆಲಸವಿಲ್ಲದೆ ಪರದಾಡುತ್ತಿರುವ ನಗರದ 160ಕ್ಕೂ ಹೆಚ್ಚಿನ ಕುಟುಂಬಗಳಿಗೆ 14 ರವರೆಗೆ ಉಚಿತವಾಗಿ ಹಾಲು ವಿತರಿಸಲಾಗುವುದು. ಈಗಾಗಲೇ ಈ ಕುಟುಂಬಗಳನ್ನು ಗುರುತಿಸಲಾಗಿದ್ದು, ಇದರಲ್ಲಿ ಜಾತ್ರೆಗೆ ಬಂದಿದ್ದ ನಾಟಕ ಕಂಪನಿ, ಸರ್ಕಸ್ ಕಂಪನಿ, ಮನೋರಂಜನೆ ಆಟಗಳ ಮಾಲಕರ ಸಿಬ್ಬಂದಿ ಸೇರಿದಂತೆ ಗೋಸಾವಿ ಗಲ್ಲಿಯ ಫಲಾನುಭವಿಗಳೂ ಸೇರಿದ್ದಾರೆ ಎಂದರು.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜ, ಉಪವಿಭಾಗಾಧಿಕಾರಿ ಡಾ| ಈಶ್ವರ ಉಳ್ಳಾಗಡ್ಡಿ, ಧಾರವಾಡ ಹಾಲು ಒಕ್ಕೂಟ ನಿರ್ದೇಶಕ ಸುರೇಶ್ಚಂದ್ರ ಕೇಶಿನ್ಮನೆ, ಡಿವೈಎಸ್ಪಿ ಗೋಪಾಲಕೃಷ್ಣ ನಾಯಕ್, ಸಿಪಿಐ ಪ್ರದೀಪ್ ಯು.ಬಿ., ಪೌರಾಯುಕ್ತ ರಮೇಶ ನಾಯಕ್, ನಗರ ಸಭೆ ಹಿರಿಯ ಆರೋಗ್ಯಾಧಿಕಾರಿ ಆರ್.ಎಂ. ವೆರ್ಣೇàಕರ್ ಮುಂತಾದವರು ಇದ್ದರು