Advertisement

ರಾಜ್ಯದ ಏಳು ಕೇಂದ್ರಗಳಲ್ಲಿಂದು ಮರು ಮತದಾನ

07:44 PM May 18, 2019 | Team Udayavani |

ಕುಂಬಳೆ/ಕಾಸರಗೋಡು: ಬೋಗಸ್‌ ಮತದಾನದ ಹಿನ್ನೆಲೆಯಲ್ಲಿ ಕಾಸರಗೋಡು ಮತ್ತು ಕಣ್ಣೂರು ಲೋಕಸಭೆಯ ಏಳು ಬೂತ್‌ಗಳಲ್ಲಿ ಮೇ 19 ರಂದು ಮರು ಮತದಾನ ನಡೆಯಲಿದೆ. ಕಾಸರಗೋಡು ಲೋಕಸಭಾ ಕ್ಷೇತ್ರದ ನಾಲ್ಕು ಮತ್ತು ಕಣ್ಣೂರು ಲೋಕಸಭಾ ಕ್ಷೇತ್ರದ ಮೂರು ಬೂತ್‌ಗಳಲ್ಲಿ ಬೆಳಗ್ಗೆ 7 ರಿಂದ ಸಂಜೆ 6 ರ ವರೆಗೆ ಮತದಾನ ನಡೆಯುವುದು.

Advertisement

ಕಾಸರಗೋಡು ಲೋಕಸಭಾ ಕ್ಷೇತ್ರಕ್ಕೊಳಪಟ್ಟ ತೃಕ್ಕರಿಪುರ ವಿಧಾನಸಭಾ ಕ್ಷೇತ್ರದ ಚೀಮೇನಿ ಕುಳಮಾಡು ಜಿಎಚ್‌ಎಸ್‌ನ 48 ನೇ ನಂಬ್ರದ ಮತಗಟ್ಟೆ, ಕಲ್ಯಾಶೆÏàರಿ ವಿಧಾನಸಭೆಯ ಪಿಲಾತ್ತರ ಯು.ಪಿ. ಶಾಲೆ 19 ನೇ ನಂಬ್ರದ ಮತಗಟ್ಟೆ, ಪುದಿಯಂಙಾಡಿ ಜಮಾಯತ್‌ ಹೈಯರ್‌ ಸೆಕೆಂಡರಿ ಉತ್ತರ ಭಾಗದ ಬೂತ್‌ ನಂಬ್ರ 69, ಪುದಿಯಂಙಾಡಿ ಜಮಾಯತ್‌ ಹೈಯರ್‌ ಸೆಕೆಂಡರಿ ತೆಂಕು ಭಾಗದ 70 ನೇ ನಂಬ್ರದ ಮತಗಟ್ಟೆಗಳಲ್ಲಿ ಮತದಾನ ನಡೆಯುವುದು.

ಕಣ್ಣೂರು ಲೋಕಸಭಾ ಕ್ಷೇತ್ರದ ತಳಿಪರಂಬ ವಿಧಾನಸಭಾ ಕ್ಷೇತ್ರದ ಪಾಂಬುರುತ್ತಿ ಮಾಪಿಳ್ಳ ಎಯುಪಿ ಶಾಲೆಯ ಬೂತ್‌ ನಂಬ್ರ 166, ಧರ್ಮಡಂ ವಿಧಾನಸಭಾ ಕ್ಷೇತ್ರದ ಕುನ್ನೇರಿಕ ಯು.ಪಿ.ಶಾಲೆ ಎಡಕುಂಭಾಗದ ಬೂತ್‌ ನಂಬ್ರ 52 ಮತ್ತು ಕುನ್ನರಿಕ ಯು.ಪಿ. ಶಾಲೆಯ ತೆಂಕು ಭಾಗದ 53 ನೇ ನಂಬ್ರದ ಮತಗಟ್ಟೆಗಳಲ್ಲಿ ಮರುಮತದಾನ ನಡೆಯಲಿದೆ.

ಬೋಗಸ್‌ ಮತದಾನ ನಡೆದ ನಾಲ್ಕು ಮತಗಟ್ಟೆಗಳಿಗೆ ಮಾತ್ರವೇ ಮರುಮತದಾನ ನಡೆಸಲು ಚುನಾವಣಾ ಆಯೋಗ ಮೇ 16 ರಂದು ತೀರ್ಮಾನಿಸಿತ್ತು. ಆ ಬಳಿಕ ಮೇ 17 ರಂದು ಇನ್ನೂ ಮೂರು ಬೂತ್‌ಗಳಲ್ಲಿ ಮರುಮತದಾನ ನಡೆಸಲು ಚುನಾವಣಾ ಆಯೋಗ ತೀರ್ಮಾನಿಸಿದ್ದು, ಈ ಹಿನ್ನೆಲೆಯಲ್ಲಿ ಏಳು ಮತಗಟ್ಟೆಯಲ್ಲಿ ಮರುಮತದಾನಕ್ಕೆ ಪೂರ್ಣ ಸಜ್ಜುಗೊಳಿಸಲಾಗಿದೆ. ಬೆಳಗ್ಗೆ 7 ಗಂಟೆಗೆ ಆರಂಭಗೊಂಡು ಸಂಜೆ 6 ರ ವರೆಗೆ ಮತ ಚಲಾಯಿಸಬಹುದು.

ಬಹಿರಂಗ ಪ್ರಚಾರಕ್ಕೆ ಮೇ 17 ರ ಸಂಜೆ ತನಕ ಅವಕಾಶ ನೀಡಲಾಗಿತ್ತು. ಕಾಸರಗೋಡು ಲೋಕಸಭಾ ಕ್ಷೇತ್ರದ ಪಿಲಾತ್ತರದಲ್ಲಿ ಯುಡಿಎಫ್‌ ಅಭ್ಯರ್ಥಿ ರಾಜ್‌ಮೋಹನ್‌ ಉಣ್ಣಿತ್ತಾನ್‌ ನಡೆಸಿದ ಪ್ರಚಾರ ಸಭೆಗೆ ಎಡರಂಗ ಕಾರ್ಯಕರ್ತರು ಆಕ್ರಮಣ ನಡೆಸಿದ್ದಾಗಿ ಆರೋಪಿಸಲಾಗಿತ್ತು.

Advertisement

ರಾಜ್‌ಮೋಹನ್‌ ಉಣ್ಣಿತ್ತಾನ್‌ ಅವರಿಗೆ ಹಲ್ಲೆ ಮಾಡಲಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆಯನ್ನು ಚಿತ್ರೀಕರಿಸುತ್ತಿದ್ದ ಟಿ.ವಿ. ಚಾನೆಲ್‌ ಪ್ರತಿನಿಧಿಗೂ ಹಲ್ಲೆ ಮಾಡಲಾಗಿತ್ತು. ಯುಡಿಎಫ್‌ನ ಪ್ರಚಾರ ವಾಹನವನ್ನು ಹಾನಿಗೊಳಿಸಲಾಗಿತ್ತು.

ಬಿಗು ಬಂದೋಬಸ್ತು
ಮರು ಮತದಾನ ನಡೆಯುವ ಏಳು ಬೂತ್‌ಗಳಲ್ಲಿ ಮತ್ತು ಪರಿಸರ ಪ್ರದೇಶದಲ್ಲಿ ಬಿಗು ಪೊಲೀಸ್‌ ಬಂದೋಬಸ್ತು ಏರ್ಪಡಿಸಲಾಗಿದೆ. ಹೆಚ್ಚುವರಿ ಪೊಲೀಸರನ್ನು ಕರೆಸಲಾಗಿದೆ. ಮರುಮತದಾನ ನಡೆಯುವ ಕೇಂದ್ರಗಳಲ್ಲಿ ವೆಬ್‌ಕಾಸ್ಟ್‌ ವೀಡಿಯೋ ಕ್ಯಾಮರಾಗಳನ್ನು ಏರ್ಪಡಿಲಾಗಿದೆ.

ವರದಿ ಆಧಾರ
ಮತದಾನ ಕೇಂದ್ರಗಳಲ್ಲಿ ಅಳವಡಿಸಿದ ಲೈವ್‌ವೆಬ್‌ ಕೆಮರಾ ಗಳ ಆಧಾರದಲ್ಲಿ ಚುನಾವಣಾ ಅಧಿಕಾರಿಗಳು ಎಡರಂಗ ಮತ್ತು ಐಕ್ಯರಂಗದ ಮತದಾರದು ನಕಲಿ ಮತದಾನ ಚಲಾಯಿಸಿರುವುದನ್ನು ಕಂಡು ಹಿಡಿದು ಉನ್ನತ ಅಧಿಕಾರಿಗಳಿಗೆ ವರದಿ ಸಲ್ಲಿಸಿದ ಆಧಾರದಲ್ಲಿ ಮರುಮತದಾನಕ್ಕೆ ಆದೇಶ ನೀಡಲಾಗಿದೆ.ಅದರಂತೆ ರಾಜ್ಯ ಮುಖ್ಯ ಚುನಾವಾಣಾಧಿಕಾರಿ ಟಿಕಾರಾಂ ಮೀಣ ಅವರು ತಮ್ಮ ಪಕ್ಷದ ವತಿಯಿಂದ ನಕಲಿ ಮತ ದಾನವಾಗಿಲ್ಲವೆಂಬ ರಾಜಕೀಯ ನಾಯಕರ ಸಮರ್ಥ ನೆಗಳಿಗೆ ಸವಾಲೊಡ್ಡಿರುವರು.

Advertisement

Udayavani is now on Telegram. Click here to join our channel and stay updated with the latest news.

Next