ಕಾಪು: ಮಣ್ಣಿನ, ಊರಿನ ಪ್ರೀತಿ, ಪ್ರಾಚೀನತೆ, ಜನಪದ ಉಳಿಯಲು ಇಂತಹ ಸಂಘ ಸಂಸ್ಥೆಗಳು ಮತ್ತಷ್ಟು ಬೇಕಿದೆ. ಹಡೀಲು ಗದ್ದೆಯನ್ನು ಕೃಷಿ ಗದ್ದೆಯಾಗಿ ಪರಿವರ್ತಿಸುವ ಕೆಸರ್ಡ್ ಕುಸಲ್ ಕಾರ್ಯಕ್ರಮವು ಕೃಷಿಯ ಗತವೈಭವವನ್ನು ಮರುಸೃಷ್ಟಿಸುತ್ತದೆ ಎಂದು ಜಾನಪದ ಕಲಾವಿದ, ಯಕ್ಷಗಾನ ಗುರು ಸುರೇಶ್ ಕೊಲಕಾಡಿ ಹೇಳಿದರು.
ಎಲ್ಲೂರು ಗ್ರಾಮದ ಕೆಮುಂಡೇಲು ಕುದುರೆಬೆ„ಲಿನ ಅಮಾಸೆಮಾರು ಗದ್ದೆಯಲ್ಲಿ ಜು. 30ರಂದು ಶ್ರೀ ಪಾಂಡುರಂಗ ಭಜನಾ ಮಂಡಳಿ, ಪಾಂಡುರಂಗ ಹವ್ಯಾಸಿ ಕಲಾ ಸಂಘ, ಪೂಜಾ ಮಹಿಳಾ ಮಂಡಲ, ಕೆಮುಂಡೇಲು ಹಿರಿಯ ಪ್ರಾಥಮಿಕ ಶಾಲೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವಜನ ಮತ್ತು ಕ್ರೀಡಾ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಕೆಸರ್ಡ್ ಕುಸಲ್ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅದಮಾರು ಪೂರ್ಣಪ್ರಜ್ಞ ಕಾಲೇಜಿನ ಉಪಾನ್ಯಾಸಕ ಡಾ| ಜಯಶಂಕರ ಕಂಗಣ್ಣಾರು ಮಾತನಾಡಿ, ಕೂಟ ಪದ್ಧತಿ ಸಂಸ್ಕೃತಿಯನ್ನು ಗಟ್ಟಿಯಾಗಿ ಉಳಿಸಿದೆ. ಪಾಶ್ಚಿಮಾತ್ಯ ಸಂಸ್ಕೃತಿಯ ಧಾಳಿಯನ್ನು ಮೆಟ್ಟಿ ನಿಂತು ಭಾರತೀಯ ನಾಗರೀಕತೆ ಉಳಿಸಲು ಗ್ರಾಮೀಣ ಭಾಗದ ಚಟುವಟಿಕೆಗಳೇ ಕಾರಣ. ನಮ್ಮ ಮಣ್ಣಿನ ಸಂಸ್ಕೃತಿ ನಮ್ಮ ಮಕ್ಕಳಿಗೆ ತಿಳಿಸಿ ಮಣ್ಣಿನ ಮಕ್ಕಳನ್ನಾಗಿಸುವ ಹೊಣೆಗಾರಿಕೆ ನಮ್ಮದು ಎಂದರು.
ಕೃಷಿ ಕಾರ್ಮಿಕರಾದ ಸುಶೀಲಾ, ಬೇಬಿ, ರತ್ನಾ, ರತಿ, ಜಯಂತಿ ಸಮಾರಂಭವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಲ್ಲೂರು ಗ್ರಾ.ಪಂ. ಅಧ್ಯಕ್ಷೆ ವಸಂತಿ ಮಧ್ವರಾಜ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಯೋಗ ಶಿಕ್ಷಕಿ, ನಿವೃತ್ತ ಉಪನ್ಯಾಸಕಿ ಶ್ಯಾಮಲ ನಾಗರತ್ನ ಕೆಸರು ಗದ್ದೆಯಲ್ಲಿ ಯೋಗ ತರಬೇತಿ ನೀಡುವ ಮೂಲಕ ಉದ್ಘಾಟಿಸಿದರು. ಇತೀ¤ಚೆಗೆ ನಿಧನರಾದ ಹುಟ್ಟೂರ ಮಗನಾದ ಇಸ್ರೋ ವಿಜ್ಞಾನಿ ಪ್ರೊ| ಯು. ಆರ್. ರಾವ್ ಮತ್ತು ರಸ್ತೆ ಅಪಘಾತದಿಂದ ಮƒತಪಟ್ಟ ಅವಿನಾಶ್ ದೇವಾಡಿಗ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಚಾರ್ಟರ್ಡ್ ಆಕೌಂಟೆಂಟ್ ರಾಘವೇಂದ್ರ ಮೊಗೆರಾಯ, ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ಶೆಟ್ಟಿಗಾರ್, ಶಿಕ್ಷಕ ದೇವಿಪ್ರಸಾದ್ ಬೆಳ್ಳಿಬೆಟ್ಟು, ಶರತ್ ಶೆಟ್ಟಿ ಉಳ್ಳೂರು ಗುತ್ತು, ಸುರೇಶ್ ಕುಲಾಲ್, ನಾಗರಾಜ ಶೆಟ್ಟಿ, ರಾಘವೇಂದ್ರ ರಾವ್, ಉಪಸ್ಥಿತರಿದ್ದರು. ಪ್ರ. ಕಾರ್ಯದರ್ಶಿ ಪಿ. ಕೃಷ್ಣಾನಂದ ರಾವ್ ಸ್ವಾಗತಿಸಿದರು. ಗ್ರಾ. ಪಂ. ಸದಸ್ಯ ರಾಜೇಂದ್ರ ಎಸ್. ವಂದಿಸಿದರು. ಉಪಾನ್ಯಾಸಕ ಹರೀಶ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.