Advertisement

2020ರಲ್ಲಿ ಮತ್ತೆ ಚುನಾವಣೆ: ಮಾಜಿ ಸಿಎಂ ಸಿದ್ಧರಾಮಯ್ಯ ಭವಿಷ್ಯ

10:26 AM Oct 06, 2019 | Team Udayavani |

ಮೂಡುಬಿದಿರೆ: ಹೇಳಿಕೊಳ್ಳುವ ಯಾವುದೇ ಸಾಧನೆಯಿಲ್ಲದ, ಜನಪರ ಕಾರ್ಯಕ್ರಮಗಳಿಲ್ಲದ ಯಡಿಯೂರಪ್ಪ ನೇತೃತ್ವದ ಸರಕಾರ ಪತನಗೊಳ್ಳುವ ಎಲ್ಲ ಸಾಧ್ಯತೆಗಳಿವೆ. ಸರಕಾರ ಪತನಗೊಂಡು 2020ರಲ್ಲಿ ಮತ್ತೆ ಚುನಾವಣೆ ನಡೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭವಿಷ್ಯ ನುಡಿದರು.

Advertisement

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡುವ ಸಲುವಾಗಿ ಶನಿವಾರ ಬಂದಿದ್ದ ಅವರು ಬೆಳಗ್ಗೆ ಮೂಡುಬಿದಿರೆಯಲ್ಲಿ ಮಾಜಿ ಸಚಿವ ಕೆ. ಅಭಯಚಂದ್ರ ಅವರ ಮನೆಗೆ ಸೌಹಾರ್ದ ಭೇಟಿ ನೀಡಿದ ಸಂದರ್ಭ ಪತ್ರಕರ್ತರೊಂದಿಗೆ ಮಾತನಾಡಿದರು.

ಬರ ಪರಿಹಾರ ಏನೇನೂ ಸಾಲದು
ನೆರೆಯಿಂದಾಗಿ ರಾಜ್ಯದಲ್ಲಿ ಎರಡೂವರೆ ಲಕ್ಷ ಮನೆಗಳು ಹಾನಿಗೊಳಗಾಗಿವೆ. ಸುಮಾರು ಒಂದು ಲಕ್ಷ ಕೋಟಿ ರೂಪಾಯಿಗಳಿಗೂ ಅಧಿಕ ನಷ್ಟವಾಗಿದೆ. ಕೇಂದ್ರ ಸರಕಾರ ತಕ್ಷಣ 5,000 ಕೋಟಿ ರೂ. ಬಿಡುಗಡೆಮಾಡಬೇಕೆಂದು ನಾವು ಒತ್ತಾಯಮಾಡಿದ್ದರೆ ಇದೀಗ ಕೇವಲ 1.200 ಕೋಟಿಯನ್ನಷ್ಟೇ ಕೇಂದ್ರವು ಬಿಡುಗಡೆ ಮಾಡಿದೆ’ ಎಂದು ವಿಷಾದಿಸಿದರು.

ತಂತಿ ಮೇಲೆ ನಡೆಯುವ ಸ್ಥಿತಿ?
ಯಡಿಯೂರಪ್ಪನವರು ಖಜಾನೆ ಖಾಲಿಯಾಗಿದೆ ಅಂತ ಹೇಳಿಕೆ ನೀಡ್ತಾ ಇದ್ದಾರಲ್ಲ, ಖಜಾನೆ ಖಾಲಿ ಅಂದ್ರೆ ಏನು ಅರ್ಥ?. ಪ್ರತಿ ತಿಂಗಳು ತೆರಿಗೆ ಬರುತ್ತಾ ಇರುತ್ತದೆ. ತೆರಿಗೆ ಸೂಕ್ತ ರೀತಿಯಲ್ಲಿ ಸಂಗ್ರಹ ಮಾಡಿದರೆ ಸಮಸ್ಯೆ ಬರೋದಿಲ್ಲ’ ಎಂದ ಅವರು ತಾವು ಮುಖ್ಯಮಂತ್ರಿ ಆಗಿದ್ದ 5 ವರ್ಷಗಳಲ್ಲಿ ಆರ್ಥಿಕ ಸಮಸ್ಯೆ ಆಗಿದ್ದಿಲ್ಲವಲ್ಲ’ ಎಂದರು.

“ತಂತಿ ಮೇಲೆ ನಡೆಯುವಂಥ ಪರಿಸ್ಥಿತಿ ಇದ್ರೆ, ಯಡಿಯೂರಪ್ಪನವರೇ ನಡೆಯಬೇಡಿ. ವಯಸ್ಸಾಗಿದೆ ಜಾರಿ ಬೀಳುತ್ತೀರಿ’ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next