Advertisement

ಮರು ಎಣಿಕೆಯಲ್ಲಿ ಸಿಕ್ಕಿತು 4 ಅಂಕ ! 625 ಅಂಕ ಪಡೆದ ಮೊಹಮ್ಮದ್‌ ಅಬೀದ್‌ ಆಲಿ

12:07 AM Jun 06, 2022 | Team Udayavani |

ಸುರತ್ಕಲ್‌: ಮರು ಎಣಿಕೆಗೆ ಅರ್ಜಿ ಹಾಕಿದ್ದರಿಂದ ಕನ್ನಡದಲ್ಲಿ ನಾಲ್ಕು ಅಂಕ ಹೆಚ್ಚು ಪಡೆದ ಕಾಟಿಪಳ್ಳದ ಮೊಹಮ್ಮದ್‌ ಅಬಿದ್‌ ಆಲಿ 625 ಅಂಕ ಪಡೆದಿದ್ದಾರೆ.

Advertisement

ಕಾಟಿಪಳ್ಳ 2ನೇ ಬ್ಲಾಕಿನ ನಿವಾಸಿ ಅಬ್ದುಲ್‌ ಖಾದರ್‌ ಜಿಲಾನಿ ಶಮೀಮಾ ದಂಪತಿ ಪುತ್ರ ಅಬೀದ್‌ ಕಲಿಕೆಯಲ್ಲಿ ಸದಾ ಪ್ರಥಮ ಸ್ಥಾನದಲ್ಲಿ ಇರುತ್ತಿದ್ದ, ಕಾಟಿಪಳ್ಳದ ಇನ್‌ಫೆಂಟ್‌ ಶಾಲೆಗೆ ಕೀರ್ತಿ ತರುತ್ತಾನೆ ಎಂಬ ವಿಶ್ವಾಸದಲ್ಲಿದ್ದೆವು. ಆದರೆ ಕನ್ನಡದಲ್ಲಿ 4 ಅಂಕ ಕಡಿಮೆ ಬಂದ ಕಾರಣ ಒಟ್ಟು 621 ಅಂಕ ಬಂದಿತ್ತು.

ಮರು ಎಣಿಕೆಗೆ ಅರ್ಜಿ ಹಾಕಿದ್ದರಿಂದ ಕನ್ನಡದಲ್ಲಿಯೂ 100 ಅಂಕ ಸಿಕ್ಕಿದ್ದು ಶಾಲೆಗೆ ಕೀರ್ತಿ ತಂದಿದ್ದಾನೆ ಎಂದು ಪ್ರಾಂಶುಪಾಲೆ ಮಾರ್ಗರೆಟ್‌ ಪಾಯಸ್‌ ಸಂತಸ ವ್ಯಕ್ತಪಡಿಸಿದ್ದಾರೆ.

ಅಬೀದ್‌ ಪೋಷಕರು ತಮ್ಮ ಮಗನ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಯಾವುದೇ ಬಲವಂತವಿಲ್ಲದೆ ತಾನಾಗಿಯೇ ಓದಿ ಉತ್ತಮ ಅಂಕ ಗಳಿಸಿದ್ದಾನೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next