Advertisement
ಈಗಾಗಲೇ ಸಮಾಜ ಕಲ್ಯಾಣ ಇಲಾಖೆಯಿಂದ ಅನುಮೋದನೆಗೊಂಡು ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯ ಅನು ದಾನ, (ಐಟಿಡಿಪಿ)ಯಿಂದ 4 ಮನೆಗಳಿಗೆ ತಲಾ 2ಲಕ್ಷ ರೂ. ಈಗಾಗಲೇ ಅನುದಾನ ಮಂಜೂರಾಗಿದೆ. ಬಜಪೆ ಗ್ರಾ.ಪಂ. ಅನು ದಾನದಿಂದ ತಲಾ 50 ಸಾವಿರ ರೂ.ನಂತ ನಾಲ್ಕು ಮನೆಗಳಿಗೆ ಅನುದಾನ ನೀಡಲಾಗುತ್ತಿದೆ.
2011ರ ಸರ್ವೆ ಪ್ರಕಾರ ಜಿಲ್ಲೆಯಲ್ಲಿ ಕೊರಗರ 6,064 ಜನಸಂಖ್ಯೆ ಇದ್ದು, ಮಂಗಳೂರು ಗ್ರಾಮಾಂತರದಲ್ಲಿ 2,705 ಜನಸಂಖ್ಯೆ ಹಾಗೂ ಬಜಪೆ ಗ್ರಾ.ಪಂ.ನಲ್ಲಿ 40 ಜನಸಂಖ್ಯೆ 8 ಕುಟುಂಬಗಳಿವೆ. ಇದರಲ್ಲಿ 7 ಕುಟುಂಬಗಳ ಮನೆ ನಾದು ರಸ್ತಿ ಯಲ್ಲಿವೆ. ಅನ್ನು ಕೊರಗ, ಅಪ್ಪಿ ಆನಂದ, ಹೊನ್ನು ಕೊರಗ,ಪೊನ್ನು ಕೊರಗ ಇವರ ನಾಲ್ಕು ಮನೆಗಳನ್ನು ಈ ಬಾರಿಯ ಯೋಜನೆಯಲ್ಲಿ ಆರ್‌ಸಿಸಿ ಮನೆಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಯಾಗಿದೆ. ಬಾಕಿ ಉಳಿದ ಅಣ್ಣಿ ಕೊರಗ, ಲಕ್ಷ್ಮೀ, ರೂಪಾ ಅವರ ಆರ್‌ಟಿಸಿ ಅವರ ಹೆಸರಿನಲ್ಲಿರದ ಕಾರಣ ಅದನ್ನು ಸರಿಪಡಿಸಿ. ಮುಂದಿನ ಅನುದಾನದಲ್ಲಿ ಮನೆಗಳ ನಿರ್ಮಾಣಕ್ಕೆ ಕ್ರಮ ತೆಗೆದುಕೊಳ್ಳುವ ಬಗ್ಗೆ ಗ್ರಾ.ಪಂ. ನಿರ್ಧಾರ ತೆಗೆದುಕೊಂಡಿದೆ. ಈ ನಾಲ್ಕು ಮನೆಗಳಿಗೆ 2ವರ್ಷಗಳಿಂದ ಮಳೆಗಾಲದಲ್ಲಿ ಪಂಚಾಯತ್‌ನಿಂದ ಟರ್ಪಾ ಲನ್ನು ನೀಡಲಾಗಿತ್ತಿತ್ತು. ಈ ಬಾರಿ ಮನೆಗಳು ಬೀಳುವ ಸ್ಥಿತಿಯಲ್ಲಿ ದ್ದರಿಂದ ಮನೆ ನಿರ್ಮಾಣಕ್ಕಾಗಿ ಇಲಾ ಖೆ ಯನ್ನು ಸಂಪರ್ಕಿಸಿ ಅರ್ಜಿ ಸಲ್ಲಿ ಸಲಾ ಗಿತ್ತು. ಮನೆ ನಿರ್ಮಾಣಕ್ಕೆ 2ಲಕ್ಷ ರೂ. ಅನುದಾನ ಸಾಲದು. ಇದಕ್ಕಾಗಿ ಪಂಚಾಯತ್‌ನಿಂದ 50ಸಾವಿರ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಮುಂದೆ ಬೇರೆ ಅನುದಾನದಿಂದ ಈ ಮನೆ ಪೂರ್ಣಗೊಳಿಸಲಾಗುವುದು. ಉಳಿದ 3 ಕುಟುಂಬಗಳ ಜಾಗದ ದಾಖಲೆಯನ್ನು ಸರಿಪಡಿಸಿ, ಆರ್‌ಸಿಸಿ ಮನೆಯನ್ನಾಗಿ ಕಟ್ಟುವ ಉದ್ದೇಶವಿದೆ ಎಂದು ಗ್ರಾ.ಪಂ. ಸದಸ್ಯ ಸುರೇಂದ್ರ ಪೆರ್ಗಡೆ ತಿಳಿಸಿದ್ದಾರೆ.
Related Articles
ಗ್ರಾ.ಪಂ. ಅಧ್ಯಕ್ಷೆ ರೋಜಿ ಮಥಾ ಯಸ್, ಸದಸ್ಯರಾದ ಸುರೇಂದ್ರ ಪೆರ್ಗಡೆ, ಲೋಕೇಶ್ ಪೂಜಾರಿ ಹಾಗೂ ಪಿಡಿಒ ಸಾಯೀಶ್ ಚೌಟ ಅವರು ಈಗಾಗಲೇ ಕೊರಗರ ಕಾಲನಿಯ ಮನೆಗಳಿಗೆ ಭೇಟಿ ನೀಡಿ, ಸ್ಥಿತಿಗತಿಯ ಬಗ್ಗೆ ಪರಿಶೀಲಿಸಿ, ಅವರಿಗೆ ಅನುಕೂಲವಾಗುವಂತೆ ಆರ್ ಸಿಸಿ ಮನೆಗಳನ್ನು ನಿರ್ಮಾಣ ಮಾಡಬಹುವುದು. ಕೊರಗರ ಕುಟುಂಬದ ಸದಸ್ಯರನ್ನು ಕರೆಸಿ ಅವರ ಅಭಿಪ್ರಾಯಗಳನ್ನು ತಿಳಿದು ಮುಂದಿನ ಮನೆ ನಿರ್ಮಾಣದ ಬಗ್ಗೆ ಕ್ರಮ ತೆಗೆದುಕೊಳ್ಳಲು ಹಾಗೂ ಅದಕ್ಕೆ ಬೇಕಾದ ಹೆಚ್ಚುವರಿ ಹಣವನ್ನು ಕ್ರೋಢಿಕರಿಸುವ ಬಗ್ಗೆ ಚರ್ಚಿಸಲಾಗಿದೆ. ಒಂದು ಆರ್‌ಸಿಸಿ ಮನೆಗೆ 4.5ಲಕ್ಷ ರೂ. ಅಗತ್ಯವಿದ್ದು ಈ ಬಗ್ಗೆ ಸಮಾಜ ಕಲ್ಯಾಣ ಹಾಗೂ ಪಂಚಾಯತ್‌ನ ಮುಂದಿನ ಹಣಕಾಸು ಯೋಜನೆಯ ಶೇ. 25ರ ಹಣವನ್ನು ಬಿಡುಗಡೆ ಮಾಡುವ ಬಗ್ಗೆಯೂ ಚಿಂತಿಸಲಾಗಿದೆ.
Advertisement
ಮನೆ ನಿರ್ಮಾಣಕ್ಕೆ 2 ಲಕ್ಷ ರೂ. ಅನುದಾನಅರ್ಜಿಯೊಂದಿಗೆ ಅವರ ಜಾತಿ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಆರ್‌ಟಿಸಿ, ಬ್ಯಾಂಕ್ ಖಾತೆ ಬಗ್ಗೆ ದಾಖಲೆ ಹಾಗೂ ಪಂಚಾಯತ್‌ನಿಂದ ಶಿಫಾರಸು ಪತ್ರವನ್ನು ನೀಡಿದಲ್ಲಿ ಅವರಿಗೆಲ್ಲರಿಗೂ ಅನುಮೋದನೆ ನೀಡಲಾಗಿದೆ. ಈ ಮುಂಚೆ ಮನೆ ಕಟ್ಟಲು 2ಲಕ್ಷ ರೂ. ಅನುದಾನ ನೀಡಲಾಗುತ್ತಿತ್ತು. 2019-20ಸಾಲಿನಿಂದ ಮನೆ ನಿರ್ಮಾಣಕ್ಕಾಗಿ 3.5ಲಕ್ಷ ರೂ ಅನುದಾನ ನೀಡಲಾಗುತ್ತದೆ.
- ಸೋಮಶೇಖರ್, ಸಮನ್ವಯಾಧಿಕಾರಿ, ಗಿರಿಜನ ಅಭಿವೃದ್ಧಿ ಯೋಜನೆ, ಮಂಗಳೂರು - ಸುಬ್ರಾಯ ನಾಯಕ್, ಎಕ್ಕಾರು