Advertisement
ಒಟ್ಟಾರೆಯಾಗಿ, ಇದುವರೆಗೆ ಎರಡು ತಂಡಗಳು 26 ಬಾರಿ ಮುಖಾಮುಖಿಯಾಗಿದ್ದು, ರಾಜಸ್ಥಾನ ತಂಡ 11 ಮತ್ತು ಆರ್ ಸಿಬಿ 13 ರಲ್ಲಿ ವಿಜಯಶಾಲಿಯಾಗಿದೆ. 2018 ರ ಬಳಿಕ ನಾಲ್ಕು ಪಂದ್ಯಗಳಲ್ಲಿ ರಾಜಸ್ಥಾನ ಗೆದ್ದರೆ, ಆರ್ ಸಿಬಿ ಐದರಲ್ಲಿ ಗೆದ್ದಿದೆ.
Related Articles
Advertisement
2011 ರಲ್ಲಿ ಪ್ಲೇ ಆಫ್‌ಗಳನ್ನು ಪರಿಚಯಿಸಿದಾಗಿನಿಂದ, ಲೀಗ್ ಹಂತದಲ್ಲಿ ಎರಡನೇ ಸ್ಥಾನ ಗಳಿಸಿದ ತಂಡವು ಹಿಂದಿನ 11 ವರ್ಷಗಳಲ್ಲಿ ಪ್ರತಿಯೊಂದು ಬಾರಿಯೂ ಫೈನಲ್ ಗೆ ತಲುಪಿದೆ. ಏಳು ಬಾರಿ ಪ್ರಶಸ್ತಿಯನ್ನು ಗೆದ್ದಿದೆ. ಈ ಬಾರಿ ರಾಜಸ್ಥಾನ ಲೀಗ್ ಹಂತದಲ್ಲಿ ಎರಡನೇ ಸ್ಥಾನ ಗಳಿಸಿದೆ.
ಸಂಭಾವ್ಯ ತಂಡ
ಆರ್ ಸಿಬಿ: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾ), ರಜತ್ ಪಾಟೀದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್ (ವಿ.ಕೀ), ಮಹಿಪಾಲ್ ಲೊಮ್ರೋರ್, ಶಹಬಾಜ್ ಅಹ್ಮದ್, ವಾನಿಂದು ಹಸರಂಗ, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಜೋಶ್ ಹ್ಯಾಜಲ್‌ವುಡ್.
ರಾಜಸ್ಥಾನ: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ನಾ ಮತ್ತು ವಿ.ಕೀ), ದೇವದತ್ ಪಡಿಕ್ಕಲ್, ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಪ್ರಸಿದ್ಧ್ ಕೃಷ್ಣ, ಯುಜುವೇಂದ್ರ ಚಾಹಲ್, ಓಬೇಡ್ ಮೆಕಾಯ್.