Advertisement

ಇಂದು ಬೆಂಗಳೂರು ವರ್ಸಸ್ ಕೋಲ್ಕತ್ತಾ ಕಾಳಗ: ಇಲ್ಲಿದೆ ಸಂಭಾವ್ಯ ಆಟಗಾರರ ಪಟ್ಟಿ

04:32 PM Sep 20, 2021 | Team Udayavani |

ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಯುಎಇ ಚರಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ತಂಡ ಇಂದು ತನ್ನ ಪ್ರಥಮ ಪಂದ್ಯವಾಡಲಿದೆ.

Advertisement

ಅಬುಧಾಬಿಯ ಶೇಖ್ ಜಯೇದ್ ಸ್ಟೇಡಿಯಂನಲ್ಲಿ ಇಂದು ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಆರ್ ಸಿಬಿ ಹುಡುಗರು ಎದುರಿಸಲಿದ್ದಾರೆ. ಇದುವರೆಗೆ ಇವೆರೆಡು ತಂಡಗಳು 27 ಬಾರಿ ಮುಖಾಮುಖಿಯಾಗಿದ್ದು, ಕೆಕೆಆರ್ 14 ಬಾರಿ ಗೆದ್ದಿದ್ದರೆ, ಆರ್ ಸಿಬಿ ತಂಡವು 13 ಬಾರಿ ಜಯ ಸಾಧಿಸಿದೆ. ಈ ಹಿಂದಿನ ಮುಖಾಮುಖಿಯಲ್ಲಿ ಆರ್ ಸಿಬಿ 204 ರನ್ ಗಳ ಬೃಹತ್ ಮೊತ್ತ ದಾಖಲಿಸಿ 38 ರನ್ ಅಂತರದ ಗೆಲುವು ಸಾಧಿಸಿತ್ತು.

ಇದನ್ನೂ ಓದಿ:ಬೇರೆ ತಂಡದಲ್ಲಿ ಆಡುವುದನ್ನು ಯೋಚಿಸಲೂ ಸಾಧ್ಯವಿಲ್ಲ: ವಿರಾಟ್ ಕೊಹ್ಲಿ

ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಇಂದು 200ನೇ ಐಪಿಎಲ್ ಪಂದ್ಯವಾಡಲಿದ್ದಾರೆ. ಒಂದೇ ಫ್ರಾಂಚೈಸಿ ಪರ 200 ಐಪಿಎಲ್ ಪಂದ್ಯವಾಡಿದ ಮೊದಲ ಭಾರತೀಯ ಆಟಗಾರ ಎಂಬ ಖ್ಯಾತಿಗೆ ವಿರಾಟ್ ಪಾತ್ರರಾಗಲಿದ್ದಾರೆ.

ಸಂಭಾವ್ಯ ತಂಡಗಳು:

Advertisement

ಆರ್ ಸಿಬಿ: ವಿರಾಟ್ ಕೊಹ್ಲಿ (ನಾ), ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಎಬಿ ಡಿ ವಿಲಿಯರ್ಸ್ (ವಿ.ಕೀ), ಶಹಬಾಜ್ ಅಹಮದ್/ಮೊಹಮ್ಮದ್ ಅಜರುದ್ದೀನ್, ವಾನಿಂದು ಹಸರಂಗ, ಕೈಲ್ ಜೇಮೀಸನ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಯುಜುವೇಂದ್ರ ಚಾಹಲ್

ಕೆಕೆಆರ್: ಶುಭ್ಮನ್ ಗಿಲ್, ನಿತೀಶ್ ರಾಣಾ, ರಾಹುಲ್ ತ್ರಿಪಾಠಿ, ಸುನೀಲ್ ನರೈನ್, ಇಯಾನ್ ಮಾರ್ಗನ್ (ನಾ), ಆಂಡ್ರೆ ರಸೆಲ್, ದಿನೇಶ್ ಕಾರ್ತಿಕ್ (ವಿ.ಕೀ), ಲಾಕಿ ಫರ್ಗುಸನ್, ಶಿವಂ ಮಾವಿ/ಕಮಲೇಶ್ ನಾಗರಕೋಟಿ, ಪ್ರಸಿದ್ ಕೃಷ್ಣ, ವರುಣ್ ಚಕ್ರವರ್ತಿ

Advertisement

Udayavani is now on Telegram. Click here to join our channel and stay updated with the latest news.

Next