Advertisement
“ಈ ಜಯದಿಂದ ತುಸು ನಿರಾಳವಾಗಿದೆ, ಎಲ್ಲರಿಗೂ ಸಮಾಧಾನವಾಗಿದೆ. ಕೆಲವು ಪಂದ್ಯಗಳಲ್ಲಿ ನಮಗೆ ಅದೃಷ್ಟ ಕೈಹಿಡಿದಿರಲಿಲ್ಲ. ಪ್ರತಿ ಪಂದ್ಯದಲ್ಲೂ ಅದೃಷ್ಟ ಕೈಕೊಟ್ಟಿತು ಎಂದರ್ಥವಲ್ಲ. ಆದರೆ ಒಂದೆರಡು ಪಂದ್ಯಗಳಲ್ಲಿ ನಾವು ಗೆಲುವಿನ ಸಮೀಪ ಸುಳಿದಿದ್ದೆವು. ಸತತ ಸೋಲಿನ ಬಳಿಕ ನಮ್ಮ ಹುಡುಗರಲ್ಲಿ ಗೆಲುವಿನ ತುಡಿತವಿತ್ತು. ಇಂದು ಇದು ಸಾಕಾರಗೊಂಡಿದೆ’ ಎಂದು ವಿರಾಟ್ ಕೊಹ್ಲಿ ಹೇಳಿದರು.
Related Articles
“ಇಂಥದೊಂದು ಸಮಯಕ್ಕಾಗಿ ನಾವೆಲ್ಲ ಬಹಳ ಸಮಯದಿಂದ ಕಾಯುತ್ತಲೇ ಇದ್ದೆವು. ಈಗ ಬಹಳ ಸಂತೋಷವಾಗಿದೆ. ಇದು ಸರಿಯಾದ ದಿಕ್ಕಿನತ್ತ ನಾವಿರಿಸಿದ ಸಣ್ಣ ಹೆಜ್ಜೆ. ಈಗ ನಾವಿರುವ ಸ್ಥಿತಿಯಲ್ಲಿ ಇದು ಬಹಳ ದೊಡ್ಡ ಹೆಜ್ಜೆಯೇ ಆಗಿದೆ’ ಎಂಬುದು ಪಂದ್ಯಶ್ರೇಷ್ಠ ಡಿ ವಿಲಿಯರ್ ಹೇಳಿಕೆ. ಅವರ ಅಜೇಯ 59 ರನ್ 38 ಎಸೆತಗಳಲ್ಲಿ ಬಂತು. 5 ಬೌಂಡರಿ ಜತೆಗೆ ಆರ್‌ಸಿಬಿಯ ಎರಡೂ ಸಿಕ್ಸರ್‌ಗಳನ್ನು ಅವರು ಸಿಡಿಸಿದರು.
Advertisement
ಕೊಹ್ಲಿಯದು ಕಪ್ತಾನನ ಆಟ. 53 ಎಸೆತಗಳಿಂದ ಸರ್ವಾಧಿಕ 67 ರನ್ ಹೊಡೆದರು (8 ಬೌಂಡರಿ). ಕೊಹ್ಲಿ-ಎಬಿಡಿ 2ನೇ ವಿಕೆಟಿಗೆ 85 ರನ್ ಒಟ್ಟುಗೂಡಿಸಿ ಗೆಲುವನ್ನು ಸುಲಭಗೊಳಿಸಿದರು. ಗಾಯಾಳು ನಥನ್ ಕೋಲ್ಟರ್ ನೈಲ್ ಬದಲು ತನ್ನದೇ ನಾಡಿನ ವೇಗಿ ಡೇಲ್ ಸ್ಟೇನ್ ಅವರನ್ನು ಸೇರಿಸಿಕೊಂಡದ್ದಕ್ಕೂ ಎಬಿಡಿ ಖುಷಿ ವ್ಯಕ್ತಪಡಿಸಿದರು. “ಇದೊಂದು ದಿಟ್ಟ ನಿರ್ಧಾರ. ಡೇಲ್ ಸಾಮರ್ಥ್ಯ ಏನೆಂಬುದು ಎಲ್ಲರಿಗೂ ಗೊತ್ತು…’ ಎಂದು ಎಬಿಡಿ ಹೇಳಿದರು.
ಕೊಹ್ಲಿಗೆ ದಂಡಶನಿವಾರ ರಾತ್ರಿಯ ಐಪಿಎಲ್ ಪಂದ್ಯದಲ್ಲಿ ಓವರ್ ಗತಿಯನ್ನು ಕಾಯ್ದುಕೊಳ್ಳಲು ವಿಫಲರಾದ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಅವರಿಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ. ಪ್ರಸಕ್ತ ಋತುವಿನಲ್ಲಿ ಆರ್‌ಸಿಬಿ ಇದೇ ಮೊದಲ ಬಾರಿಗೆ ನಿಧಾನ ಗತಿಯ ಓವರ್ ನಡೆಸಿದ್ದರಿಂದ ತಂಡದ ನಾಯಕನಿಗೆ ಈ ದಂಡ ವಿಧಿಸಲಾಗಿದೆ ಎಂದು ಐಪಿಎಲ್ ಪ್ರಕಟನೆ ತಿಳಿಸಿದೆ. ಆರ್‌ಸಿಬಿ ತನ್ನ 20 ಓವರ್ ಬೌಲಿಂಗ್ ಕೋಟಾ ಮುಗಿಸುವಾಗ ರಾತ್ರಿ 9.45 ದಾಟಿತ್ತು. ಇದಕ್ಕೂ ಮುನ್ನ ಇದೇ ಋತುವಿನಲ್ಲಿ ಮುಂಬೈ ನಾಯಕ ರೋಹಿತ್ ಶರ್ಮ ಮತ್ತು ರಾಜಸ್ಥಾನ್ ನಾಯಕ ಅಜಿಂಕ್ಯ ರಹಾನೆ ಅವರಿಗೂ ಇದೇ ಕಾರಣಕ್ಕಾಗಿ ಇಷ್ಟೇ ಮೊತ್ತದ ದಂಡ ವಿಧಿಸಲಾಗಿತ್ತು. ಮೈದಾನಕ್ಕೆ ನುಗ್ಗಿದ ಕೊಹ್ಲಿ ಫ್ಯಾನ್
ಆರ್‌ಸಿಬಿ ಚೇಸಿಂಗ್ ವೇಳೆ ಕ್ರಿಕೆಟ್ ಅಭಿಮಾನಿಯೊಬ್ಬ ಮೈದಾನಕ್ಕೆ ಹಾರಿ ವಿರಾಟ್ ಕೊಹ್ಲಿ ಅವರನ್ನು ತಬ್ಬಿಕೊಂಡ ಘಟನೆ ಮೊಹಾಲಿ ಪಂದ್ಯದ ವೇಳೆ ಸಂಭವಿಸಿದೆ. ಆಗ ಕೊಹ್ಲಿ ಬ್ಯಾಟಿಂಗ್ ನಡೆಸುತ್ತಿದ್ದರು. ಬಳಿಕ ಭದ್ರತಾ ಸಿಬಂದಿ ಆ ಅಭಿಮಾನಿ ವೀಕ್ಷಕನನ್ನು ತಮ್ಮ ವಶಕ್ಕೆ ತೆಗೆದುಕೊಂಡರು.