ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕೂಟ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದೆ. ಎಲ್ಲಾ ತಂಡಗಳು ತಮ್ಮ ತಯಾರಿಯಲ್ಲಿ ತೊಡಗಿದೆ. ಆದರೆ ಈ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ತಂಡವು ಇನ್ನೂ ತಮ್ಮ ನಾಯಕನನ್ನು ಘೋಷಿಸಿಲ್ಲ.
2021 ರ ಎರಡನೇ ಲೆಗ್‌ನಲ್ಲಿ ಫ್ರಾಂಚೈಸಿಯ ನಾಯಕತ್ವದಿಂದ ಕೆಳಗಿಳಿಯುವ ನಿರ್ಧಾರವನ್ನು ವಿರಾಟ್ ಕೊಹ್ಲಿ ಘೋಷಿಸಿದ್ದರು. 2008 ರಿಂದಲು ಆರ್ ಸಿಬಿ ತಂಡದಲ್ಲಿರುವ ವಿರಾಟ್ ಕೊಹ್ಲಿ 2013 ರಿಂದ ತಂಡವನ್ನು ಮುನ್ನಡೆಸಿದ್ದಾರೆ.
ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ವಿರಾಟ್ ಕೊಹ್ಲಿ ನಾಯಕತ್ವದ ರಾಜೀನಾಮೆಯನ್ನು ಇನ್ನೂ ಅಂಗೀಕರಿಸಿಲ್ಲ ಎಂದು ವರದಿಯಾಗಿದೆ. ಆದರೆ, ಕೊಹ್ಲಿ ಮತ್ತೆ ನಾಯಕನಾಗಿ ಮುಂದುವರಿಯುತ್ತಾರೆಯೇ ಎಂಬ ಬಗ್ಗೆ ಇನ್ನೂ ಖಚಿತತೆ ಸಿಕ್ಕಿಲ್ಲ. ಮಾರ್ಚ್ 12 ರಂದು ಇದಕ್ಕೆಲ್ಲಾ ಉತ್ತರಿಸುವುದಾಗಿ ಆರ್ ಸಿಬಿ ಹೇಳಿದೆ.
ಇದನ್ನೂ ಓದಿ:ವಿಜಯದ ನಗು ಚೆಲ್ಲಿದ ‘ಏಕ್ ಲವ್ ಯಾ’; ಖುಷಿ ಹಂಚಿಕೊಂಡ ಚಿತ್ರತಂಡ
ಏತನ್ಮಧ್ಯೆ, ನಾಯಕತ್ವದ ಜವಾಬ್ದಾರಿಯನ್ನು ಬಿಟ್ಟುಕೊಟ್ಟರೂ ತಂಡದಲ್ಲಿ ಮುಂದುವರಿಯುವ ಉದ್ದೇಶವನ್ನು ಕೊಹ್ಲಿ ಸ್ಪಷ್ಟಪಡಿಸಿದ್ದಾರೆ, “ನಾನು ಆರ್ ಸಿಬಿ ಹೊರತುಪಡಿಸಿ ಬೇರೆ ಯಾವುದೇ ತಂಡದಲ್ಲಿ ಇರುವುದನ್ನು ಯೋಚಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.