ಅಹಮದಾಬಾದ್: ಈ ಬಾರಿಯ ಕೂಟದಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಮುಂದಿನ ಒಂದು ಪಂದ್ಯದಲ್ಲಿ ನೀಲಿ ಅಂಗಿ ಧರಿಸಿ ಆಡಲಿದೆ. ಈ ಬಗ್ಗೆ ಸ್ವತಃ ನಾಯಕ ವಿರಾಟ್ ಕೊಹ್ಲಿ ಹೇಳಿಕೆ ನೀಡಿದ್ದಾರೆ.
ಕಳೆದೊಂದು ವರ್ಷದಿಂದ ಪಿಪಿಇ ಕಿಟ್ ಧರಿಸಿ ಕೆಲಸ ಮಾಡುತ್ತಿರುವ ಕೋವಿಡ್ ವಾರಿಯರ್ಸ್ ಗೆ ಗೌರವ ಸೂಚಿಸುವ ಕಾರಣಗಳಿಂದ ಆರ್ ಸಿಬಿ ನೀಲಿ ಜೆರ್ಸಿ ಧರಿಸಿ ಆಡಲಿದೆ. ಇದಲ್ಲದೆ ಕೋವಿಡ್ ವಿರುದ್ಧದ ಹೋರಾಟಕ್ಕೆ ಹಣಕಾಸಿನ ನೆರವನ್ನೂ ಫ್ರಾಂಚೈಸಿ ನೀಡಲಿದೆ.
ಇದನ್ನೂ ಓದಿ:ಡೆಲ್ಲಿ ವಿರುದ್ಧ ಸೇಡಿಗೆ ಕಾದಿದೆ ಪಂಜಾಬ್ ಕಿಂಗ್ಸ್
ಕಳೆದ ಕೆಲವು ವರ್ಷಗಳಿಂದ ಪರಿಸರ ಸಂರಕ್ಷಣೆಯ ಸಂದೇಶದೊಂದಿಗೆ ಆರ್ ಸಿಬಿ ಕೂಟದ ಎರಡು ಪಂದ್ಯಗಳನ್ನು ಹಸಿರು ಬಣ್ಣದ ಜೆರ್ಸಿ ಧರಿಸಿ ಆಡುತ್ತಿತ್ತು.
ಕೂಟದಲ್ಲಿ ಈಗಾಗಲೇ ಆಡಿರುವ ಏಳು ಪಂದ್ಯಗಳಲ್ಲಿ ಆರ್ ಸಿಬಿ ಐದು ಪಂದ್ಯಗಳನ್ನು ಜಯಿಸಿದೆ. ಚೆನ್ನೈ ಮತ್ತು ಪಂಜಾಬ್ ವಿರುದ್ಧ ವಿರಾಟ್ ಬಳಗ ಮುಗ್ಗರಿಸಿತ್ತು. ಹತ್ತು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಆರ್ ಸಿಬಿ ತನ್ನ ಮುಂದಿನ ಪಂದ್ಯವನ್ನು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಆಡಲಿದೆ.