Advertisement
ಸೋಲನುಭವಿಸಿತ್ತು. ಇದೀಗ ಶನಿವಾರದ ಪಂದ್ಯದಲ್ಲಿ ರಾಜಸ್ಥಾನವನ್ನು ಮಣಿಸುವ ಜಪದಲ್ಲಿದೆ ಆರ್‌ಸಿಬಿ. ಆದರೆ ರಾಜಸ್ಥಾನ ಕೂಡ ತನ್ನ ಮೊದಲ ಸೋಲಿನ ಸೇಡನ್ನು ಈ ಪಂದ್ಯದಲ್ಲಿ ತೀರಿಸಿಕೊಳ್ಳುವ ಯೋಜನೆಯಲ್ಲಿ ರುವುದರಿಂದ ಈ ಪಂದ್ಯ ಅತ್ಯಂತ ರೋಚಕವಾಗಿರಲಿದೆ ಎನ್ನಲಡ್ಡಿಯಿಲ್ಲ.
ಪಂಜಾಬ್ ವಿರುದ್ಧ ಎಬಿಡಿ ವಿಲಿಯರ್ ಅವರನ್ನು ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗಿಗೆ ಇಳಿಸಿದ ಕಾರಣದಿಂದಲೇ ಪಂದ್ಯ ಸೋಲಬೇಕಾಯಿತು ಎನ್ನುವುದು ಹಲವರ ಅಭಿಪ್ರಾಯವಾಗಿದೆ. ಅದರಂತೆ ಕೊಹ್ಲಿ ಈ ಪಂದ್ಯದಲ್ಲಿಯೂ ಪ್ರಯೋಗಕ್ಕೆ ಮುಂದಾದರೆ ತಂಡಕ್ಕೆ ಹಿನ್ನೆಡೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಮಾರಿಸ್ ಕಳೆದ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಮಿಂಚಿ ತನ್ನ ಆಲ್‌ರೌಂಡರ್ ಪ್ರದರ್ಶನ ತೋರುವಲ್ಲಿ ಯಶಸ್ಸು ಕಂಡಿದ್ದಾರೆ. ಆದ್ದರಿಂದ ಇವರ ಮೇಲೆ ತಂಡ ಹೆಚ್ಚು ನಿರೀಕ್ಷೆ ಇಟ್ಟಿದೆ. ಪಡಿಕ್ಕಲ್ ಮತ್ತು ಫಿಂಚ್ ಈ ಪಂದ್ಯದ ಮೂಲಕ ಮತ್ತೆ ಬ್ಯಾಟಿಂಗ್ ಫಾರ್ಮ್ ಗೆ ಮರಳಬೇಕಾದ ಅನಿವಾರ್ಯತೆ ಇದೆ. ನಾಯಕ ವಿರಾಟ್ ಮಾತ್ರ ಏಕಾಂಗಿಯಾಗಿ ಹೋರಾಡುತ್ತಿದ್ದು ಉಳಿದವರಿಂದ ನಿರೀಕ್ಷಿತ ಪ್ರದರ್ಶನ ಕಂಡುಬರುತಿಲ್ಲ. ಕಳೆದ ಪಂದ್ಯದ ಸೋಲನ್ನು ಸವಾಲಾಗಿ ಸ್ವೀಕರಿಸಿ ಮತ್ತೆ ಗೆಲುವಿನ ಹಳಿ ಏರಲಿ ಎನ್ನುವುದು ಆರ್‌ಸಿಬಿ ಅಭಿಮಾನಿಗಳ ಆಶಯವಾಗಿದೆ.
Related Articles
ರಾಜಸ್ಥಾನ ತಂಡ ಸ್ಟಾರ್ ಆಟಗಾರರಿಂದಲೇ ಕೂಡಿದ್ದರೂ ಯಾರೊಬ್ಬರು ನಿರೀಕ್ಷಿತ ಪ್ರದರ್ಶನ ತೋರುತ್ತಿಲ್ಲ ಆರಂಭದಲ್ಲಿ ಸತತ ಗೆಲುವಿನೊಂದಿಗೆ ಅಪಾಯಕಾರಿಯಾಗಿ ಗೊಚರಿಸಿದ ರಾಜಸ್ಥಾನ ನಂತರದಲ್ಲಿ ಇದೇ ಪ್ರದರ್ಶನ ತೋರುವಲ್ಲಿ ಎಡವುತ್ತಿದೆ. ನಾಯಕ ಸ್ಟೀವನ್ ಸ್ಮಿತ್, ಜಾಸ್ ಬಟ್ಲರ್, ಕೇರಳದ ಸ್ಟಂಪರ್ ಸಂಜು ಸ್ಯಾಮ್ಸನ್, ರಾಬಿನ್ ಉತ್ತಪ್ಪ ಪ್ರತೀ ಪಂದ್ಯದಲ್ಲಿಯೂ ಬ್ಯಾಟಿಂಗ್ ಬರ ಅನುಭವಿಸುತ್ತಿರುವುದು ತಂಡದ ಸೋಲಿಗೆ ಪ್ರಮುಖ ಕಾರಣ. ಮಧ್ಯಮ ಕ್ರಮಾಂಕದಲ್ಲಿ ರಿಯಾನ್ ಪರಾಗ್, ಆಲ್‌ರೌಂಡರ್ ರಾಹುಲ್ ತೆವಾತಿಯಾ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸುತ್ತಿರುವುದರಿಂದ ತಂಡ 150ರ ಗಡಿ ದಾಟುವಲ್ಲಿ ಯಶಸ್ವಿಯಾಗುತ್ತಿದೆ. ಬೌಲಿಂಗ್‌ನಲ್ಲಿ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಹೊರತು ಪಡಿಸಿ ಮತ್ತಯಾರು ಘಾತಕ ಸ್ಪೆಲ್ ನಡೆಸುತ್ತಿಲ್ಲ
Advertisement