Advertisement

ನಾಯಕ ಕೊಹ್ಲಿ ಬಿರುಸಿನ ಆಟ; ಪಂಜಾಬ್ ಗೆಲುವಿಗೆ 172 ರ ಸವಾಲು

09:10 PM Oct 15, 2020 | mahesh |

ದುಬೈ : ಟಾಸ್ ಗೆದ್ದು ಬ್ಯಾಟಿಂಗ್ ಬೀಸಿದ ಕೊಹ್ಲಿ ಪಡೆ ನಿಗದಿತ 20 ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 171 ರನ್ ಪೇರಿಸಿ 172 ರ ಸವಾಲನ್ನು ಪಂಜಾಬ್ ತಂಡಕ್ಕೆ ನೀಡಿದೆ.

Advertisement

ಆರ್ ಸಿಬಿ ಆರಂಭಿಕರಾಗಿ ಬಂದ ದೇವದತ್ ಪಡಿಕ್ಕಲ್ (18), ಆ್ಯರನ್ ಫಿಂಚ್ (20), ಉತ್ತಮ ಜೊತೆಯಾಟ ನೀಡಿದರು. ಬಳಿಕ ಬಂದ ನಾಯಕ ಕೊಹ್ಲಿ ಬಿರುಸಿನ ಬ್ಯಾಟಿಂಗ್ ನಿಂದ ತಂಡವು ಸವಾಲಿನ ಮೊತ್ತ ಪೇರಿಸುವಲ್ಲಿ ಪ್ರಮುಖರಾದರು.

ಆ್ಯರನ್ ಫಿಂಚ್  2 ಬೌಂಡರಿಯೊಂದಿಗೆ 1 ಸಿಕ್ಸರ್ ದಾಖಲಿಸಿ 20 ರನ್ ಗಳಿಸಿ ಅಶ್ವಿನ್ ಎಸೆತಕ್ಕೆ ಔಟ್ ಆದರು, ಬಳಿಕ ಶಿವಮ್ ದುಬೆ ಬಿರುಸಿನಿಂದ ಬ್ಯಾಟ್ ಬೀಸುತ್ತಲೇ 23 ರನ್ ಮಾಡಿ ಕ್ರಿಸ್ ಜೋರ್ಡಾನ್ ಎಸೆತಕ್ಕೆ ರಾಹುಲ್ ಕೈಗೆ ಕ್ಯಾಚ್ ಕೊಟ್ಟು ಪೆವಿಲಿಯನ್ ಕಡೆ ಸಾಗಿದರು.

ನಾಯಕ ವಿರಾಟ್ ಕೊಹ್ಲಿ 3 ಬೌಂಡರಿಯೊಂದಿಗೆ 48 ಗಳಿಸಿ ಶಮಿ ಎಸೆತದಲ್ಲಿ ರಾಹುಲ್ ಕೈಗೆ ಕ್ಯಾಚ್ ಕೊಟ್ಟು ಪೆವಿಲಿಯನ್ ಕಡೆ ಸಾಗಿದರು. ಕಳೆದ ಪಂದ್ಯದಲ್ಲಿ ಮಿಂಚಿದ್ದ  ಎಬಿ ಡಿವಿಲಿಯರ್ಸ್ ಕೇವಲ 2 ರನ್ ನೊಂದಿಗೆ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next