Advertisement

ಆರ್ ಸಿಬಿಗೆ 187 ರನ್ ಗುರಿ ನೀಡಿದ ಡೆಲ್ಲಿ

09:06 AM Apr 29, 2019 | Team Udayavani |

ಹೊಸದಿಲ್ಲಿ: ಇಲ್ಲಿನ ಫಿರೋಜ್ ಶಾ ಕೋಟ್ಲಾ ಅಂಗಳದಲ್ಲಿ ನಡೆದ ಸೂಪರ್ ಸಂಡೇ ಯ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಬೆಂಗಳೂರು ತಂಡಕ್ಕೆ  187 ರನ್ ಗುರಿ ನೀಡಿದೆ.

Advertisement

ಟಾಸ್ ಗೆದ್ದ ಡೆಲ್ಲಿ ನಾಯಕ ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಆಯ್ಕೆ ಮಾಡಿದರು. ಉತ್ತಮ ಆರಂಭ ಪಡೆದ ಡೆಲ್ಲಿ ಮೊದಲ ವಿಕೆಟ್ ಪ್ರಥ್ವಿ ಶಾ ರೂಪದಲ್ಲಿ ಕಳೆದುಕೊಂಡಿತು. ಶಾ 18 ರನ್ ಮಾಡಿ ವಿಕೆಟ್ ಒಪ್ಪಿಸಿದರು. ನಂತರ ಶಿಖರ್ ಧವನ್ ಮತ್ತು ಅಯ್ಯರ್ ಸೇರಿಕೊಂಡು ತಂಡವನ್ನು ನೂರರ ಗುರಿ ಮುಟ್ಟಿಸಿದರು. ಧವನ್ 50 ರನ್ ಗಳಿಸಿದರೆ, ಅಯ್ಯರ್ 52ರನ್ ಗಳಿಸಿ ಔಟಾದರು.

ರಿಷಬ್ ಪಂತ್ ( 7) ಕಾಲಿನ್ ಇಂಗ್ರಾಮ್ (11 ) ರನ್ ಗಳಿಸಿ ಔಟಾದರೆ, ಕೊನೆಯಲ್ಲಿ ರುದರ್ ಫೋರ್ಡ್ (28)  ಮತ್ತು ಅಕ್ಷರ್ ಪಟೇಲ್ (16) ತಂಡವನ್ನು ಸ್ಪರ್ಧಾತ್ಮಕ ಮೊತ್ತಕ್ಕೆ ತಲುಪಿಸಿದರು.

ಬೆಂಗಳೂರು ಪರ ಚಾಹಲ್ ಎರಡು ವಿಕೆಟ್ ಪಡೆದರೆ, ಉಮೇಶ್ ಯಾದವ್ , ಸುಂದರ್ , ಸೈನಿ ತಲಾ ಒಂದು ವಿಕೆಟ್ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next