Advertisement
ಕಳೆದ ವಾರದಿಂದಲೂ ಆರ್‌ಸಿಬಿ ಹೆಸರು ಬದಲಾವಣೆಯ ಸುದ್ದಿ ಆಗುತ್ತಲೇ ಇತ್ತು. ಫ್ರಾಂಚೈಸಿ ತನ್ನ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಪ್ರಕಟಿಸಿದ್ದ ವೀಡಿಯೋಗಳಲ್ಲಿ, ಕಾಂತಾರ ನಿರ್ಮಾಪಕ ರಿಷಭ್ ಶೆಟ್ಟಿ, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ನಟರಾಟ ಶಿವರಾಜ್ ಕುಮಾರ್, ಸುದೀಪ್ ಕಾಣಿಸಿಕೊಂಡು ಈ ಬಗ್ಗೆ ಸುಳಿವು ನೀಡಿದ್ದರು. ಅದರಂತೆ ಕನ್ನಡಿಗರ ಬಹು ದಿನಗಳ ಆಸೆ ನೆರವೇರಿದೆ. ಆರ್‌ಸಿಬಿ ತಂಡದ ಹೆಸರನ್ನು ಈಗ ರಾಯಲ್ ಚಾಲೆಂಜರ್ಸ್ “ಬ್ಯಾಂಗಳೂರ್’ಗೆ ಬದಲಾಗಿ, “ಬೆಂಗಳೂರು’ ಎಂದು ಅಧಿಕೃತವಾಗಿ ಬದಲಾಯಿಸಲಾಯಿತು.
ಡಬ್ಲ್ಯುಪಿಎಲ್ ಫೈನಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸ್ಮತಿ ಮಂಧನಾ ನಾಯಕತ್ವದ ಆರ್‌ಸಿಬಿ 8 ವಿಕೆಟ್‌ಗಳ ಗೆಲುವನ್ನಾಚರಿಸಿತ್ತು. ಈ ಮೂಲಕ ಚೊಚ್ಚಲ ಪ್ರಶಸ್ತಿ ಗೆದ್ದ ವನಿತಾ ತಂಡ, ಆರ್‌ಸಿಬಿ ಅಭಿಮಾನಿಗಳ 16 ವರ್ಷಗಳ “ಕಪ್’ ಕನಸನ್ನು ಸಾಕಾರಗೊಳಿಸಿತ್ತು. ಈ ಅಪೂರ್ವ ಸಾಧನೆಗೈದಿರುವ ಮಹಿಳಾ ತಂಡಕ್ಕೆ ಚಿನ್ನಸ್ವಾಮಿ ಮೈದಾನದಲ್ಲಿ ಪುರುಷರ ತಂಡ ಗಾರ್ಡ್ ಆಫ್ ಆನರ್ ನೀಡಿತು. ನೆರೆದ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಮಂಧನಾ ಪಡೆ ಗೌರವ ಸ್ವೀಕರಿಸಿದ ಈ ಕ್ಷಣ ಅತ್ಯಂತ ರೋಮಾಂಚನಕಾರಿಯಾಗಿತ್ತು. ನೂತನ ಜೆರ್ಸಿ ಅನಾವರಣ
ಸಮಾರಂಭದಲ್ಲಿ ಆರ್‌ಸಿಬಿಯ ನೂತನ ಜೆರ್ಸಿಯನ್ನು ಅನಾವರಣ ಗೊಳಿಸಲಾಯಿತು. ನಾಯಕ ಫಾಫ್ ಡು ಪ್ಲೆಸಿಸ್ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ಜೆರ್ಸಿ ಬಿಡುಗಡೆಗೊಳಿಸಿದರು. ಹಳೆ ಜೆರ್ಸಿಗಿಂತ ಕೊಂಚ ಭಿನ್ನ ವಿನ್ಯಾಸವನ್ನು ಹೊಂದಿರುವ ಕಡು ನೀಲಿ, ಕೆಂಪು ಬಣ್ಣದ ಹೊಸ ಜೆರ್ಸಿ ಅನಾವರಣಗೊಂಡಿದೆ. ಇದರಲ್ಲಿ ಬಂಗಾರ ವರ್ಣವೂ ಇದೆ.
Related Articles
– ಕನ್ನಡದಲ್ಲಿ ಹೇಳಿದ ವಿರಾಟ್ ಕೊಹ್ಲಿ
Advertisement