ನವದೆಹಲಿ: 2023 ರ ಐಪಿಎಲ್ ಗೆ ತಂಡಗಳು ಆಟಗಾರರನ್ನು ಉಳಿಸಿಕೊಳ್ಳಲು ಹಾಗೂ ತಂಡದಿಂದ ಕೈ ಬಿಡಲು ಇಂದು (ನ.15) ಕೊನೆಯ ದಿನ. ಈಗಾಗಲೇ ಎಲ್ಲಾ ತಂಡಗಳು ತಮ್ಮ ತಂಡದಿಂದ ಯಾರನ್ನು ಬಿಡುವುದು ಯಾರನ್ನು ಉಳಿಸಿಕೊಳ್ಳುವುದೆಂದು ಘೋಷಿಸಿದೆ.
ಆರ್ ಸಿಬಿ ತಂಡ ಕೂಡ ರಿಲೀಸ್ – ರಿಟೈನ್ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿ,2023 ಕ್ಕೆ ಹೊಸ ಆಟಗಾರರನ್ನು ಖರೀದಿಸುವತ್ತ ಗಮನ ಹರಿಸಿದೆ.
ಆಸೀಸ್ ವೇಗಿ ಜೇಸನ್ ಬೆಹ್ರೆಂಡೋರ್ಫ್ ಟ್ರೇಡಿಂಗ್ ಮೂಲಕ ಮುಂಬೈ ಇಂಡಿಯನ್ಸ್ ಪಾಲಾಗಿದ್ದಾರೆ. ಅನೀಶ್ವರ್ ಗೌತಮ್, ಕರ್ಣ್ ಶರ್ಮಾ, ಚಾಮ ಮಿಲಿಂದ್ ಲುವ್ನಿತ್ ಸಿಸೋಡಿಯಾ, ಶೆರ್ಫೇನ್ ರುದರ್ಫೋರ್ಡ್ ರನ್ನು ಆರ್‌ಸಿಬಿ ಕೈಬಿಟ್ಟಿದೆ.
ಇನ್ನು ಆರ್ ಸಿಬಿ 2023 ರ ಐಪಿಎಲ್ ಗೆ ರಿಟೈನ್ ಮಾಡಿಕೊಂಡ ಆಟಗಾರರ ಪಟ್ಟಿಯನ್ನು ಗಮನಿಸಿದರೆ: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಸುಯಶ್ ಪ್ರಭುದೇಸಾಯಿ, ರಜತ್ ಪಾಟಿದಾರ್, ದಿನೇಶ್ ಕಾರ್ತಿಕ್, ಅನುಜ್ ರಾವತ್, ಫಿನ್ ಅಲೆನ್, ಗ್ಲೆನ್ ಮ್ಯಾಕ್ಸ್‌ವೆಲ್, ವನಿಂದು ಹಸರಂಗ, ಶಹಬಾಜ್ ಅಹ್ಮದ್, ಹರ್ಷಲ್ ಪಟೇಲ್, ಡೇವಿಡ್ ವಿಲ್ಲಿ, ಕರ್ಣ್ ಶರ್ಮಾ, ಮಹಿಪಾಲ್ ಲೊಮ್ರೋರ್, ಮೊಹಮ್ಮದ್ ಸಿರಾಜ್ ಹ್ಯಾಝಲ್‌ವುಡ್, ಸಿದ್ದಾರ್ಥ್ ಕೌಲ್, ಆಕಾಶ್ ದೀಪ್
ಆರ್ ಸಿಬಿ ಕಿಸೆಯಲ್ಲೀಗ 8.75 ಕೋ.ರೂ ಉಳಿದಿದೆ. ಇದರಲ್ಲಿ ಇಬ್ಬರು ವಿದೇಶಿ ಆಟಗಾರರ ಜಾಗ ಖಾಲಿಯಿದೆ. ಅಂದರೆ ಇಬ್ಬರು ವಿದೇಶಿ ಆಟಗಾರರನ್ನು ಆರ್ ಸಿಬಿ ಖರೀದಿಸಬಹುದು.