Advertisement

ಚೆನ್ನೈ ಸವಾಲಿಗೆ ಆರ್‌ಸಿಬಿ ರೆಡಿ

06:00 AM Apr 25, 2018 | Team Udayavani |

ಬೆಂಗಳೂರು: ರಾಯಲ್‌ ಚಾಲೆಂಜರ್ ಬೆಂಗಳೂರು ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌  2 ವರ್ಷಗಳ ಬಳಿಕ ತಮ್ಮ  ತೀವ್ರ ಪೈಪೋಟಿಯ ಹೋರಾಟವನ್ನು ಮತ್ತೆ ಆರಂಭಿ ಸಲು ವೇದಿಕೆ ಸಿದ್ಧವಾಗಿದೆ. ಬುಧವಾರ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆ ಯುವ ಐಪಿಎಲ್‌ ಪಂದ್ಯದಲ್ಲಿ ಬೆಂಗಳೂರು ತಂಡವು ಚೆನ್ನೈ ಸವಾಲನ್ನು ಎದುರಿಸಲು ಸಿದ್ಧವಾಗಿದೆ. 

Advertisement

ಸಮಬಲದ ಸಾಧನೆ 
ಕಳೆದ 2 ಋತುಗಳಲ್ಲಿ ಚೆನ್ನೈ ಆಟದ ಕಾರಣ ಅಭಿಮಾನಿಗಳು ಈ 2 ತಂಡಗಳ ಪೈಪೋಟಿಯ ಆಟವನ್ನು ವೀಕ್ಷಿಸುವ ಅವಕಾಶ ದಿಂದ ವಂಚಿತವಾಗಿದ್ದರು. ಉಭಯ ತಂಡಗಳ ಪರಸ್ಪರ ಮುಖಾಮುಖೀಯಲ್ಲಿ ಧೋನಿ ನೇತೃತ್ವದ ಚೆನ್ನೈ ತಂಡ 13 ಗೆಲುವು 7 ಸೋಲಿನ ದಾಖಲೆ ಹೊಂದಿದ್ದರೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎರಡೂ ತಂಡಗಳು ಸಮಬಲದ ಹೋರಾಟ ನೀಡಿವೆ. ಇಲ್ಲಿ ಒಟ್ಟಾರೆ ಏಳು ಪಂದ್ಯಗಳು ನಡೆದಿದ್ದು ಉಭಯ ತಂಡಗಳು ತಲಾ 3ರಲ್ಲಿ ಜಯ ಗಳಿಸಿದ್ದರೆ ಒಂದು ಪಂದ್ಯದಲ್ಲಿ ಫ‌ಲಿತಾಂಶ ಬಂದಿಲ್ಲ.

ಚೆನ್ನೈ ದ್ವಿತೀಯ ಸ್ಥಾನ
ನಿಷೇಧದ ಬಳಿಕ ಐಪಿಎಲ್‌ಗೆ ಮರಳಿದ ಚೆನ್ನೈ ಪ್ರಚಂಡ ಫಾರ್ಮ್ನಲ್ಲಿದೆ. ಆಡಿದ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಜಯ ಸಾಧಿಸಿರುವ ಚೆನ್ನೈ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿದೆ. ವಿರಾಟ್‌ ಕೊಹ್ಲಿ ನೇತೃತ್ವದ ಬೆಂಗಳೂರು ತಂಡ ಆಡಿದ ಐದು ಪಂದ್ಯಗಳಲ್ಲಿ ಕೇವಲ ಎರಡರಲ್ಲಿ ಜಯ ಸಾಧಿಸಿದೆ. ಕಳೆದ ವಾರ ಡೆಲ್ಲಿ ವಿರುದ್ಧ ಜಯ ಸಾಧಿಸಿದ ಬೆಂಗಳೂರು ಗೆಲುವಿನ ಟ್ರ್ಯಾಕ್‌ ಅನ್ನು ಉಳಿಸಿಕೊಳ್ಳಲು ಬಯಸಿದೆ. 

ಎಬಿಡಿ ಪ್ರಚಂಡ ಫಾರ್ಮ್
ಎಬಿ ಡಿ’ವಿಲಿಯರ್ ಅವರ ಪ್ರಚಂಡ ಫಾರ್ಮ್ ಆತಿಥೇಯ ತಂಡಕ್ಕೆ ಒಳ್ಳೆಯ ಸುದ್ದಿಯಾಗಿದೆ. ಡೆಲ್ಲಿ ವಿರುದ್ಧ ಅವರು  39 ಎಸೆತಗಳಿಂದ 90 ರನ್‌ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ಸಿಡಿಲಬ್ಬರದ ಬ್ಯಾಟಿಂಗ್‌ ವೈಭವ ಮೆರೆದ ಅವರು ಏಕಾಂಗಿಯಾಗಿ ಹೋರಾಡಿ 175 ರನ್ನುಗಳ ಗೆಲುವಿನ ಗುರಿಯನ್ನು ಇನ್ನೂ ಎರಡು ಓವರ್‌ ಇರು ವಾಗಲೇ ತಲುಪಿ ಆರ್‌ಸಿಬಿ ಅಭಿಯಾನವನ್ನು ಮರಳಿ ಗೆಲು ವಿಗೆ ಟ್ರ್ಯಾಕ್‌ಗೆ ತಂದಿದ್ದರು.

ವಾಟ್ಸನ್‌ ಗ್ರೇಟ್‌ ಚೆನ್ನೈ ಪರ ವಾಟ್ಸನ್‌ ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಶ್ರೇಷ್ಠ ನಿರ್ವಹಣೆ ನೀಡುತ್ತಿದ್ದಾರೆ. ರಾಜಸ್ಥಾನ ವಿರುದ್ಧ 57 ಎಸೆತಗಳಿಂದ 106 ರನ್‌ ಸಿಡಿಸಿದ್ದ ವಾಟ್ಸನ್‌ ಬೌಲಿಂಗ್‌ನಲ್ಲಿಯೂ ಮಿಂಚುತ್ತಿದ್ದಾರೆ. ಉತ್ತಮ ಫಾರ್ಮ್ನಲ್ಲಿರುವ ಅಂಬಾಟಿ ರಾಯುಡು (201) ತಂಡದ ಪರ ಗರಿಷ್ಠ ರನ್‌ ಗಳಿಸಿದ ಆಟಗಾರ ಆಗಿದ್ದಾರೆ. ಚೆನ್ನೈಯ ಬ್ಯಾಟಿಂಗಿನ ಪ್ರಮುಖ ಸದಸ್ಯ ಸುರೇಶ್‌ ರೈನಾ ಕೂಡ ಉತ್ತಮವಾಗಿ ಆಡುತ್ತಿದ್ದಾರೆ. ನಾಯಕ ಧೋನಿ, ಡ್ವೇನ್‌ ಬ್ರಾವೊ ಮಿಂಚುತ್ತಿದ್ದಾರೆ. ಹಾಗಾಗಿ ಈ ಪಂದ್ಯ ತೀವ್ರ ಪೈಪೋಟಿಯಿಂದ ಸಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next