Advertisement

Lucknow; ಟೋಲ್‌ ಕೇಳಿದ್ದಕ್ಕೆ ಬೂತ್‌ ಮೇಲೆ  “ಬುಲ್ಡೋಜರ್‌’

09:57 PM Jun 11, 2024 | Team Udayavani |

ಲಕ್ನೋ: ಟೋಲ್‌ ಶುಲ್ಕ ಪಾವತಿಸುವಂತೆ ಕೇಳಿದ್ದಕ್ಕೆ ಅಮಲಿನಲ್ಲಿದ್ದ ಬುಲ್ಡೋಜರ್‌ ಚಾಲಕನೊಬ್ಬ ಟೋಲ್‌ ಬೂತ್‌ಗಳನ್ನೇ ಧ್ವಂಸಗೊಳಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಈ ವಿಡಿಯೋ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ.

Advertisement

ಹಾಪುರ್‌ ಜಿಲ್ಲೆಯ ಪಿಲ್ಖುವಾದಲ್ಲಿರುವ ಛಜರ್ಸಿ ಟೋಲ್‌ ಪ್ಲಾಜಾಗೆ ಮಂಗಳವಾರ ಬೆಳಗ್ಗೆ 8.30ರ ವೇಳೆಗೆ ಬುಲ್ಡೋಜರ್‌ ಒಂದು ಆಗಮಿಸಿದೆ. ಈ ವೇಳೆ ಟೋಲ್‌ ಕಟ್ಟುವಂತೆ ಸಿಬ್ಬಂದಿ ಕೇಳಿದ್ದಾರೆ. ಆದರೆ, ಬುಲ್ಡೋಜರ್‌ ಚಾಲಕ ಟೋಲ್‌  ಪಾವತಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಸಿಬ್ಬಂದಿ ಮತ್ತು ಚಾಲಕನ ನಡುವೆ ವಾಗ್ವಾದ ನಡೆದಿದೆ. ಸಂಘರ್ಷ ತಾರಕಕ್ಕೇರಿದಾಗ ಆತ ಬುಲ್ಡೋಜರ್‌ ಮೂಲಕ ಟೋಲ್‌ನ 2 ಬೂತ್‌ಗಳನ್ನೇ ಧ್ವಂಸಗೊಳಿಸಿ ಪರಾರಿಯಾಗಿದ್ದಾನೆ. ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next