Advertisement

ಆರ್‌ಸಿಬಿ-ಹೊಂಬಾಳೆ ಫಿಲಂಸ್‌ ಜತೆಯಾಟ

10:40 PM Apr 10, 2022 | Team Udayavani |

ಬೆಂಗಳೂರು: “ಕೆಜಿಎಫ್’ ಮತ್ತು “ಸಲಾರ್‌’ ಮೊದಲಾದ ಬಿಗ್‌ ಬಜೆಟ್‌ ಸಿನೆಮಾಗಳ ನಿರ್ಮಾಣ ಸಂಸ್ಥೆ “ಹೊಂಬಾಳೆ ಫಿಲಂಸ್‌’ ಈ ಬಾರಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್ ) ಫ್ರಾಂಚೈಸಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಜತೆ ವಿಶೇಷ ಸಹಭಾಗಿತ್ವದಲ್ಲಿ ಕ್ರೀಡೆ ಮತ್ತು ಚಲನಚಿತ್ರ ಮನೋರಂಜನೆಯ ಪರಿಪೂರ್ಣ ಸಮ್ಮಿಳನಕ್ಕೆ ಸಹಿ ಮಾಡಿದೆ.

Advertisement

ಈ ಸಹಭಾಗಿತ್ವವು ನೋಡುಗರಿಗೆ ಭರಪೂರ ಮನೋರಂಜನೆಯನ್ನು ನೀಡುವಂತಹ ಗ್ಲಾಮರ್‌, ಸಿನೆಮಾ, ಕ್ರೀಡೆಗಳ ಸಂಗಮವಾಗಲಿದೆ ಎಂದು ಆರ್‌ಸಿಬಿ ಮತ್ತು ಹೊಂಬಾಳೆ ಫಿಲಂಸ್‌ ತಿಳಿಸಿವೆ.

ಈ ಸಹಭಾಗಿತ್ವದ ಬಗ್ಗೆ ಮಾತನಾಡಿರುವ ನಿರ್ಮಾಪಕ ವಿಜಯ್‌ ಕಿರಗಂದೂರು, ಕನ್ನಡಿಗನಾಗಿ ಕ್ರಿಕೆಟ್‌ ನನ್ನನ್ನು ಯಾವಾಗಲೂ ಆಕರ್ಷಿಸುತ್ತಿದೆ. ನಮ್ಮ ಅಭಿಮಾನಿಗಳಿಗೆ ಭರಪೂರ ಮನೋರಂಜನೆ ಮತ್ತು ಥ್ರಿಲ್‌ ಅನ್ನು ಖಚಿತಪಡಿಸಿಕೊಳ್ಳಲು ತೊಡಗಿಸಿಕೊಂಡಿರುವ ಹೊಂಬಾಳೆ ಫಿಲಂಸ್‌ ಮತ್ತು ಆರ್‌ಸಿಬಿ ಎರಡಕ್ಕೂ ನಮ್ಮ ಬೆಂಗಳೂರೇ ತವರಾಗಿರುವುದರಿಂದ ಈ ಪಾಲುದಾರಿಕೆ ಸಹಜವಾಗಿದೆ.

2022 ನಮ್ಮೆಲ್ಲರಿಗೂ ರಾಯಲ್‌ ಆಗಿರಲಿದೆ. ಕ್ರೀಡೆ ಮತ್ತು ಮನೋರಂಜನೆ ವಿಚಾರದಲ್ಲಿ ಕ್ಷಣಮಾತ್ರದಲ್ಲಿ ಬದಲಾಗುವ ಅಭಿಮಾನಿಗಳ ನಡವಳಿಕೆ ಮತ್ತು ಆದ್ಯತೆಗಳನ್ನು ಅರಿತು ಅವರ ನಾಡಿಮಿಡಿತಕ್ಕೆ ಬಲ ನೀಡುವ ಜತೆ ಹೊಸ ಮನೋರಂಜನ ಮಾರ್ಗಗಳಿಗಾಗಿ ಹೆಚ್ಚುತ್ತಿರುವ ಬೇಡಿಕೆಗಳನ್ನು ಈಡೇರಿಸುವ ಮೂಲಕ ಈ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಹಾಗೂ ಪ್ರಸರಣ ಉದ್ಯಮಕ್ಕೆ ಕೊಡುಗೆ ನೀಡುವ ಗುರಿ ಹೊಂದಿದ್ದೇವೆ. ಇದಕ್ಕಾಗಿ ಕೈ ಜೋಡಿಸಲು, ಆರಂಭಿಸಲು ಮತ್ತು ರಾಯಲ್‌ ಆಗಿ ಸೆಲಬ್ರೇಟ್‌ ಮಾಡಲು ಎದುರು ನೋಡುತ್ತಿದ್ದೇವೆ. ಕ್ರೀಡೆ ಮತ್ತು ಚಲನಚಿತ್ರ ಮನೋರಂಜನ ವಲಯದಲ್ಲಿ ನಮ್ಮ ಅಭಿಮಾನಿಗಳಿಗೆ ಮ್ಯಾಜಿಕ್‌ ಕ್ಷಣಗಳನ್ನು ಸೃಷ್ಟಿಸಲು ನಾವು ಒಟ್ಟಾಗಿ ಪ್ರಯತ್ನಿಸುತ್ತೇವೆ’ ಎಂದಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next