Advertisement

ಮತ್ತೆ ಚೆನ್ನೈಗೆ ಡುಪ್ಲೆಸಿಸ್- ಆರ್ ಸಿಬಿಗೆ ರವೀಂದ್ರ ಜಡೇಜಾ?: ಏನಿದು ಟ್ರೇಡಿಂಗ್ ಆಫರ್?

03:30 PM Oct 29, 2022 | Team Udayavani |

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023ರ ತಯಾರಿ ಪ್ರಕ್ರಿಯೆಗಳು ಆರಂಭವಾಗಿದೆ. ಹತ್ತು ಫ್ರಾಂಚೈಸಿಗಳು ತಾವು ತಂಡದಿಂದ ಕೈಬಿಡಲು ಇಚ್ಚಿಸುವ ಆಟಗಾರರ ಪಟ್ಟಿಯನ್ನು ಸಿದ್ದ ಮಾಡುತ್ತಿವೆ. ಅಲ್ಲದೆ ಈ ನಡುವೆ ಆಟಗಾರರ ಟ್ರೇಡಿಂಗ್ ಗೆ ಸಂಬಂಧಿಸಿದಂತೆ ಫ್ರಾಂಚೈಸಿಗಳ ನಡುವೆ ಚರ್ಚೆಯೂ ಆರಂಭವಾಗಿದೆ.

Advertisement

ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಟ್ರೇಡಿಂಗ್ ಒಪ್ಪಂದಕ್ಕಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸಂಪರ್ಕಿಸಿದೆ ಎಂಬ ಸುದ್ದಿ ಬಂದಿದೆ. ಆರ್ ಸಿಬಿಯು ಯಾವ ಆಟಗಾರನನ್ನು ತಂಡದಿಂದ ಬಿಡಲು ಮತ್ತು ತಂಡಕ್ಕೆ ಕರೆತರಲು ಯೋಚಿಸಿದೆ ಎಂಬ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ. ಆದರೆ ರವೀಂದ್ರ ಜಡೇಜಾ ಅವರು ಆರ್ ಸಿಬಿಗೆ ಬರಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.

ಇದನ್ನೂ ಓದಿ:ಅಂದು ಲಕ್ಕಿಡಿಪ್‌ ನಲ್ಲಿ ಸಾವಿರ ಕೋಟಿ ಜಾಕ್ ಪಾಟ್ ಗೆದ್ದಾತನ ಜೀವನ ಇಂದು…

ಕಳೆದ ಸೀಸನ್ ನಲ್ಲಿ ಆರಂಭದಲ್ಲಿ ಜಡೇಜಾ ಅವರನ್ನು ಸಿಎಸ್ ಕೆ ತಂಡದ ನಾಯಕರಾಗಿ ನೇಮಕ ಮಾಡಲಾಗಿತ್ತು. ಆದರೆ ತಂಡ ಸತತ ಸೋಲು ಕಂಡ ಕಾರಣ ಧೋನಿ ಅವರು ಮತ್ತೆ ನಾಯಕತ್ವದ ಜವಾಬ್ದಾರಿ ಹೊತ್ತುಕೊಂಡಿದ್ದರು. ಇದರಿಂದ ಜಡೇಜಾ ಬೇಸರಗೊಂಡಿದ್ದಾರೆ ಎನ್ನಲಾಗಿದೆ. ಕಳೆದ ಕೆಲವು ತಿಂಗಳಿನಿಂದ ಸಿಎಸ್ ಕೆ ಫ್ರಾಂಚೈಸಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸದರೂ ಜಡೇಜಾ ಸಂಪರ್ಕಕ್ಕೆ ಸಿಗಲಿಲ್ಲ ಎನ್ನಲಾಗಿದೆ.

Advertisement

ಪ್ರಸ್ತುತ ಆರ್ ಸಿಬಿನಾಯಕ ಫಾಫ್ ಡು ಪ್ಲೆಸಿಸ್ ಅವರು ಸಿಎಸ್ ಕೆ ಗೆ ಮರಳುವ ಸಾಧ್ಯತೆಯ ಬಗ್ಗೆ ನೆಟಿಜನ್‌ಗಳು ಆಲೋಚಿಸಿದ್ದಾರೆ. ಆರ್ ಸಿಬಿ ತಂಡವು ಫಾಫ್ ಅವರನ್ನು ಸಿಎಸ್ ಕೆಗೆ ನೀಡಿ ರವೀಂದ್ರ ಜಡೇಜಾರನ್ನು ತಂಡಕ್ಕೆ ಸೇರಿಸಿಕೊಳ್ಳಬಹುದು ಎಂದು ಹಲವರು ಅನುಮಾನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next