ಮೊಹಾಲಿ: ಕೊನೆಗೂ ಆರ್‌ಸಿಬಿ 12ನೇ ಐಪಿಎಲ್‌ನಲ್ಲಿ ಗೆಲುವಿನ ಖಾತೆ ತೆರೆದಿದೆ. ಸತತ 6 ಸೋಲುಗಳ ಬಳಿಕ ಶನಿವಾರ ಇಲ್ಲಿ ನಡೆದ ತನ್ನ ಮೊದಲ ಸುತ್ತಿನ ಕೊನೆಯ ಪಂದ್ಯದಲ್ಲಿ ಕೊಹ್ಲಿ ಪಡೆ 8 ವಿಕೆಟ್‌ಗಳಿಂದ ಪಂಜಾಬ್‌ಗ ಸೋಲುಣಿಸಿತು.
ಮೊದಲು ಬ್ಯಾಟಿಂಗ್ ನಡೆಸಿದ ಆತಿಥೇಯ ಪಂಜಾಬ್ 4 ವಿಕೆಟಿಗೆ 173 ರನ್ ಗಳಿಸಿದರೆ, ಆರ್‌ಸಿಬಿ 2 ವಿಕೆಟಿಗೆ 174 ರನ್ ಮಾಡಿ ಗೆದ್ದು ಬಂದಿತು.
ನಾಯಕ ವಿರಾಟ್ ಕೊಹ್ಲಿ ಮತ್ತು ಎಬಿಡಿ ನಡುವಿನ ಅಮೋಘ ಜತೆಯಾಟ ಆರ್‌ಸಿಬಿ ಜಯದಲ್ಲಿ ಮಹತ್ವದ ಪಾತ್ರ ವಹಿಸಿತು. ಕೊಹ್ಲಿ 67 ರನ್, ಎಬಿಡಿ ಅಜೇಯ 59 ರನ್ ಹೊಡೆದರು. ಪಂಜಾಬ್ ಸರದಿಯಲ್ಲಿ ಗೇಲ್ ಅಜೇಯ 99 ರನ್ ಮಾಡಿ ಮಿಂಚಿದರು. ಕೊನೆಯ ಎಸೆತದ ತನಕ ಕ್ರೀಸ್ ಆಕ್ರಮಿಸಿಕೊಂಡು ಆರ್‌ಸಿಬಿ ಬೌಲಿಂಗಿಗೆ ದಿಟ್ಟ ರೀತಿಯಲ್ಲಿ ಜವಾಬು ನೀಡುತ್ತ ಹೋದರು. ಮೊಹಮ್ಮದ್ ಸಿರಾಜ್ ಎಸೆದ ಅಂತಿಮ ಓವರಿನ ಅಂತಿಮ ಎಸೆತದಲ್ಲಿ ಸಿಕ್ಸರ್ ಬಾರಿಸಿದರೆ ಗೇಲ್ ಸೆಂಚುರಿ ಪೂರೈಸಬಹುದಿತ್ತು. ಆದರೆ ಇದರಲ್ಲಿ ಬೌಂಡರಿ ಬಂತು. ಜಮೈಕಾ ದೈತ್ಯನಿಗೆ ಒಂದು ರನ್ನಿನಿಂದ ಸೆಂಚುರಿ ತಪ್ಪಿತು. ಗೇಲ್ ಐಪಿಎಲ್ ಇತಿಹಾಸದಲ್ಲಿ 2 ಸಲ 99 ರನ್ ಮಾಡಿ ಔಟಾಗದೆ ಉಳಿದ 2ನೇ ಆಟಗಾರ. ಸುರೇಶ್ ರೈನಾ ಮೊದಲಿಗ.
64 ಎಸೆತ ಎದುರಿಸಿದ ಕ್ರಿಸ್ ಗೇಲ್ 10 ಬೌಂಡರಿ, 5 ಭರ್ಜರಿ ಸಿಕ್ಸರ್ ನೆರವಿನಿಂದ ತಮ್ಮ ಇನ್ನಿಂಗ್ಸ್ ಕಟ್ಟಿದರು. ಅವರ ಈ ಓಟದಲ್ಲಿ ಆರ್‌ಸಿಬಿ ಫೀಲ್ಡರ್‌ಗಳ ನೆರವಿನ ಪಾಲೂ ಇತ್ತು. 83 ರನ್ ಮಾಡಿದ್ದಾಗ ಸ್ವತಃ ವಿರಾಟ್ ಕೊಹ್ಲಿಯೇ ಕ್ಯಾಚ್ ಒಂದನ್ನು ಕೈಚೆಲ್ಲಿದ್ದರು. ಕ್ರಿಸ್ ಗೇಲ್-ಕೆ.ಎಲ್. ರಾಹುಲ್ ಓವರಿಗೆ ಹತ್ತರ ಸರಾಸರಿಯಲ್ಲಿ ರನ್ ಪೇರಿಸುತ್ತ ಭರ್ಜರಿ ಆರಂಭ ನೀಡಿದರು. ಇವರಿಂದ 6.2 ಓವರ್‌ಗಳಲ್ಲಿ 66 ರನ್ ಒಟ್ಟುಗೂಡಿತು. ರಾಹುಲ್ (18) ಔಟಾದ ಬಳಿಕ ಬಂದ ಕರ್ನಾಟಕದ ಮತ್ತೂಬ್ಬ ಆಟಗಾರ ಮಾಯಾಂಕ್ ಅಗರ್ವಾಲ್ 9 ಎಸೆತಳಿಂದ 15 ರನ್ ಹೊಡೆದರು.
ಕಿಂಗ್ಸ್ ಇಲೆವೆನ್ ಪಂಜಾಬ್
ಕೆ.ಎಲ್. ರಾಹುಲ್ ಸ್ಟಂಪ್ಡ್ ಪಾರ್ಥಿವ್ ಬಿ ಚಾಹಲ್ 18
ಕ್ರಿಸ್ ಗೇಲ್ ಔಟಾಗದೆ 99
ಮಾಯಾಂಕ್ ಅಗರ್ವಾಲ್ ಬಿ ಚಾಹಲ್ 15
ಸಫìರಾಜ್ ಖಾನ್ ಸಿ ಪಾರ್ಥಿವ್ ಬಿ ಸಿರಾಜ್ 15
ಸ್ಯಾಮ್ ಕರನ್ ಎಲ್‌ಬಿಡಬ್ಲ್ಯು ಮೊಯಿನ್ 1
ಮನ್‌ದೀಪ್ ಸಿಂಗ್ ಔಟಾಗದೆ 18
ಇತರ 7
ಒಟ್ಟು (4 ವಿಕೆಟಿಗೆ) 173
ವಿಕೆಟ್ ಪತನ: 1-66, 2-86, 3-110, 4-113.
ಬೌಲಿಂಗ್:
ಉಮೇಶ್ ಯಾದವ್ 4-0-42-0
ನವದೀಪ್ ಸೈನಿ 4-0-23-0
ಮೊಹಮ್ಮದ್ ಸಿರಾಜ್ 4-0-54-1
ಯಜುವೇಂದ್ರ ಚಾಹಲ್ 4-0-33-2
ಮೊಯಿನ್ ಅಲಿ 4-0-19-1
ರಾಯಲ್ ಚಾಲೆಂಜರ್ ಬೆಂಗಳೂರು
ಪಾರ್ಥಿವ್ ಪಟೇಲ್ ಸಿ ಅಗರ್ವಾಲ್ ಬಿ ಅಶ್ವಿನ್ 19
ವಿರಾಟ್ ಕೊಹ್ಲಿ ಸಿ ಎಂ. ಅಶ್ವಿನ್ ಬಿ ಶಮಿ 67
ಎಬಿ ಡಿ ವಿಲಿಯರ್ ಔಟಾಗದೆ 59
ಸ್ಟೋಯಿನಿಸ್ ಔಟಾಗದೆ 28
ಇತರ 1
ಒಟ್ಟು ( 19.2 ಓವರ್‌ಗಳಲ್ಲಿ 2 ವಿಕೆಟ್‌ಗೆ) 174
ವಿಕೆಟ್ ಪತನ: 1-43, 2-128
ಬೌಲಿಂಗ್:
ಸ್ಯಾಮ್ ಕರನ್ 3-0-31-0
ಮೊಹಮ್ಮದ್ ಶಮಿ 4-0-43-1
ಆರ್. ಅಶ್ವಿನ್ 4-0-30-1
ಮುರುಗನ್ ಅಶ್ವಿನ್ 4-0-24-0
ಆ್ಯಂಡ್ರೂ ಟೈ 4-0-40-0
ಸಫìರಾಜ್ ಖಾನ್ 0.2-0-6-0