Advertisement

ಬ್ಯಾಕ್‌ಅಪ್‌ ಆಟಗಾರರಿಗೆ ಮಣೆ ಹಾಕಿದ ಆರ್‌ಸಿಬಿ

01:25 PM Dec 25, 2022 | Team Udayavani |

ಬೆಂಗಳೂರು: ಹದಿನೈದು ಐಪಿಎಲ್‌ ಪಂದ್ಯಾವಳಿ ಮುಗಿದರೂ ಇನ್ನೂ ಚಾಂಪಿಯನ್‌ ಪಟ್ಟ ಅಲಂಕ ರಿಸದ ನತದೃಷ್ಟ ತಂಡ ಆರ್‌ಸಿಬಿ. ಸಹಜವಾಗಿಯೇ ಈ ಬಾರಿಯ ಮಿನಿ ಹರಾಜಿನಲ್ಲಿ ಅದು ಯಾವ ಆಟ ಗಾರರಿಗೆ ಬಲೆ ಬೀಸೀತು, ತಂಡ ಎಷ್ಟು ಬಲಿಷ್ಠಗೊಂಡೀತು, ಕನ್ನಡಿಗರಿಗೆ ಎಷ್ಟು ಸ್ಥಾನ ಸಿಕ್ಕೀತು ಎಂಬುದೆಲ್ಲ ಆರ್‌ಸಿಬಿ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದ ಸಂಗತಿಗಳು.

Advertisement

ಇದಕ್ಕೀಗ ಉತ್ತರ ಸಿಕ್ಕಿದೆ. ಹರಾಜಿಗೂ ಮುನ್ನ ಐವರು ಆಟಗಾರರನ್ನು ಬಿಟ್ಟು ಕೊಟ್ಟಿದ್ದ ಆರ್‌ಸಿಬಿ, ಇದರ ಬದಲು 7 ಆಟಗಾರರನ್ನು ಖರೀದಿಸಿದೆ. ಇವರಲ್ಲಿ ಸ್ಟಾರ್‌ ಆಟಗಾರರ್ಯಾರೂ ಇಲ್ಲ. ತನ್ನಲ್ಲಿ ಬ್ಯಾಕ್‌ಅಪ್‌ ಆಟಗಾರರಿಲ್ಲ ಎಂಬ ಕೊರತೆ ನೀಗಿಸಿಕೊಳ್ಳಲು ಮುಂದಾ ಯಿತು. ಆರ್‌ಸಿಬಿಯಲ್ಲಿರುವ ಕರ್ನಾಟ ಕದ ಏಕೈಕ ಕ್ರಿಕೆಟಿಗನೆಂದರೆ ಮನೋಜ್‌ ಭಾಂಡಗೆ. ತಂಡದಲ್ಲಿ ಕನ್ನಡಿಗರಿಲ್ಲ ಎಂಬ ಕೊರತೆಯನ್ನು ಅಷ್ಟರ ಮಟ್ಟಿಗೆ ನೀಗಿಸಿಕೊಂಡಿದೆ.

ಪರ್ಸ್‌ನಲ್ಲಿದ್ದದ್ದು ಕೇವಲ 8.75 ಕೋಟಿ ರೂ. ಆದ್ದರಿಂದ ಆರ್‌ಸಿಬಿ ಸ್ಟಾರ್‌ ಆಟಗಾರರನ್ನು ಆರಿಸುವ ಸ್ಥಿತಿಯಲ್ಲಿರಲಿಲ್ಲ. ಹೀಗಾಗಿ ಗಾಯಾಳು ಆಟಗಾರರ ಸಮಸ್ಯೆಯನ್ನು ಅರಿತು ಸೂಕ್ತ ಬ್ಯಾಕ್‌ಅಪ್‌ ಕ್ರಿಕೆಟಿಗರು ತಂಡದಲ್ಲಿರಲಿ ಎಂಬ ನಿರ್ಧಾರಕ್ಕೆ ಬಂತು. ಸದ್ಯದ ಮಟ್ಟಿಗೆ ಇದೊಂದು ಜಾಣ ಹಾಗೂ ಎಚ್ಚರಿಕೆಯ ನಡೆ. ಶುಕ್ರವಾರದ ಹರಾಜಿನ ಬಳಿಕ ತಂಡದ ಆಟಗಾರರ ಸಂಖ್ಯೆ 25ಕ್ಕೆ ಏರಿತು.

ಆದರೂ ಇಲ್ಲಿ ಪ್ರಮುಖ ಇಬ್ಬರು ಆಟಗಾರರನ್ನು ಆರ್‌ಸಿಬಿ ತನ್ನ ತೆಕ್ಕೆಗೆ ಹಾಕಿಕೊಳ್ಳಲು ಯಶಸ್ವಿಯಾಯಿತು. ಇವರೆಂದರೆ, ಇಂಗ್ಲೆಂಡ್‌ನ‌ ಎಡಗೈ ವೇಗಿ ರೀಸ್‌ ಟಾಪ್ಲಿ (1.9 ಕೋ.ರೂ.) ಮತ್ತು ಇದೇ ನಾಡಿನ ಆಲ್‌ರೌಂಡರ್‌ ವಿಲ್‌ ಜಾಕ್ಸ್‌ (2 ಕೋ.ರೂ.). ಇಲ್ಲಿಗೆ 3.9 ಕೋಟಿ ರೂ. ಕೈಬಿಟ್ಟಿತು.

ಉಳಿದ ಮೊತ್ತದಿಂದ ರಾಜ್ಯದವರೇ ಆದ ಮನೋಜ್‌ ಭಾಂಡಗೆ ಅವರನ್ನು 20 ಲಕ್ಷ ರೂ. ಮೂಲಬೆಲೆಗೆ ಖರೀದಿಸಿತು. ಜತೆಗೆ ಹಿಮಾಂಶು ಶರ್ಮ (20 ಲ.ರೂ.), ಸೋನು ಯಾದವ್‌ (20 ಲ.ರೂ.), ಅವಿನಾಶ್‌ ಸಿಂಗ್‌ (60 ಲ.ರೂ.) ಮತ್ತು ರಾಜನ್‌ ಕುಮಾರ್‌ (70 ಲ.ರೂ.) ಅವರನ್ನು ಖರೀದಿಸಿತು. ಇವರೆಲ್ಲ ಆರ್‌ಸಿಬಿಯಲ್ಲಿ ಕಾಣಿಸಿಕೊಂಡದ್ದು ಇದೇ ಮೊದಲು.

Advertisement

ಸಂಭಾವ್ಯ ತಂಡ
ಹಾಗಾದರೆ ಆರ್‌ಸಿಬಿಯ ಸಂಭಾವ್ಯ ಇಲೆವೆನ್‌ ಹೇಗಿದ್ದೀತು? ಕುತೂಹಲ ಸಹಜ.ಆರಂಭಿಕರಾಗಿ ನಾಯಕ ಫಾ ಡು ಪ್ಲೆಸಿಸ್‌, ವಿರಾಟ್‌ ಕೊಹ್ಲಿ ಬ್ಯಾಟ್‌ ಹಿಡಿದು ಬರುವುದರಲ್ಲಿ ಅನುಮಾನವಿಲ್ಲ. ಮುಂದಿನೆರಡು ಸ್ಥಾನ ಬಿಗ್‌ ಹಿಟ್ಟರ್‌ಗಳಾದ ರಜತ್‌ ಪಾಟಿದಾರ್‌ ಮತ್ತು ಗ್ಲೆನ್‌ ಮ್ಯಾಕ್ಸ್‌ವೆಲ್‌ ಪಾಲಾಗಲಿದೆ. ಆಲ್‌ರೌಂಡರ್‌ ವಿಲ್‌ ಜಾಕ್ಸ್‌, ಕೀಪರ್‌ ದಿನೇಶ್‌ ಕಾರ್ತಿಕ್‌ 5-6ನೇ ಕ್ರಮಾಂಕದಲ್ಲಿ ಬಂದು ಫಿನಿಶಿಂಗ್‌ ಜವಾಬ್ದಾರಿಯನ್ನು ವಹಿಸಬೇಕಿದೆ.

ಅವಳಿ ಸ್ಪಿನ್ನರ್‌ಗಳ ಸ್ಥಾನ ವನಿಂದು ಹಸರಂಗ, ಶಾಬಾಜ್‌ ಅಹ್ಮದ್‌ಗೆ ಮೀಸಲು. ಆದರೆ ಆಸೀಸ್‌ ವೇಗಿ ಜೋಶ್‌ ಹೇಝಲ್‌ವುಡ್‌ ಈ ಸಲ ಆಡುವರೋ ಇಲ್ಲವೋ ಎಂಬುದು ಇನ್ನೂ ಖಾತ್ರಿಯಾಗಿಲ್ಲ. ಇವರು ಆಡದೇ ಹೋದರೆ ಅದು ಆರ್‌ಸಿಬಿಗೆ ದೊಡ್ಡ ಹಿನ್ನಡೆ.

ಆರ್‌ಸಿಬಿ ತಂಡ
ಫಾ ಡು ಪ್ಲೆಸಿಸ್‌ (ನಾಯಕ), ವಿರಾಟ್‌ ಕೊಹ್ಲಿ, ರಜತ್‌ ಪಾಟಿದಾರ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ದಿನೇಶ್‌ ಕಾರ್ತಿಕ್‌, ಮಹಿಪಾಲ್‌ ಲೊನ್ರೋರ್‌, ಫಿನ್‌ ಅಲೆನ್‌, ಅನುಜ್‌ ರಾವತ್‌, ಡೇವಿಡ್‌ ವಿಲ್ಲಿ, ಸುಯಶ್‌ ಪ್ರಭುದೇಸಾಯಿ, ವನಿಂದು ಹಸರಂಗ, ಜೋಶ್‌ ಹೇಝಲ್‌ವುಡ್‌, ಹರ್ಷಲ್‌ ಪಟೇಲ್‌, ಶಾಬಾಜ್‌ ಅಹ್ಮದ್‌, ಮೊಹಮ್ಮದ್‌ ಸಿರಾಜ್‌, ಸಿದ್ಧಾರ್ಥ್ ಕೌಲ್‌, ವಿಲ್‌ ಜಾಕ್ಸ್‌, ಹಿಮಾಂಶು ಶರ್ಮ, ಮನೋಜ್‌ ಭಾಂಡಗೆ, ಅವಿನಾಶ್‌ ಸಿಂಗ್‌, ಸೋನು ಯಾದವ್‌, ಆಕಾಶ್‌ದೀಪ್‌, ರಾಜನ್‌ ಕುಮಾರ್‌, ರೀಸ್‌ ಟಾಪ್ಲಿ, ಕಣ್‌ ಶರ್ಮ.

Advertisement

Udayavani is now on Telegram. Click here to join our channel and stay updated with the latest news.

Next