Advertisement
ಇದು ಮುಂಬೈಗೆ ತವರಿನ ಪಂದ್ಯವಾದರೂ ಆರ್‌ಸಿಬಿಗೆ ಸೇಡಿನ ಪಂದ್ಯ. ಮೊದಲ ಸುತ್ತಿನ ಮುಖಾಮುಖೀಯಲ್ಲಿ ಆರ್‌ಸಿಬಿ ತವರಿನ ಚಿನ್ನಸ್ವಾಮಿ ಅಂಗಳದಲ್ಲಿ ಕೇವಲ 6 ರನ್ನುಗಳಿಂದ ಎಡವಿತ್ತು. ಎಬಿಡಿ ಕ್ರೀಸಿನಲ್ಲಿದ್ದರೂ ಗೆಲುವು ಮರೀಚಿಕೆ ಆಗಿತ್ತು. ಲಸಿತ ಮಾಲಿಂಗ ಅವರ ಕೊನೆಯ ಎಸೆತ ನೋಬಾಲ್ ಆಗಿದ್ದರೂ ಅಂಪಾಯರ್ ಮೌನ ವಹಿಸುವ ಮೂಲಕ ವಿವಾದಕ್ಕೆ ಕಾರಣರಾಗಿದ್ದರು. ಇದಕ್ಕೆಲ್ಲ ಸೇಡು ತೀರಿಸಿಕೊಳ್ಳಲು ಆರ್‌ಸಿಬಿಗೆ ಇದು ಪ್ರಶಸ್ತ ಸಮಯ.
ಗೆದ್ದರೂ ಸಮಸ್ಯೆ ಇದೆ… ಸತತ ಸೋಲಿನಿಂದ ಹೊರಬಂದಿರುವ ಆರ್‌ಸಿಬಿಗೆ ಶನಿವಾರದ ಗೆಲುವು ಸ್ಫೂರ್ತಿ ಆಗಬೇಕಿದೆ. ಜತೆಗೆ ಸೇಡು ತೀರಿಸುವ ಛಲ ಮೂಡಬೇಕಿದೆ. ತಂಡದ ಅಗ್ರ ಕ್ರಮಾಂಕದ ಬ್ಯಾಟಿಂಗ್ ಬಲಿಷ್ಠವಾಗಿದೆ. ಮಿಡ್ಲ್ ಆರ್ಡರ್ ಬ್ಯಾಟಿಂಗ್‌ನಲ್ಲಿ ನಂಬಿಕೆ ಸಾಲದು. ಬೌಲಿಂಗ್ ಘಾತಕವಲ್ಲ. ಫೀಲ್ಡಿಂಗ್ ತೀರಾ ಕಳಪೆ. ಸುಲಭದ ಕ್ಯಾಚ್‌ಗಳನ್ನು ಕೈಚೆಲ್ಲುತ್ತಿರುವುದು ಹವ್ಯಾಸವೇ ಆಗಿದೆ. ಈ ತಪ್ಪನ್ನು ತಿದ್ದಿಕೊಂಡಲ್ಲಿ ಆರ್‌ಸಿಬಿಗೆ ಗೆಲುವು ಕಷ್ಟವಲ್ಲ.