Advertisement

RC: ಹೆಜಮಾಡಿ ಟೋಲ್‌ನಲ್ಲಿ ಆ.31ರೊಳಗೆ ಸ್ಥಳೀಯ ವಾಹನಗಳ ಆರ್‌. ಸಿ. ಪ್ರತಿ ಒದಗಿಸಲು ಅವಕಾಶ

06:04 PM Aug 09, 2024 | Team Udayavani |

ಪಡುಬಿದ್ರಿ: ಹೆಜಮಾಡಿಯ ಕೆ. ಕೆ. ಆರ್‌. ಟೋಲ್‌ ಪ್ಲಾಝಾದಲ್ಲಿ ವಿನಾಯಿತಿ ಹೊಂದಿರುವ ಸ್ಥಳೀಯ ವಾಹನಗಳ ಮಾಲಕರು ವಾಹನದ ಆರ್‌. ಸಿ. ಪ್ರತಿ ಸಲ್ಲಿಸಲು ಆ. 31 ಅಂತಿಮ ದಿನವಾಗಿದೆ.

Advertisement

ಆ. 6ರಂದು ಬಂಟ್ವಾಳದ ಯುವಕನೊಬ್ಬ ದಾಂಧಲೆ ನಡೆಸಿದ ಘಟನೆ ಬಳಿಕ ಟೋಲ್‌ ಮುಖ್ಯಸ್ಥರು ವಿನಾಯಿತಿ ಹೊಂದಿದ ಸ್ಥಳೀಯ ವಾಹನಗಳ ದಾಖಲೆ ಸಂಗ್ರಹಕ್ಕೆ ಮುಂದಾಗಿದ್ದರು. ಈ ಸಂದರ್ಭ ಜುಲೈ„ ತಿಂಗಳೊಂದರಲ್ಲೆ 2000ಕ್ಕೂ ಅಧಿಕ ಹೊಸ ಸ್ಥಳೀಯ ವಾಹನಗಳು ಟೋಲ್‌ ವಿನಾಯಿತಿ ಪಡೆದ ಮಾಹಿತಿ ಲಭ್ಯವಾಗಿತ್ತು.

ಈ ಹಿನ್ನೆಲೆಯಲ್ಲಿ ಸಂಪೂರ್ಣ ಟೋಲ್‌ ವಿನಾಯಿತಿ ಹೊಂದಿರುವ ಸ್ಥಳೀಯ ವಾಹನಗಳು ತಮ್ಮ ಆರ್‌. ಸಿ. ಪ್ರತಿಯೊಂದನ್ನು ಟೋಲ್‌ ಕಛೇರಿಯಲ್ಲಿ ಆ. 10ರೊಳಗೆ ನೀಡುವಂತೆ ಬ್ಯಾನರ್‌ ಮೂಲಕ ಮಾಹಿತಿ ನೀಡಿತ್ತು.

ಈ ಬಗ್ಗೆ ಸ್ಥಳೀಯರೆಲ್ಲರಿಗೂ ಮಾಹಿತಿ ಲಭ್ಯವಾಗದ ಹಿನ್ನೆಲೆಯಲ್ಲಿ ಆ. 9 ಶುಕ್ರವಾರ ಸಂಜೆ ಟೋಲ್‌ ವಿರೋಧಿ ಹೋರಾಟ ಸಮಿತಿಯು ಅಧ್ಯಕ್ಷ ಶೇಖರ್‌ ಹೆಜ್ಮಾಡಿ ನೇತೃತ್ವದಲ್ಲಿ ಟೋಲ್‌ ಮ್ಯಾನೇಜರ್‌ ತಿಮ್ಮಯ್ಯ ಎ. ಎಸ್‌. ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿತು.

ಈ ಸಂದರ್ಭ ಮಾತನಾಡಿದ ತಿಮ್ಮಯ್ಯ ಅವರು, ಜಿಲ್ಲಾಡಳಿತ ತಿಳಿಸಿದಂತೆ ಹಿಂದಿನಂತೆ ಸ್ಥಳೀಯ ವಾಹನಗಳಿಗೆ ವಿನಾಯಿತಿ ನೀಡಲು ನಮ್ಮ ಸಂಸ್ಥೆ ಬದ್ಧವಾಗಿದೆ. ಅದರೆ ಹೆಜಮಾಡಿ ಗ್ರಾಮವೊಂದರಲ್ಲೇ 2000ಕ್ಕೂ ಹೊಸ ವಾಹನಗಳು ಜುಲೈ ತಿಂಗಳಲ್ಲಿ ಟೋಲ್‌ನಲ್ಲಿ ಸಂಚರಿಸಿದೆ. ಈ ಪೈಕಿ ಹೆಚ್ಚು ನಕಲಿ ದಾಖಲೆಗಳಾಗಿವೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ವಾಹನಗಳು ಆರ್‌. ಸಿ. ಪ್ರತಿ ಒದಗಿಸಿದರೆ ಕಂಪ್ಯೂಟರ್‌ ಮೂಲಕ ದಾಖಲೆ ಸಂಗ್ರಹಿಸಿ ಅರ್ಹರಿಗೆ ವಿನಾಯಿತಿ ನೀಡಲು ಸಾಧ್ಯವಾಗುತ್ತದೆ. ಹಾಗಾಗಿ ಸಮಿತಿಯ ಬೇಡಿಕೆ ಹಿನ್ನೆಲೆಯಲ್ಲಿ ದಾಖಲೆ ಪ್ರತಿ ಒದಗಿಸಲು ಆ. 31ರವರೆಗೆ ಅವಕಾಶ ಕಲ್ಪಿಸಲಾಗುವುದು ಎಂದವರು ಹೇಳಿದರು.

Advertisement

ಈ ಸಂದರ್ಭ ಟೋಲ್‌ ಪ್ಲಾಝಾದಲ್ಲಿ ಸ್ಥಳೀಯ ನೌಕರರ ಬಗ್ಗೆ ಶೇಖರ್‌ ಹೆಜಮಾಡಿ ಮೌಖೀಕ ಮನವಿ ಸಲ್ಲಿಸಿ ಸ್ಥಳೀಯರಿಗೆ ಉದ್ಯೋಗ ನೀಡುವ ಜತೆಗೆ ಭದ್ರತೆಯನ್ನೂ ಒದಗಿಸುವಂತೆ ವಿನಂತಿಸಿದರು.

ಸಮಿತಿಯ ಪದಾಧಿಕಾರಿಗಳಾದ ಪಾಂಡುರಂಗ ಕರ್ಕೇರ, ಮಧು ಅಚಾರ್ಯ ಮೂಲ್ಕಿ, ಸುಧೀರ್‌ ಕರ್ಕೇರ, ತೇಜಪಾಲ್‌ ಸುವರ್ಣ, ಸಂತೋಷ್‌ ಪಡುಬಿದ್ರಿ, ರಮೀಝ್ ಹುಸೈನ್‌, ಖಾದರ್‌ ಹೆಜ್ಮಾಡಿ, ಪ್ರಾಣೇಶ್‌ ಹೆಜ್ಮಾಡಿ, ವಿಕ್ರಮ್‌ರಾಜ್‌ ಸುವರ್ಣ, ಅಹಮ್ಮದ್‌ ಕಬೀರ್‌, ಅಬ್ದುಲ್‌ ರೆಹ್ಮಾನ್‌, ಹನೀಫ್‌ ಕನ್ನಂಗಾರ್‌, ಕಾಸಿಮ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next