Advertisement

ಶೇ. 0.50 ಹೆಚ್ಚಳದಿಂದ ಬಡ್ಡಿದರ ಶೇ. 5.90ಕ್ಕೆ; ಹಬ್ಬದ ಸಂಭ್ರಮಕ್ಕೆ ಬಡ್ಡಿಯ ಸಿಹಿ-ಕಹಿ

12:00 AM Oct 01, 2022 | Team Udayavani |

ಮುಂಬಯಿ: ಸಾಲಗಾರರಿಗೆ ಮತ್ತು ಠೇವಣಿದಾರರಿಗೆ ನವರಾತ್ರಿ ಮತ್ತು ದೀಪಾವಳಿ ಹಬ್ಬದ ಸನಿಹದಲ್ಲಿ ಸಿಹಿ ಮತ್ತು ಕಹಿ ಸುದ್ದಿ ಇಲ್ಲಿದೆ. ನಿರೀಕ್ಷೆ ಯಂತೆ ಆರ್‌ಬಿಐ ಸತತ 4ನೇ ಬಾರಿಗೆ ರೆಪೋ ದರವನ್ನು ಶೇ. 0.50 (50 ಬೇಸಿಸ್‌ ಪಾಯಿಂಟ್ಸ್‌) ಏರಿಸಿದೆ.

Advertisement

ಮುಂಬಯಿಯಲ್ಲಿ ನಡೆದ ಆರು ಸದಸ್ಯರಿರುವ ವಿತ್ತೀಯ ನೀತಿ ಪರಿಶೀಲನಾ ಸಮಿತಿ (ಎಂಪಿಸಿ) ಸಭೆ ಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದಾಗಿ ಬಡ್ಡಿದರ ಶೇ.5.90 ಆಗಿದೆ. 2019ರ ಎಪ್ರಿಲ್‌ ಬಳಿಕ ಇದು ಗರಿಷ್ಠ ಪ್ರಮಾಣದ್ದು.

ಇನ್ನು ಗೃಹ, ವಾಹನ ಮತ್ತು ವೈಯಕ್ತಿಕ ಸಾಲಗಳ ಮೇಲಿನ ಬಡ್ಡಿದರ ಹಾಗೂ ಇಎಂಐ ಮೊತ್ತ ಏರಲಿದೆ. ಜತೆಗೆ ಬ್ಯಾಂಕ್‌ಗಳಲ್ಲಿ ವಿವಿಧ ಠೇವಣಿಗಳ ಮೇಲಿನ ಬಡ್ಡಿದರವೂ ಏರಿಕೆಯಾಗಲಿದೆ.

ಜಗತ್ತಿನಲ್ಲಿ ಸದ್ಯ ಉಂಟಾಗಿರುವ ರಾಜಕೀಯ ತಲ್ಲ ಣಗಳು ಮುಂದುವರಿಯುವ ಸಾಧ್ಯತೆ ಇದ್ದು, ಹಣ ದುಬ್ಬರ, ಬೆಲೆ ಏರಿಕೆ ಮುಂದುವರಿಯಲಿದೆ. ಅದನ್ನು ತಡೆಯಲು ಈ ನಿರ್ಧಾರ ಅನಿವಾರ್ಯ ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ತಿಳಿಸಿದ್ದಾರೆ.

ವಿವಿಧ ವಸ್ತುಗಳ ಪೂರೈಕೆಯ ಸರಪಣಿಯ ಮೇಲೆ ಬಾಧಕವಾಗಲಿದ್ದು, ಚಿಲ್ಲರೆ ಮಾರುಕಟ್ಟೆ ಆಧಾರಿತ ಹಣದುಬ್ಬರ ಪ್ರಮಾಣ ಹೆಚ್ಚಿಸುವ ಸಾಧ್ಯತೆ ಇದೆ. ಸದ್ಯ ಕಚ್ಚಾ ತೈಲದ ಬೆಲೆ ಅಲ್ಪ ತಗ್ಗಿದೆ. ಇನ್ನಷ್ಟು ಇಳಿದರೆ ಕೊಂಚ ನಿಟ್ಟುಸಿರು ಬಿಡಬಹುದು ಎಂದರು.

Advertisement

ಆರ್ಥಿಕ ಬೆಳವಣಿಗೆ ದರ ಇಳಿಕೆ
ಮಹತ್ವದ ನಿರ್ಧಾರದಲ್ಲಿ ಪ್ರಸಕ್ತ ವಿತ್ತೀಯ ವರ್ಷಕ್ಕಾಗಿ ದೇಶದ ಅರ್ಥ ವ್ಯವಸ್ಥೆಯ ಬೆಳವಣಿಗೆಯ ನಿರೀಕ್ಷಿತ ದರವನ್ನು ಶೇ.7.2ರಿಂದ ಶೇ.7ಕ್ಕೆ ಇಳಿಸಲಾ ಗಿದೆ. ರಷ್ಯಾ-ಉಕ್ರೇನ್‌ ಯುದ್ಧದಿಂದ ಉಂಟಾಗಿರುವ ಸರಣಿ ಸಂಕಟಗಳೇ ಇದಕ್ಕೆ ಕಾರಣ ಎಂದಿದ್ದಾರೆ.

ಏಳು ದಿನಗಳ ನಷ್ಟಕ್ಕೆ ಕೊನೆ
ರೆಪೋ ದರ ಹೆಚ್ಚಳವಾಗುತ್ತಿದ್ದಂತೆಯೇ ಬಿಎಸ್‌ಇನಲ್ಲಿ ಸೂಚ್ಯಂಕ ಏರಿಕೆಯಾಗಿದೆ. ದಿನಾಂತ್ಯಕ್ಕೆ ಸೂಚ್ಯಂಕ 1,016.90 ಪಾಯಿಂಟ್ಸ್‌ ಏರಿಕೆಯಾಗಿ 57,426.92ರಲ್ಲಿ ಮುಕ್ತಾಯವಾಗಿದೆ. ಮಧ್ಯಂತರದಲ್ಲಿ 1,312.67 ಪಾಯಿಂಟ್ಸ್‌ ವರೆಗೆ ಪುಟಿದೆದ್ದು, 57,722.63ರ ವರೆಗೆ ಏರಿಕೆಯಾಗಿತ್ತು. ನಿಫ್ಟಿ ಸೂಚ್ಯಂಕ ಕೂಡ 276.25 ಪಾಯಿಂಟ್ಸ್‌ ಏರಿಕೆಯಾಗಿ 17,094.35ರಲ್ಲಿ ವಹಿವಾಟು ಕೊನೆಗೊಳಿಸಿತು.

ಐರೋಪ್ಯ ಒಕ್ಕೂಟಗಳ ಮಾರುಕಟ್ಟೆಯಲ್ಲಿ ಕೂಡ ಸೂಚ್ಯಂಕ ತೃಪ್ತಿದಾಯಕವಾಗಿದೆ. ಹೀಗಾಗಿಯೇ, ಸೂಚ್ಯಂಕ ಕೂಡ ಏರಿಕೆಯಾಗಿದೆ. ವಾರದ ಸೂಚ್ಯಂಕ ಲೆಕ್ಕಾಚಾರ ನೋಡುವುದಿದ್ದರೆ ಬಿಎಸ್‌ಇನಲ್ಲಿ 672 ಪಾಯಿಂಟ್ಸ್‌, ನಿಫ್ಟಿಯಲ್ಲಿ 233 ಪಾಯಿಂಟ್ಸ್‌ ನಷ್ಟ ಉಂಟಾಗಿದೆ. ಸಿಯೋಲ್‌, ಟೋಕೊÂà, ಶಾಂಘೈನಲ್ಲಿ ಮಾರುಕಟ್ಟೆ ವಹಿವಾಟು ತೃಪ್ತಿದಾಯಕವಾಗಿರಲಿಲ್ಲ.

ಡಾಲರ್‌ ಎದುರು 37 ಪೈಸೆ ಏರಿಕೆ
ಅಮೆರಿಕದ ಡಾಲರ್‌ ಎದುರು ರೂಪಾಯಿ 37 ಪೈಸೆ ಏರಿಕೆಯಾಗಿದೆ. ಹೀಗಾಗಿ, ದಿನದ ಅಂತ್ಯಕ್ಕೆ 81.36 ರೂ.ಗೆ ವಹಿವಾಟು ಮುಕ್ತಾಯವಾಗಿದೆ. ಅಂತರ್‌ ಬ್ಯಾಂಕ್‌ ವಹಿವಾಟಿನಲ್ಲಿ ಡಾಲರ್‌ ಎದುರು ರೂಪಾಯಿ 81.60 ರೂ.ಗಳಿಗೆ ವಹಿವಾಟು ಆರಂಭಿ ಸಿತ್ತು. ಮಧ್ಯಂತರದಲ್ಲಿ ಅದು 81.17 ರೂ. ವರೆಗೆ ಹೆಚ್ಚಿತ್ತು. ಗುರುವಾರದ ವಹಿವಾಟಿನ ಅಂತ್ಯಕ್ಕೆ 20 ಪೈಸೆ ಏರಿಕೆಯಾಗಿ 81.73ರೂ. ವಹಿವಾಟು ಮುಕ್ತಾಯಗೊಳಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next